ಡಿ,ಕೆ,ಶಿವಕುಮಾರ್ ಗೆ ಶಾಕ್ ನೀಡಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ಮಾಡುತ್ತಿದೆಯಾ ಬಿಗ್ ಪ್ಲಾನ್…???

Listen to this article

ಕರ್ನಾಟಕ ಕಾಂಗ್ರೆಸ್ ಮನೆಯಲ್ಲಿ ಕುದಿಯುತ್ತಿರುವ ಬದಲಾವಣೆ ಬೆಂಕಿ ದೆಹಲಿ ತಲುಪಿದೆ. ಲೋಕಸಭೆ ವಿಪಕ್ಷ ನಾಯಕರಾದ ರಾಹುಲ್ ಗಾಂಧಿಗೆ ಅಭಿನಂದನೆ ಸಲ್ಲಿಸುವ ನೆಪದಲ್ಲಿ ಸಿಎಂ ಆಯಂಡ್ ಟೀಮ್ ರಾಹುಲ್ ಗಾಂಧಿಯವರನ್ನ ಭೇಟಿಯಾಗಿ ಮಾತುಕತೆ ನಡೆಸಿದೆ. ಡಿ.ಕೆ ಶಿವಕುಮಾರ್ ಹೊರತಾಗಿ ಸಿಎಂ ಸಿದ್ದರಾಮಯ್ಯ, ಕೆ.ಜೆ ಜಾರ್ಜ್, ಹೆಚ್‌.ಸಿ ಮಹದೇವಪ್ಪ, ಪರಮೇಶ್ವರ್ ರಾಹುಲ್ ಭೇಟಿಯಾಗಿ ಸಮಾಲೋಚನೆ ನಡೆಸಿದ್ರು.

ಇದೇ ವೇಳೆ ಸಿಎಂ-ಡಿಸಿಎಂ ಹುದ್ದೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಿಎಂ ಟೀಮ್ ದಾಳ ಉರುಳಿಸಿದೆ.

ನವದೆಹಲಿ/ಬೆಂಗಳೂರು, (ಜೂನ್ 30): ಹೆಚ್ಚುವರಿ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ರಾಹುಲ್ ಗಾಂಧಿ ಚರ್ಚೆ ನಡೆಸಿದ್ದಾರೆ. ಚರ್ಚೆ ವೇಳೆ ಬಹಿರಂಗ ಹೇಳಿಕೆ ನೀಡದಂತೆ ಸಚಿವರಿಗೆ ಸೂಚನೆ ನೀಡಿ. ನಾಯಕರ ಹೇಳಿಕೆಯಿಂದ ಡ್ಯಾಮೇಜ್ ಆಗಬಾರದು. ಸೂಕ್ತ ಸಮಯದಲ್ಲಿ ನಿರ್ಧಾರವನ್ನ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯಗೆ ರಾಹುಲ್ ಹೇಳಿದ್ದಾರೆ. ಇದೇ ವೇಳೆ ಜೆಡಿಎಸ್, ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್‌ಗೆ ಹಿನ್ನಡಯಾಗಿದೆ. ಹಳೇ ಮೈಸೂರು ಭಾಗದಲ್ಲಿ ನಾವು ನಾಲ್ಕು ಸ್ಥಾನ ಗೆಲ್ಲಬಹುದಿತ್ತು ಎಂದು ಸಿದ್ದರಾಮಯ್ಯ, ರಾಹುಲ್ ಗಮನಕ್ಕೆ ತಂದಿದ್ದಾರೆ. ಇನ್ನೂ ಇದೇ ಸಂದರ್ಭದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗೆ ಸಿಎಂ ಸಿದ್ದರಾಮಯ್ಯ ಆಪ್ತರು ಆಗ್ರಹಿಸಿದ್ದಾರೆ. ನಾಯಕರ ಸಮಾಧಾನ ಪಡಿಸಲು ಹೈಕಮಾಂಡ್ ತಂತ್ರಗಾರಿಕೆ ಮಾಡುತ್ತಿದ್ದು, ಒನ್ ಮ್ಯಾನ್ ಒನ್ ಪೋಸ್ಟ್ ಪಾಲಿಸಿ ಜಾರಿಗೆ ಬರುವ ಸಾಧ್ಯತೆ ಇದೆ.

ಡಿಕೆಶಿ-ಸಿದ್ದರಾಮಯ್ಯ ಒಪ್ಪುವ ನಾಯಕನಿಗೆ ಕೆಪಿಸಿಸಿ ಪಟ್ಟ

ಬದಲಾವಣೆ ಬೆಂಕಿಗೆ ತಣ್ಣೀರು ಸುರಿಯಲು ಹೈಕಮಾಂಡ್ ಬಿಗ್ ಪ್ಲ್ಯಾನ್ ಮಾಡಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾದ್ರೆ ಅರ್ಧ ಸಮಸ್ಯೆಗೆ ಮುಕ್ತಿ ಎಂದು ಅರಿತಿರುವ ಹೈಕಮಾಂಡ್, ಒನ್ ಮ್ಯಾನ್ ಒನ್ ಪೋಸ್ಟ್ ಪಾಲಿಸಿ ಜಾರಿಗೆ ತರುವ ಸಾಧ್ಯತೆ ಇದೆ. ಮುಂದಿನ ತಿಂಗಳ ವೇಳೆಗೆ ಕೆಪಿಸಿಸಿಗೆ ನೂತನ ಸಾರಥಿ ನೇಮಕವಾಗುವ ಸಾಧ್ಯತೆ ಇದೆ. ಈ ಮೂಲಕ ಅಸಮಾಧಾನಿತರನ್ನ ಸಮಾಧಾನಪಡಿಸಲು ಹೈಕಮಾಂಡ್ ಮುಂದಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂಡಿಕೆ ಒಪ್ಪುವ ನಾಯಕನಿಗೆ ಪಟ್ಟ ಕಟ್ಟುವ ಮೂಲಕ ಗೊಂದಲ ನಿವಾರಿಸಲು ಹೈಕಮಾಂಡ್ ಪ್ಲ್ಯಾನ್ ಮಾಡಿದೆ.

ಈ ಮೂಲಕ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯಲು ಹೈಕಮಾಂಡ್ ಪ್ಲ್ಯಾನ್ ಮಾಡಿದೆ. ಆದ್ರೆ, ಕೆಪಿಸಿಸಿ ಪಟ್ಟ ಬಿಟ್ಟುಕೊಡದೇ ಡಿಕೆಶಿ ಪ್ರತಿತಂತ್ರ ಹೂಡಿದ್ದಾರೆ ಎನ್ನಲಾಗಿದೆ. ಅಧ್ಯಕ್ಷ ಸ್ಥಾನ ಇದ್ರೆ ಸಿಎಂ ಸ್ಥಾನ ಬದಲಾವಣೆಗೆ ಹೆಚ್ಚು ಬಲ ಬರುತ್ತೆ. ಹೀಗಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆವರೆಗೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಡಿಕೆ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ದೆಹಲಿಯಲ್ಲಿರುವ ಡಿಕೆ, ಮಲ್ಲಿಕಾರ್ಜುನ ಖರ್ಗೆ ಜೊತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಬದಲಾವಣೆ ಚರ್ಚೆಗೆ ಮತ್ತಿಬ್ಬರು ಶ್ರೀಗಳು ಎಂಟ್ರಿ

ಬದಲಾವಣೆ ಸುಂಟರಗಾಳಿಗೆ ಮತ್ತಿಬ್ಬರು ಶ್ರೀಗಳು ಎಂಟ್ರಿ ಕೊಟ್ಟಿದ್ದಾರೆ. ಬಿ.ಕೆ ಹರಿಪ್ರಸಾದ್ ಪರವಾಗಿ ಪ್ರಣವಾನಂದ ಶ್ರೀಗಳು ಬ್ಯಾಟ್ ಬೀಸಿದ್ದಾರೆ. ಹರಿಪ್ರಸಾದ್ ಸಿಎಂ ಹುದ್ದೆಗೆ ಅರ್ಹವ್ಯಕ್ತಿ ಎಂದಿದ್ದಾರೆ. ಇತ್ತ ಮುಖ್ಯಮಂತ್ರಿ ಬದಲಾವಣೆ ವಿಚಾರವೇ ಅಪ್ರಸ್ತುತ ಅಂತಾ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಹೇಳಿದ್ದಾರೆ. ಸಿದ್ದರಾಮಯ್ಯ, ಡಿಕೆ ಕೊಹ್ಲಿ, ರೋಹಿತ್​​ ಶರ್ಮಾ ಇದ್ದಂತೆ ಎಂದು ಹೊಗಳಿದ್ದಾರೆ.

ಕಾಂಗ್ರೆಸ್‌ನ ಕುರ್ಚಿ ಕಿತ್ತಾಟವೇ ಬಿಜೆಪಿಗೆ ಅಸ್ತ್ರ

ಇನ್ನೂ ಕಾಂಗ್ರೆಸ್‌ನ ಕುರ್ಚಿ ಕಿತ್ತಾಟ ಬಿಜೆಪಿಗೆ ಅಸ್ತ್ರವಾಗಿದೆ. ಹೈಕಮಾಂಡ್ ಮನಸು ಮಾಡಿದ್ರೆ ಡಿಕೆ ಸಿಎಂ ಆಗುತ್ತಾರೆ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ತುಪ್ಪ ಸುರಿದಿದ್ದಾರೆ. ಹಾಗೆಯೇ ಭಿನ್ನಭಿಪ್ರಾಯ ಬಂದ್ರೆ ಸರ್ಕಾರ ಬೀಳಬಹುದು ಅಂತಾನೂ ಭವಿಷ್ಯ ನುಡಿದಿದ್ದಾರೆ. ಇನ್ನೂ ಕಾಂಗ್ರೆಸ್ ನಾಯಕರ ಬಹಿರಂಗ ಚರ್ಚೆಯಿಂದ ಆಡಳಿತ ವ್ಯವಸ್ಥೆ ಸ್ಥಗಿತವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಒಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್​ನಲ್ಲಿ ಹೊತ್ತಿಕೊಂಡಿರುವ ಬದಲಾವಣೆ ಬೆಂಕಿಯನ್ನ ಆರಂಭದಲ್ಲೇ ಆರಿಸಲು ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದು, ದಾಳ -ಪ್ರತಿದಾಳ ಜೋರಾಗಿದ್ದು, ಯಾವ ಬಣ ಮೇಲುಗೈ ಸಾಧಿಸುತ್ತೆ ಎನ್ನುವುದನ್ನು ಕಾದುನೋಡಬೇಕಿದೆ..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend