ರಾಜ್ಯ ಸರ್ಕಾರ ಪಂಚಮಸಾಲಿಗಳಿಗೆ  2A ಮೀಸಲಾತಿ  ನೀಡದೆ ಹೋದಲ್ಲಿ ಪಂಚಮಸಾಲಿ ನಡಿಗೆ ಬೆಳಗಾವಿ  ಕಡೆಗೆ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ…!!!

Listen to this article

ಬೆಂಗಳೂರು: ರಾಜ್ಯ ಸರ್ಕಾರ ಪಂಚಮಸಾಲಿಗಳಿಗೆ  2A ಮೀಸಲಾತಿ  ನೀಡದೆ ಹೋದಲ್ಲಿ ಪಂಚಮಸಾಲಿ ನಡಿಗೆ ಬೆಳಗಾವಿ  ಕಡೆಗೆ ಎಂಬ ಘೋಷ ವಾಕ್ಯದಲ್ಲಿ 10 ಸಾವಿರಕ್ಕೂ ಹೆಚ್ಚು ಪಂಚಮಸಾಲಿಗಳಿಂದ 5 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳೊಂದಿಗೆ ಬೆಳಗಾವಿ ಅಧಿವೇಶನದ  ಮೊದಲ ದಿನ ಅಂದರೆ, ಡಿ.9ರಂದು ಸುವರ್ಣಸೌಧ  ಮುತ್ತಿಗೆ ಹಾಕುತ್ತೇವೆ ಎಂದು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ  ಹೇಳಿದರು.

ನೆಪ ಹೇಳದೇ ಮೀಸಲಾತಿ ಘೋಷಣೆ ಮಾಡಿ

ಬೆಂಗಳೂರಿನ ಗಾಂಧಿಭವನದಲ್ಲಿ ಜರುಗಿದ ಪಂಚಮಸಾಲಿ 2A ಮೀಸಲಾತಿ ಹೋರಾಟ ಹಿನ್ನೆಲೆಯಲ್ಲಿ ಪಂಚಮಸಾಲಿ ಸಮುದಾಯದ ಮುಖಂಡರು ಮತ್ತು ಸಮುದಾಯದ ವಕೀಲರ ಸಂಘದಿಂದ ಹೋರಾಟದ ರೂಪುರೇಷೆ ಚರ್ಚೆಯಾಗಿದ್ದು, ಈ ಸಭೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು, ಹಿಂದಿನ ಮುಖ್ಯಮಂತ್ರಿಗಳು ಸಮಯ ನಿಗದಿ ಮಾಡಿದ್ದರು, ನಿರ್ಧಾರ ತೆಗೆದುಕೊಂಡಿಲ್ಲ. ಹಾಗೂ ಈಗಿನ ಮುಖ್ಯಮಂತ್ರಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಮಧ್ಯಂತರ ವರದಿ ನಮ್ಮ ಪರವಿದ್ದು, ಕಾನೂನಿನ ನೆಪ ಹೇಳದೇ ಮೀಸಲಾತಿ ಘೋಷಣೆ ಮಾಡಿ ಎಂದು ಆಗ್ರಹಿಸಿದರು.

10 ಸಾವಿರ ಜನರೊಂದಿಗೆ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ

ಇಲ್ಲವಾದಲ್ಲಿ ಸಮುದಾಯದ 10 ಸಾವಿರ ಜನರೊಂದಿಗೆ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕಿ, ಅಧಿವೇಶನ ನಡೇಸಲು ಅವಕಾಶ ಕೊಡಲ್ಲ. ಇದರೊಂದಿಗೆ ಸುವರ್ಣ ವಿಧಾನಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕುತ್ತೇವೆ. ಅಲ್ಲೇ ಟೆಂಟ್ ಹಾಕಿ ಪ್ರತಿಭಟನೆ ಮಾಡಲ್ಲ, ಮುತ್ತಿಗೆ ಹಾಕಿ ಟ್ರ್ಯಾಕ್ಟರ್ ರ್ಯಾಲಿ ಮಾಡೋದು ಖಚಿತ. ಹೋರಾಟ ಮಾಡದೇ ನಮಗೆ ಮೀಸಲಾತಿ ಸಿಗಲ್ಲ. 2D ಮೀಸಲಾತಿ ಜಾರಿ ಮಾಡಿ, ಇಲ್ಲವೇ ಒಬಿಸಿ ಅಲ್ಲಿ ಸೇರಿಸಿ ಎಂದರು.

ಮೂರು ಕ್ಷೇತ್ರಗಳಿಗೆ ಹೊರತು ಇಡೀ ರಾಜ್ಯಕ್ಕಲ್ಲ

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಕಾಂಗ್ರೆಸ್ ಸರ್ಕಾರ ಉಪ ಚುನಾವಣೆ ಅಂತ ಕತೆ ಹೇಳ್ತಾರೆ. ಆದರೆ, ಇಡೀ ರಾಜ್ಯಕ್ಕೆ ನೀತಿ ಸಂಹಿತೆ ಹೇಗೆ ಅನ್ವಯ ಆಗುತ್ತೆ?. ಕೇವಲ ಮೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಮಾತ್ರ ನೀತಿ ಸಂಹಿತೆ ಇರುತ್ತೆ, ಹೊರತು ಇಡೀ ರಾಜ್ಯಕ್ಕಲ್ಲ. ಚುನಾವಣೆ ಮುಂಚಿತವಾಗಿ ನಿಗದಿಯಾಗಿದ್ದ ಸಭೆ, ಇದರಲ್ಲಿ ಹೇಗೆ ನೀತಿ ಸಂಹಿತೆ ಉಲ್ಲಂಘನೆ ಆಗುತ್ತೆ. ಈಗಾಗಲೇ ಈ ಹೋರಾಟ ಪ್ರಕ್ರಿಯೆ ಮುಂದುವರೆದಿದ್ದು, ನಾವು ಇದರಲ್ಲಿ ರಾಜಕಾರಣ ಮಾಡಲ್ಲ. ಗುರುಗಳು ಏನು ನಿರ್ಧಾರ ತೆಗೆದುಕೊಳ್ತಾರೆ ಅದಕ್ಕೆ ನಾವು ಬದ್ಧವಾಗಿ ಇರ್ತೇವೆ ಎಂದರು.

ಒಬಿಸಿ ಪಟ್ಟಿಗೆ ಲಿಂಗಾಯತರು

ತುಂಬ ಒತ್ತಡದ ನಂತರ ಮುಖ್ಯಮಂತ್ರಿಗಳು ಮೀಸಲಾತಿ ಕುರಿತು ಚರ್ಚಿಸಲು ಸಭೆ ಮಾಡಿದರು. ಆದರೆ ನಮಗೆ ಮೀಸಲಾತಿ ಕೊಡುವ ವಿಚಾರವಾಗಿ ಗಡುವು ನೀಡುವ ಯೋಚನೆ ಇಲ್ಲ. ಅವರು 2A ಸೇರಿಸುವ ಕುರಿತು ಖಚಿತ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಎಲ್ಲ ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸುವ ಕುರಿತು ಒಪ್ಪಿಕೊಳ್ಳುತ್ತಿಲ್ಲ. ಹಾಗೊಂದು ವೇಳೆ ಒಪ್ಪಿಕೊಂಡಲ್ಲಿ ಬಿಜೆಪಿ ಆತಂಕ ಪಡಬೇಕು. ಆದರೆ ಸಿಎಂ ಯಾವುದಕ್ಕೂ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದರು.

ಜಯಪ್ರಕಾಶ್ ಹೆಗಡೆ ಇಂದ ಭಾರೀ ನಾಟಕ

ನ್ಯಾಯವಾದಿಗಳ ಹೋರಾಟಕ್ಕೆ ಸಿಎಂ ಮಣಿದು ಸಭೆ ಕರೆದಿದ್ದರು, ಆದರೆ, ಜಯಪ್ರಕಾಶ್ ಹೆಗಡೆ ಭಾರೀ ನಾಟಕ ಮಾಡಿ, ಕೊನೆ ಗಳಿಗೆಯಲ್ಲಿ ಮಧ್ಯಂತರ ವರದಿ ಕೊಟ್ಟರು. ಮೀಸಲಾತಿ ವಿಷಯವಾಗಿ, ಬೊಮ್ಮಾಯಿ ಅವರ ಜೊತೆ ನನಗೆ ಏಕ ವಚನದಲ್ಲಿ ಜಗಳ ಆಯಿತು. ನೀನು ನಾಟಕ ಆಡಬೇಡ, ಹಿಂಗ್ಯಾಕೆ ಮಾಡ್ತೀರಿ ಎಂದು, ತಾಯಿಯಾಣೆ ಮೀಸಲಾತಿ ಕೊಡಿಸ್ತೇನೆ ಎಂದಿದ್ದರು, ಆದರೆ, ಅಶೋಕ್ ಗದ್ದಲ ಮಾಡಿದ ಪರಿಣಾಮ, ಅವರ ಒತ್ತಡಕ್ಕೆ ಮಣಿದು 2C ಮಾಡಿದ್ರು. ಇಲ್ಲಾಂದ್ರೆ ಬೊಮ್ಮಾಯಿ ಅವರು 2A ಮೀಸಲಾತಿ ಕೊಡಲು ಒಪ್ಪಿದ್ರು ಎಂದರು.

ಈಗಾಗಲೇ ಮೀಸಲಾತಿ ವಿಚಾರವಾಗಿ, ಅಮಿತ್ ಷಾ ಅವರ ನಿವಾಸದಲ್ಲಿ ಚರ್ಚೆ ಮಾಡಿದ್ದೇವೆ. ನಾನು ನಾವು ನಳೀನ್ ಕುಮಾರ್ ಕಟೀಲ್ ಎಲ್ಲರು ಅಮಿತ್ ಷಾ ಅವರು ಜೊತೆ ಚರ್ಚೆ ಮಾಡಿ, ಒಂದು ಹಂತಕ್ಕೆ ಪ್ರಯತ್ನ ಆಗಿದೆ. ಆದರೆ ಇವರು ಇಲ್ಲಿ ಯಾವುದೇ ನಿರ್ಧಾರಕ್ಕೆ ಬರುತ್ತಿಲ್ಲ ಎಂದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend