ನನಗೆ ಪರಿಚಯ ಮಾಡಿಸಿದಾಗ ಯಾರೋ ಹುಚ್ಚನನ್ನ ಕರೆದುಕೊಂಡು ಬಂದಿದಿಯಲ್ಲಯ್ಯ ಎಂದಿದ್ದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ…!!!

Listen to this article

‘ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರು ಪ್ರದೀಶ್ ಈಶ್ವರ್‌ನನ್ನು ಮೊದಲ ಬಾರಿಗೆ ನನ್ನ ಬಳಿ ಕರೆದುಕೊಂಡು ಬಂದು ನನಗೆ ಪರಿಚಯ ಮಾಡಿಸಿದಾಗ ಯಾರೋ ಹುಚ್ಚನನ್ನ ಕರೆದುಕೊಂಡು ಬಂದಿದಿಯಲ್ಲಯ್ಯ ಎಂದಿದ್ದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.

ಶಿವಕುಮಾರ್ ಹೇಳಿದ್ದಾರೆ.

ಪರಿಶ್ರಮ ನೀಟ್ ಅಕಾಡೆಮಿ- 2024 ಸನ್ಮಾನ ಸಮಾರಂಭದಲ್ಲಿ 2023-24ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ ಮರೆತವನು ಇತಿಹಾಸ ಸೃಷ್ಟಿ ಮಾಡಲು ಅಗಲ್ಲ ಎಂದು ಅಂಬೇಡ್ಕರ್ ಹೇಳಿದ್ದಾರೆ.. ನೀಟ್ ನಲ್ಲಿ ನಡೆದ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಅವಕಾಶಗಳು ಯಾರು ಕೊಡುವುದಿಲ್ಲ ನೀವೇ ಅವಕಾಶ ಹುಡುಕಿಕೊಂಡು ಹೋಗಬೇಕು. ಸುಧಾಕರ್ ಅವರು ಪ್ರದೀಪ್ ಈಶ್ವರ್‌ರನ್ನ ಕರೆದುಕೊಂಡು ಬಂದಿದ್ದರು. ಆಗ ನಾನು ಯಾರೋ ಹುಚ್ಚನನ್ನ ಕರೆದುಕೊಂಡು ಬಂದಿದಿ ಅಲ್ಲಯ್ಯ ಎಂದೆ. ಆದರೆ, ಆಗಲೇ ಇವನು ಉಪಯೋಗಕ್ಕೆ ಬರ್ತಾನೆ ಎಂದು ಹೇಳಿದ್ದರು.

ನಾನು ಸಣ್ಣ ವಯಸ್ಸಿನಲ್ಲಿ ಮಂತ್ರಿ ಆದೆ ಓದಲು ಆಗಿಲ್ಲ. ಮೂರು ಜನ ಮಕ್ಕಳ ಆದರೂ ಯಾಕೆ ಪದವೀಧರ ಆಗಿಲ್ಲ ಎಂದು ಕೇಳಬಹುದು ಎಂದು ಓಪನ್ ವಿವಿಯಲ್ಲಿ ಓದಿದೆ. 48ನೇ ವಯಸ್ಸಿನಲ್ಲಿ ಪದವೀಧರನಾದೆ. ನಾನು ಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ಆಗಿರುವ ಸಂತೋಷಕ್ಕಿಂತ ಮೈಸೂರಿನಲ್ಲಿ ಪದವೀಧರ ಸರ್ಟಿಫಿಕೇಟ್ ಇಸ್ಕೊಂಡಾಗ ಆಗಿತ್ತು. ಪ್ರದೀಪ್ ಈಶ್ವರ್ ಬಂದು ಪರಿಶ್ರಮಕ್ಕೆ ಜಾಗ ಕೇಳಿದ್ದರು. ಆಗ ಪೆನ್ನುಪೇಪರ್ ಕೊಟ್ಟೀದ್ದೀರಿ ನಾನು ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ಕೊಟ್ಟಿದ್ದೇನೆ ಎಂದು ಹೇಳಿದರು.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಕಷ್ಟದಿಂದ ಬಹಳ‌ ಎತ್ತರಕ್ಕೆ ಬೆಳೆದು, ಕೆರೆಯ ನೀರನ್ನ ಕೆರೆಗೆ ಚೆಲ್ಲಿ ಎಂಬಂತೆ ಸಾಧಕರನ್ನ ಪರಿಚಯಿಸುವ ಕೆಲಸವನ್ನು ಶಾಸಕ ಪ್ರದೀಪ್ ಈಶ್ವರ್ ಮಾಡ್ತಿದ್ದಾರೆ. ಕಷ್ಟ ಪಟ್ಟು ಮೇಲೆ ಬಂದಿದ್ದೀರಿ. ಆರ್ಥಿಕ‌ ಶಕ್ತಿಯನ್ನ ವಿದ್ಯಾದಾನ ಮಾಡುವ ಕೆಲಸಕ್ಕೆ ಬಳಕೆ ಮಾಡಿದ್ದಾರೆ. ನಮ್ಮ‌ ಶಾಲೆ ನಮ್ಮ ಜವಾಬ್ದಾರಿ ಅಂತ ಕಾರ್ಯಕ್ರಮ ಮಾಡ್ತಾ ಇದ್ದೀವಿ. ಸರ್ಕಾರಿ‌ ಶಾಲೆಯಲ್ಲಿ‌ ವ್ಯಾಸಾಂಗ ಮಾಡಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ನಮ್ಮ‌ ತಂದೆ ಸರ್ಕಾರಿ ಶಾಲೆಯಲ್ಲಿ‌ ಓದಿ ಮುಖ್ಯಮಂತ್ರಿ‌ ಆಗಿದ್ದವರು. ಅವರ ಗರಡಿಯಲ್ಲಿ ಬೆಳೆದ ವ್ಯಕ್ತಿ ಡಿ.ಕೆ. ಶಿವಕುಮಾರ್. ಈಗ ದೊಡ್ಡ ಪಿಲ್ಲರ್ ಆಗಿ ನನ್ನ ಪರ ನಿಂತಿದ್ದಾರೆ. ಪ್ರದಿಪ್ ಈಶ್ವರ್ ನೀವು ಅನಾಥರಲ್ಲ, ಇಷ್ಟು ಜನ ಪ್ರೀತಿ ಗಳಿಸಿದ್ದೀರಿ ಇವರೆಲ್ಲರೂ ನಿಮ್ಮ ಬಂಧುಗಳು ಎಂದು ಹೇಳಿದರು.

ಪರಿಶ್ರಮ ನೀಟ್ ಅಕಾಡೆಮಿ ಸಂಸ್ಥೆಯನ್ನ‌ 5 ವರ್ಷಗಳ ಹಿಂದೆ ಕಟ್ಟಿದೆ. ಕಳೆದ ವರ್ಷ 700ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಸೀಟ್ ಸಿಕ್ಕಿತ್ತು. ಪ್ರತಿ ವರ್ಷ ಆಯ್ಕೆ ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಾನು ಖಾಲಿ ಜೇಬಿನಿಂದ ಬೆಂಗಳೂರಿಗೆ ಬಂದಿದ್ದೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಇಬ್ರೂ ನನ್ನ ಭವಿಷ್ಯವಾಗಿದ್ದಾರೆ. ಅವರ ಬಗ್ಗೆ ಯಾರಾದ್ರೂ ಕೆಟ್ಟದಾಗಿ ಮಾತಾಡಿದ್ರೆ ನಾನು ಸುಮ್ನಿರಲ್ಲ. ಮನೆಯಲ್ಲಿದ್ದ ನನ್ನ ಕರೆದು ಎಂ.ಸಿ ಸುಧಾಕರ್ ಟಿಕೆಟ್ ಕೊಡಿಸಿ ಶಾಸಕ ಮಾಡಿದ್ದಾರೆ. ಇವರೇ ನನ್ನ ರಾಜಕೀಯ ಗುರುಗಳು…

ವರದಿ. ಎ, ಕ, ನ್ಯೂಸ್ ವರದಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend