ಗುಳೇದಗುಡ್ಡಕ್ಕೆ ಆಗಮಿಸಿದ ಕನ್ನಡ ರಥಯಾತ್ರೆ…!!!

Listen to this article

ಗುಳೇದಗುಡ್ಡಕ್ಕೆ ಆಗಮಿಸಿದ ಕನ್ನಡ ರಥಯಾತ್ರೆ
ಗುಳೇದಗುಡ್ಡ: ಡಿಸೆಂಬರ್ ೨೦ ರಿಂದ ಮೂರುದಿನಗಳ ಕಾಲ ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಚಾಲನೆ ನೀಡಿರುವ ನಾಡದೇವತೆ ಭಾವಚಿತ್ರ ಹೊಂದಿರುವ ಕನ್ನಡ ರಥಯಾತ್ರೆ ಸೋಮವಾರ ಪಟ್ಟಣಕ್ಕೆ ತಹಶೀಲ್ದಾರ ಕಚೇರಿ ಹತ್ತಿರ ಆಗಮಿಸಿದಾಗ ತಾಲೂಕು ಆಡಳಿತ, ಕನ್ನಡ ಸಾಹಿತ್ಯ ಪರಿಷತ್, ವಿವಿಧ ಕನ್ನಡಪರ ಸಂಘಟನೆಗಳಿಂದ ಸ್ವಾಗತ ಕೋರಲಾಯಿತು.
ತಹಶೀಲ್ದಾರ್ ಮಂಗಳಾ ಎಂ, ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ ಅವರು ರಥಯಾತ್ರೆಗೆ ಪೂಜೆ ಸಲ್ಲಿಸಿ, ಸ್ವಾಗತಿಸಿದರು. ಬಳಿಕ ರಥಯಾತ್ರೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹಾಯ್ದು ಕಮತಗಿ ಪಟ್ಟಣಕ್ಕೆ ತೆರಳಿತು. ರಥಯಾತ್ರೆಯಲ್ಲಿ, ಡೊಳ್ಳಿನ ಮೇಳ, ಹಾಗೂ ವಾದ್ಯ ಮೇಳಗಳೊಂದಿಗೆ ರಥಯಾತ್ರೆಗೆ ಸ್ವಾಗತ ನೀಡಿ ಮೆರವಣಿಗೆ ಮಾಡಲಾಯಿತು. ದ.ರಾ.ಬೇಂದ್ರೆ, ವಿ.ಕೆ. ಗೋಕಾಕ, ಕುವೆಂಪು, ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ, ಮಾಸ್ತಿವೆಂಕಟೇಶ ಅಯ್ಯಂಗಾರ ಸೇರಿದಂತೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳನ್ನು, ೧೦೦ ಮೀಟರ್ ಉದ್ದದ ಕನ್ನಡ ಧ್ವಜವನ್ನು ಮೆರವಣೆಗೆಯಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕನ್ನಡ ಹೋರಾಟಗಾರರು, ಸ್ವಾತಂತ್ರ ವೀರರ ವೇಷಧರಿಸಿದ ಮಕ್ಕಳು ಗಮನಸೆಳೆದರು.
ವಿಶೇಷತಹಶೀಲ್ದಾರ್ ಮಹೇಶ ಗಸ್ತೆ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಾಲೂಕು ಅಧ್ಯಕ್ಷ ಎಚ್.ಎಸ್.ಘಂಟಿ, ಕೋಶಾಧ್ಯಕ್ಷ ಸಿ.ಎಂ. ಜೋಶಿ, ಪುರಸಭೆ ಮ್ಯಾನೇಜರ ಎ.ಎಚ್. ಮುದ್ದೇಬಿಹಾಳ, ಕಂದಾಯ ನಿರೀಕ್ಷಕ ಶಿವಕುಮಾರ ಜೋಗಿನ, ಪುರಸಭೆ ಸದಸ್ಯರಾದ ಸಂತೋಷ ನಾಯನೇಗಲಿ, ಪ್ರಶಾಂತ ಜವಳಿ, ಯಲ್ಲಪ್ಪ ಮನ್ನಿಕಟ್ಟಿ, ರಾಜು ಹೆಬ್ಬಳ್ಳಿ, ವೈ.ಆರ್. ಹೆಬ್ಬಳ್ಳಿ, ಸೋಮಶೇಖರ ಕಲ್ಬುರ್ಗಿ, ಗುಂಡಪ್ಪ ಕೋಟಿ, ರಾಜಶೇಖರ ಪಾಗಿ, ಎಂ.ಎಂ. ತುಪ್ಪದ, ಸಿಆರ್‌ಪಿ ಭಾಗೀರಥಿ ಆಲೂರ, ರಾಮಚಂದ್ರ ಬಾಪಟ್, ರಾಜಶೇಖರ ಹುನಗುಂದ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು..

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend