50 ಲಕ್ಷ ಕ್ಕಿಂತ ಅಧಿಕ ಹಣ ಲೂಟಿ ನಿರಣಾ ಗ್ರಾಮ ಪಂಚಾಯತ್ ಪಿಡಿಓ ಅಶ್ವಿನಿ ಸೇವೆಯಿಂದ ಅಮಾನತ್ತು…!!!

Listen to this article

50 ಲಕ್ಷ ಕ್ಕಿಂತ ಅಧಿಕ ಹಣ ಲೂಟಿ ನಿರಣಾ ಗ್ರಾಮ ಪಂಚಾಯತ್ ಪಿಡಿಓ ಅಶ್ವಿನಿ ಸೇವೆಯಿಂದ ಅಮಾನತ್ತು ಜಿಲ್ಲಾ ಪಂಚಾಯತ್ ಸಿಇಓ ಗಿರೀಶ್ ಆದೇಶ

50 ಲಕ್ಷ ಕ್ಕೀಂತ ಅಧಿಕ ಹಣ ಲೂಟಿ ನಿರಣಾ ಗ್ರಾಮ ಪಂಚಾಯತ್ ಪಿಡಿಯೋ ಅಶ್ವಿನಿ ಸೇವೆಯಿಂದ ಅಮಾನತ್ತು ಜಿಲ್ಲಾ ಪಂಚಾಯತ್ ಸಿಇಓ ಗಿರೀಶ್ ಆದೇಶ ನಿರಣಾ ಗ್ರಾಮ ಪಂಚಾಯತಿಯಿಂದ ಅಮಾನತ್ತು ಪಿಡಿಓ ಅಶ್ವಿನಿ
ಬೀದರ್ ಜಿಲ್ಲೆಯ ನಿರಣಾ ಗ್ರಾಮ ಪಂಚಾಯತ ಪಿಡಿಓ ಕರ್ತವ್ಯದಲ್ಲಿ ಮಾಡಬಾರದ್ದು ಮಾಡಿ ಅಕ್ರಮ ಸಾಬೀತಾದ ಹಿನ್ನಲೆಯಲ್ಲಿ ಅಮಾನತ್ತಾಗಿದ್ದಾರೆ.ಕಳೆದ 2023-24ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿ ದಿನಾಂಕ.22.09.23 ರಂದು 9,94,829/-ದಿನಾಂಕ:02-03-2024ರಂದು ರೂ.15,38,366/- ದಿನಾಂಕ;04-04-2024ರಮದು 10,21,091/- ದಿನಾಂಕ;04-04-2024ರಂದು 14,70,341/-

ಒಟ್ಟು 2023-24ನೇ ಸಾಲಿನ 15 ಹಣಕಾಸು ಯೋಜನೆ ಅಡಿಯಲ್ಲಿ ನಿರಣಾ ಗ್ರಾಪಂ ಗೆ 50,24,627 ರೂ ಜಮೆ ಯಾಗಿರುತ್ತವೆ.ಇಷ್ಟೋಂದು ಹಣ ಗ್ರಾಮ ಪಂಚಾಯತಿ ಖಾತೆಗೆ ಬಂದಾಗ ಗ್ರಾಮದ ಸದಸ್ಯರಿಗೆ ವಿಶ್ವಾಸಕ್ಕೆ ಪಡೆದು ಒಂದಿಷ್ಟು ಅಭಿವೃದ್ದಿ ಮಾಡಿದ್ದರೆ ಈ ಪಿಡಿಓ ಗ್ರಾಮ ಪಂಚಾಯಿತಿ ಸದಸ್ಯರ ಪಾಲಿಗೆ ಅಭಿವೃದ್ದಿ ದೇವತೆಯಾದ್ರು ಆಗುತ್ತಿದ್ದಳು.ಆದ್ರೆ ಹಣ ಇರೋದೆ ಲೂಟಿ ಮಾಡೋಕ್ಕೆ ಅನ್ನೋ ಹಾಗೆ ಕೆಲವೇ ಕೆಲವು ದಿನಗಳ ಅಂತರದಲ್ಲಿ ಬಂದ ಹಣವೆಲ್ಲಾ ಕೊಳ್ಳೆ ಹೊಡೆದ ಪಿಡಿಓ ಮಾತ್ರ ತಾನು ಅಮಾನತ್ತು ಆಗುತ್ತೆನೆ ಅಂತಾ ಅಂದುಕೊಂಡಿರಲಿಲ್ಲ.

ದಿನಾಂಕ 22-09-2023 ರ.ದು ಜಮೆಯಾದ ಕಂತಿನಲ್ಲಿ 9.94 ಲಕ್ಷ ರೂ. ಕ್ರಿಯಾ ಯೋಜನೆ ಸಾಮಾನ್ಯ ಸಭೆಯಲ್ಲಿ ಅನುಮತಿ ಪಡೆಯದೆ ಖರ್ಚು ಮಾಡಿದ್ದಾರೆ.15 ನೇ ಹಣಕಾಸು ಯೋಜನೆಯ ಬ್ಯಾಂಕ್ ಸ್ಟೆಟಮೆಂಟ್ ನಿಂದ ಹಾಗೂ ಈ-ಗ್ರಾಮ ಸ್ವರಾಜ್ ಆನ್ ಲೈನ್ ಪೋರ್ಟ್ ಲ್ ನಿಂದ ಕಂಡು ಬಂದಿದೆ.

2023-24ನೇ ಸಾಲಿನ ಸರ್ಕಾರದ ಮಾರ್ಗಸೂಚಿಗಳನ್ನ ಉಲ್ಲಂಘನೆ ಮಾಡಿ ಖರ್ಚು ಮಾಡಿದ್ದು ಕಂಡು ಬಂದಿದೆ.

ಇನ್ನು 2023-24ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನವನ್ನು ಕ್ರಿಯಾ ಯೋಜನೆಯಲ್ಲಿರುವ ಮೀಸಲು ಮೊತ್ತಕ್ಕಿಂತ ಅಧೀಕ ಮೊತ್ತಕ್ಕೆ ಬಿಲ್ಲು ಸೃಷ್ಟಿಸಿ ಪಾವತಿಸಿರುವುದು ಹಾಗೂ ಸದರಿ ಬಿಲ್ ಗಳನ್ನು ಯಾವುದೆ ತರಹದ ಸಿ.ಸಿ. ಎಂ ಬಿ ರೇಕಾರ್ಡ್ ಮಾಡದೆ ನಮೂನೇ 26 ರ ಮೇಲೆ ಗುತ್ತಿಗೆದಾರರ/ಏಜೆನ್ಸಿಗಳಿಗೆ ಹಣ ಪಾವತಿಸಿರುವುದು ಕಂಡು ಬಂದಿದೆ.ಹಅಗೂ ಸದರಿ ಬಿಲ್ ಗಳಲ್ಲಿ ಸರ್ಕಾರಕ್ಕೆ ಭರಿಸಬೇಕಾದ ಜಿ.ಎಸ್ .ಟಿ ಎಲ್.ಬಿ.ಎಫ್.ಸಿ.ಬಿ.ಎಫ್ ಕಟಾವುಗೊಳಿಸಿರುವುದು ಕಂಡು ಬಂದಿಲ್ಲ.

ಇನ್ನು 2023-24ನೇ ಸಾಲಿನಲ್ಲಿ 15 ನೇ ಹಣಕಾಸು ಯೋಜನೆಯ ಮೊದಲ ಕಂತಿನ ರೂ.9,94,829/-ರೂ.ಖರ್ಚು ಮಾಡಿದ ಸಂಪೂರ್ಣ ಬಿಲ್ ಗಳು ಗ್ರಾಮ ಪಂಚಾಯಿತಿಯಲ್ಲಿ ಕಾಣೆಯಾಗಿವೆ.ಜೊತೆಗೆ ಪಾವತಿ ಮಾಡಿರುವ ಬಿಲ್ ಗಳ ಮೇಲೆ ಸಂಬಂಧ ಪಟ್ಟ ಅಧಿಕಾರಿ/ ಅಧ್ಯಕ್ಷರ ಸಹಿ ಇಲ್ಲದೆ ಪಾವತಿಸಿದ್ದಾರೆ..!!

2023-24ನೇ ಸಾಲಿನ 15ನೇ ಹಣಕಾಸು ಯೋಜಣೆ ಅಡಿಯಲ್ಲಿ ಮೂರು ಕಂತುಗಳಲ್ಲಿ ಜಮೆಯಾದ ಮೊತ್ತ 40,29,798ರೂ.ಯ ಕ್ರಿಯಾ ಯೋಜನೆ ತಯಾರಿಸದೆ ಬಿಡುಗಡೆಯಾದ ಅನುದಾನ ಸರ್ಕಾರದ ಮಾರ್ಗಸೂಚಿ/ಸೂತ್ತೋಲೆಯಂತೆ ತಯಾರಿಸದೆ ಗ್ರಾಮ ಪಂಚಾಯತ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆಯದೆ ಕ್ರಿಯಾ ಯೋಜನೆ ತಮ್ಮ ಇಷ್ಟ ಬಂದಂತೆ ತಯಾರಿಸಿದ್ದು ಕಂಡು ಬಂದಿದೆ.ಈ ಬಗ್ಗೆ ಸದರಿ ಗ್ರಾಮ ಪಂಚಾಯತ ಅಧಿಕಾರಿ ವಿರುದ್ದ ಗ್ರಾಮ ಪಂಚಾಯತ ಸದಸ್ಯರು ದೂರು ದಾಖಲಿಸಿದ್ದರು.ಚುನಾವಣೆ ನೀತಿ ಸಂಹಿತೆ ಜಾರಿಯಿದ್ದರು ದಿನಾಂಕ;06-04-2023ರಂದು ಸಾಮಾನ್ಯ ಸಭೆ ಕರೆದಿರುವುದಾಗಿ ತಿಳಿಸಿ ನಡಾವಳಿಯನ್ನ ಪಾಸು ಮಾಡಿರುತ್ತಾರೆ. ಆದರೆ ಈ ಸಭೆಗೆ ದೂರುದಾರ ಸದಸ್ಯರಿಗೆ ಸಭೆಯ ನೋಟಿಸ್ ಜಾರಿ ಮಾಡಿರುವುದಿಲ್ಲ. 2023-24ರ ಸಾಲಿನ 15 ನೇ ಹಣಕಾಸು ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಒಟ್ಟು ಮೊತ್ತ 50,24,627 ರೂ.ಅನುದಾನದ ಕ್ರಿಯಾ ಯೋಜನೆಯಲ್ಲಿ ಮೀಸಲು ಮೊತ್ತಕ್ಕಿಂತ ಅಧೀಕ ಮೊತ್ತಕ್ಕೆ ಬಿಲ್ಲು ಪಾವತಿಸಿರುವುದು ಹಾಗೂ ಸದರಿ ಬಿಲ್ ಗಳು ಯಾವುದೆ ತರಹದ ಸಿ ಸಿ ಎಂ ಬಿ ರೆಕಾರ್ಡ್ ಮಾಡದೇ ನಮೂನೆ 26ರ ಮೇಲೆ ಗುತ್ತಿಗೆದಾರ/ಏಜೇನ್ಸಿಗಳಿಗೆ ಹಣ ಪಾವತಿಸಿರುವುದು ಕಂಡು ಬಂದಿದೆ.ಪರೀಶಿಲನಾ ವರದಿಯನ್ನ ಆಧರಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯದರ್ಶೀ ಡಾ,ಗಿರೀಶ್ ದಿಲೀಪ್ ಬದೋಲೆಯವರು ಇಲಾಖೆ ವಿಚಾರಣೆ ಕಾಯ್ದಿರಿಸಿ ಶ್ರೀಮತಿ ಅಶ್ವಿನಿ ಗ್ರಾಮ ಪಂಚಾಯತ್ ಪಿಡಿಓ ಅವರನ್ನ ಅಮಾನತ್ತು ಮಾಡಿ ತತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತು ಮಾಡಿ ಆದೇಶ್ ಹೋರಡಿಸಿರುತ್ತಾರೆ.

ಸಧ್ಯ ನಿರ್ಣಾ ಪಿಡಿಓ ಕರ್ಮಕಾಂಡ ಒಂದೋಂದಾಗಿ ಹೊರ ಬರುತ್ತಿದ್ದು ಅವರು ಮಾಡಿರುವ ಅಕ್ರಮಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಅನ್ನುತ್ತೆ ಮೂಲಗಳು…

ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend