ಬೆಳಗಾವಿಯಲ್ಲಿ ಬಾಡಿಗೆ ಮನೆ ಮಾಡಿದ್ದ ಸಂಸದ ಜಗದೀಶ್ ಶೆಟ್ಟರ್ ಇದೀಗ ದಿಢೀರನೆ ಮನೆ ಖಾಲಿ…!!!

Listen to this article

ಬೆಳಗಾವಿ: ವಿರೋಧ ಪಕ್ಷದವರ ಟೀಕೆಗೆ ತಿರುಗೇಟು ನೀಡಲು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಬಾಡಿಗೆ ಮನೆ ಮಾಡಿದ್ದ ಸಂಸದ ಜಗದೀಶ್ ಶೆಟ್ಟರ್ ಇದೀಗ ದಿಢೀರನೆ ಮನೆ ಖಾಲಿ ಮಾಡಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ಬೆಳಗಾವಿ ನಗರದ ಕುಮಾರಸ್ವಾಮಿ ಲೇಔಟ್​ನಲ್ಲಿ ಶೆಟ್ಟರ್ ಬಾಡಿಗೆ ಮನೆಯನ್ನು ಮಾಡಿದ್ದರು.
ಈ ವೇಳೆ ಪತ್ನಿ, ಪುತ್ರ ಸೇರಿ ಕುಟುಂಬ ಸಮೇತ ಬೆಳಗಾವಿಗೆ ಜಗದೀಶ್ ಶೆಟ್ಟರ್ ಶಿಫ್ಟ್ ಆಗಿದ್ದರು. ಯುಗಾದಿ ನಂತರದಲ್ಲಿ ಪೂಜೆಯೊಂದಿಗೆ ಮನೆಯನ್ನು ಪ್ರವೇಶಿಸಿದ್ದರು. ಇದೀಗ ದಿಢೀರ್‌ ಖಾಲಿ ಮಾಡಿದ್ದು, ಶೆಟ್ಟರ್ ವಾಸವಿದ್ದ ಮನೆಯನ್ನು ಮಾಲೀಕ ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಒಂದು ಖಾಯಂ ಮನೆ ನಿರ್ಮಾಣ ಮಾಡುವ ಉದ್ದೇಶದಿಂದ ಸೈಟ್ ನೋಡುತ್ತಿದ್ದೇನೆ. ಆದಷ್ಟು ಬೇಗನೆ ಸೈಟ್ ಖರೀದಿಸಿ, ಮನೆ ಕಟ್ಟುವ ಕೆಲಸ ಆರಂಭಿಸುತ್ತೇನೆ. ಜನರಿಗೆ ಲಭ್ಯವಾಗುವ ನಿಟ್ಟಿನಲ್ಲಿ ವಾರದಲ್ಲಿ ಮೂರ್ನಾಲ್ಕು ದಿನ ಬೆಳಗಾವಿಯಲ್ಲೇ ಇರುವ ಜೊತೆಗೆ ಪ್ರತಿ ತಾಲೂಕಿಗೂ ಭೇಟಿ ನೀಡುವ ಕೆಲಸ ಮಾಡುತ್ತೇನೆ ಎಂದು ಹೇಳಿದರು…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend