ಚುನಾವಣೆ ಆಯೋಗ ನೀಡಿದ ಗುರುತು ಚೀಟಿ ದುಬ್ಲಿಕೆಟ್ ಅಂತ ಪಕ್ಷೇತರ ಅಭ್ಯರ್ಥಿ ಮೇಲೆ ಹಲ್ಲೆ ಮಾಡಿದ ಅವಾಂತರ ಭದ್ರತಾ ವಿಫಲ…!!!

Listen to this article

ಲೋಕಸಭೆ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಯ ಮೇಲೆ ಪೊಲೀಸ್ ಬುದ್ದಿ ತೋರಿಸಿದ ಅಧಿಕಾರಿ, ಚುನಾವಣೆ ಆಯೋಗ ನೀಡಿದ ಗುರುತು ಚೀಟಿ ದುಬ್ಲಿಕೆಟ್ ಅಂತ ಪಕ್ಷೇತರ ಅಭ್ಯರ್ಥಿ ಮೇಲೆ ಹಲ್ಲೆ ಮಾಡಿದ ಅವಾಂತರ ಭದ್ರತಾ ವಿಫಲ?

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ ಚುನಾವಣೆಗೆ ಎಂದು ಸ್ಪರ್ಧಿಸಿದ ಸ್ವತಂತ್ರ ಪಕ್ಷದ ಅಭ್ಯರ್ಥಿಯಾದ ಸನ್ಮಾನ್ಯ ಶ್ರೀ ಮೋಹನ್ ಮೋಟನ್ನವರ್ ಅವರು ವೃತ್ತಿಯಿಂದ ವಕೀಲರು ಹೌದು, ಇವರು ಹಲವು ಬಾರಿ ಲೋಕಸಭಾ ವಿಧಾನಸಭಾ ಚುನಾವಣೆಗಳಿಗೆ ಅನೇಕ ಬಾರಿ ಸ್ಪರ್ಧಿಸಿದ್ದು ಅದರಂತೆ ಈ ಬಾರಿಯೂ ಕೂಡ ಲೋಕಸಭೆ ಚುನಾವಣೆಗೆ ಕಣಕ್ಕೆ ಇಳಿದಿದ್ದರು. ಚುನಾವಣೆ ಮುಗಿದು ದಿನಾಂಕ್ 4 ಜೂನ್ 2024 ರ ಬೆಳಿಗ್ಗೆ 6:45 ನಿಮಿಷಕ್ಕೆ ಮತ ಎಣಿಕೆ ಸಂದರ್ಭದಲ್ಲಿ ಮೋಹನ್ ಆರ್ ಮೋಟನ್ನವರ್ ಅವರು ಅಭ್ಯರ್ಥಿಯಾಗಿ ಮತ ಎಣಿಕೆ ಕೇಂದ್ರ ಪ್ರವೇಶ ಮಾಡುವಾಗ ಪೋಲಿಸ್ ಅಧಿಕಾರಿಗಳಾದ ಶ್ರೀ ವಿ. ಎಸ್ ತಳವಾರ್ ಅವರು ಅಭ್ಯರ್ಥಿಯನ್ನು ಪ್ರವೇಶ ದ್ವಾರದಲ್ಲಿ ತಡೆಹಿಡಿದಿದ್ದರು.

ಅಭ್ಯರ್ಥಿಗಳು ತಕ್ಷಣ ತಮ್ಮ ಗುರುತಿನ ಚೀಟಿ ತೋರಿಸಿದಾಗ ಇದು ನಕಲಿ ಗುರುತಿನ ಚೀಟಿ ಇದೆ ಎಂದು ಅವಮಾನಿಸಿ ಬಟ್ಟೆ ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚುನಾವಣೆ ಆಯೋಗ ನೀಡಿದ ಗುರುತಿನ ಕಾರ್ಡ್ ಅಸಲು ಮತ್ತು ನಕಲು (ದುಬ್ಲಿಕೆಟ್ )ಬಗ್ಗೆ ಸತ್ಯನ್ವೇಷಣೆ ಮಾಡದೇ ನೇರವಾಗಿ ಅಭ್ಯರ್ಥಿಯನ್ನು ಆರೋಪಿಯ ತರ ನೋಡುವದು ಎಷ್ಟು ಸರಿ ಚುನಾವಣೆ ಆಯೋಗದವರು ಈ ಭದ್ರತಾ ಸಿಬ್ಬಂದಿಗಳು ಅಂದರೆ ಪೊಲೀಸ್ ಇಲಾಖೆಯವರಿಗೆ ಅಭ್ಯರ್ಥಿ ಕಾರ್ಡ್, ಚುನಾವಣೆ ಎಜೇಂಟ್ರ ಕಾರ್ಡ್, ಮತ ಏನಿಕೆ ಎಜೇಂಟ್ ಕಾರ್ಡ್ ಬಗ್ಗೆ ಸದರಿಯವರಿಗೆ ತರಬೇತಿ ಕೊಟ್ಟಿಲ್ಲ ಕಾಣುತ್ತೆ ಅಥವಾ ಇವರ ಉದ್ದೇಶ ಪಕ್ಷೇತರ ಅಭ್ಯರ್ಥಿಯನ್ನು ಅವಮಾನ ಮಾಡುವುದು ಅಲ್ಲಿಯೇ ಸ್ಥಳೀಯ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಈ ಘಟನೆಯನ್ನು ನೋಡುತ್ತಾ ನಿಂತಿದ್ದರು ಈ ಸಮಯದಲ್ಲಿ ತಮ್ನ ಸಿಬ್ಬಂದಿಗಳಿಗೆ ಒಂದು ಮಾತು ಹೇಳದೆ ಹಾಗೆ ನೋಡುತ್ತಾ ನಿಂತಿದ್ದರು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ ಘಟನೆ ತಡವಾಗಿ ಬಳಕೆಗೆ ಬಂದಿದೆ.
ಅಲ್ಲದೆ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿಗಳಾದ ಸನ್ಮಾನ್ಯ ಶ್ರೀ ಮೋಹನ್ ಮೋಟನ್ನವರ್ ಅವರು ಕೊಟ್ಟ ಹೇಳಿಕೆಯ ಆಧಾರದ ಮೇಲೆ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದೇವೆ.

ಅಲ್ಲದೆ ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದಿನಾಂಕ 04-06-2024 ರಂದು ಆರ್ ಓ ರವರಿಗೆ ಲಿಖಿತವಾಗಿ ದೂರು ನೀಡಲಾಗಿದೆ.ಮತ್ತು ಅಧಿಕಾರಿಗಳಿಗೆ ದೂರನ್ನು ಕೂಡ ದಾಖಲಿಸಿದ್ದಾರೆ ಆದರೂ ಕೂಡ ಇನ್ನೂವರೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಲಾಖೆ ಕ್ರಮ ಜರುಗಿಸಲು ಮುಂದಾಗಿಲ್ಲಾ , ಅಂದಮೇಲೆ ಪ್ರಜಾಪ್ರಭುತ್ವಕ್ಕೆ ಎಲ್ಲಿದೆ ಬೆಲೆ ಎಂದರ್ಥ.
ಏನೇ ಆಗಲಿ ನೊಂದ ಅಭ್ಯರ್ಥಿ ಸನ್ಮಾನ್ಯ ಶ್ರೀ. ಮೋಹನ್ ಮೋಟನ್ನವರ್ ಅವರಿಗೆ ನ್ಯಾಯ ಸಿಗಲೆಂದು ಮತ್ತು ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಕಾನೂನಿನ ಸುವ್ಯವಸ್ಥೆಯನ್ನು ಕಾಪಾಡಲಿ ಎಂದು ಹಾರೈಸುತ್ತಾ ಮುಂದಿನ ಸುದ್ದಿಯೊಂದಿಗೆ ಮತ್ತೆ ಭೇಟಿಯಾಗೋಣ…

ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend