ರಾತ್ರೋ ರಾತ್ರಿ ಸೂರಜ್ ಬೆಂಗಳೂರಿಗೆ ರವಾನೆ, ಸಲಿಂಗ ಕಾಮದ ಆರೋಪದಡಿ ವೈದ್ಯಕೀಯ ಪರೀಕ್ಷೆ…!!!

Listen to this article

ಬೆಂಗಳೂರು: ಎಂಎಲ್ ಸಿ ಸೂರಜ್ ರೇವಣ್ಣ ವಿರುದ್ಧ ಸಲಿಂಗಕಾಮದ ಆರೋಪ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ದೂರು ನೀಡಿದ ಸಂತ್ರಸ್ತನನ್ನು ವೈದ್ಯಕೀಯ ತಪಾಸಣೆಗೆ ತಡರಾತ್ರಿ ಬೆಂಗಳೂರಿಗೆ ಪೊಲೀಸರು ಕರೆತಂದಿದ್ದಾರೆ. ನಿನ್ನೆ ಸಂಜೆ ಸಂತ್ರಸ್ತ ಖುದ್ದು ಪೊಲೀಸ್‌ ಠಾಣೆಗೆ ಬಂದು ದೂರು ದಾಖಲಿಸಿದ್ದ.

ನಂತರ ಆತನನ್ನುಹಾಸನದಲ್ಲಿ ಮೆಡಿಕಲ್ ಚೆಕಪ್ ಗೆ ಸೂಚಿಸಲಾಯಿತು. ಆದರೆ ಆತ ಹಾಸನದಲ್ಲಿ ತಪಾಸಣೆ ಮಾಡಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕರೆ ತರಲಾಗಿದೆ.

ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಮೆಡಿಕಲ್ ಚೆಕಪ್ ಮಾಡಿಸಲು ಕರೆತಂದಿರುವ ಪೊಲೀಸರು ವೈದ್ಯರು ಬಂದ ನಂತರ ತಪಾಸಣೆ ಮಾಡಿಸಲಿದ್ದಾರೆ.

ಸದ್ಯಕ್ಕೆ ಸಂತ್ರಸ್ತನಿಗೆ ಕೌನ್ಸಲಿಂಗ್ ಮುಗಿಸಿರುವ ಡ್ಯೂಟಿ ಡಾಕ್ಟರ್‌ಗಳು, ಬಿಪಿ, ಶುಗರ್, ಇಸಿಜಿ, ದೇಹದ ಮೇಲೆ ಕಚ್ಚಿರುವ ಗಾಯಗಳ ಬಗ್ಗೆ ವೈದ್ಯಕೀಯ ಪರೀಕ್ಷೆ ನಡೆಸಿದರು. ನಂತರ ಆತನಿಗೆ ಲೈಂಗಿಕ ಕ್ರಿಯೆ ಸಮರ್ಥನಾಗಿದ್ದನಾ ಎಂದು ಪರೀಕ್ಷೆ ನಡೆಸಲಿದ್ದಾರೆ.

ಇನ್ನು ಹೆಚ್ಚಿನ ಪರೀಕ್ಷೆಗೆ ಹಿರಿಯ ವೈದ್ಯರು ಆಸ್ಪತ್ರೆಗೆ ಬರಬೇಕಾಗಿದೆ. ಹಿರಿಯ ವೈದ್ಯರು 8 ಗಂಟೆಯ ಬಳಿಕ‌ ಆಗಮಿಸಲಿದ್ದಾರೆ. ಹಿರಿಯ ವೈದ್ಯರು ಬಂದ ನಂತರ ಸುಮಾರು 10 ಗಂಟೆಯ ಹೊತ್ತಿಗೆ ಬಾಕಿ ಉಳಿದ ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ. ನಿನ್ನೆ ಸಂಜೆ ದೂರುದಾರ ಮತ್ತು ಸೂರಜ್ ರೇವಣ್ಣ ಇಬ್ಬರೂ ಸೆನ್‌ ಪೊಲೀಸ್‌ ಠಾಣೆಗೆ ಬಂದಿದ್ದರು. ಇಬ್ಬರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಯಿತು. ಸಂತ್ರಸ್ತನನ್ನು ತಪಾಸಣೆಗೆಂದು ರಾತ್ರಿಯೇ ಬೆಂಗಳೂರಿಗೆ ಕರೆ ತರಲಾಯಿತು. ಸೂರಜ್ ನನ್ನು ಬೆಳಗಿನ ಜಾವ 4 ಗಂಟೆವರೆಗೆ ವಿಚಾರಣೆ ನಡೆಸಲಾಯಿತು ಎಂದು ತಿಳಿದು ಬಂದಿದೆ. ವಿಚಾರಣೆ ನಂತರ ಸೂರಜ್ ನನ್ನು ಪೊಲಿಸರು ಬಂಧಿಸಿದ್ದಾರೆ.

177 ಕೇಸ್ ನಲ್ಲಿಇದೇ ಮೊದಲ ಬಾರಿಗೆ ಟೆಸ್ಟ್ ಮಾಡುತ್ತಿರುವ ವೈದ್ಯರು. ಈ ತರದ ಪ್ರಕರಣದಲ್ಲಿ ಯಾವ ವೈದ್ಯಕೀಯ ಪರೀಕ್ಷೆ ಮಾಡಬೇಕು ಎನ್ನುವುದು ವೈದ್ಯರಿಗೆ ಗೊತ್ತಿಲ್ಲ ತಿಳಿಯದಾಗಿದೆ. ಆದುದರಿದ ಪೊಲೀಸರು ಕೇಳಿದ ವೈದ್ಯಕೀಯ ಪರೀಕ್ಷೆ ಮಾಡಲು ತಯಾರಿ ನಡೆಸಿದ್ದಾರೆ…

ವರದಿ. ವಿ, ಸಾ, ಸುದ್ದಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend