ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಗೆ ಬಹಿಷ್ಕಾರ…!!!

Listen to this article

ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಗೆ ಬಹಿಷ್ಕಾರ

ಗುಳೇದಗುಡ್ಡ: ಖೊಟ್ಟಿ ಜಾತಿ ಪ್ರಮಾಣಪತ್ರ
ತೆಗೆದುಕೊಂಡವರ ಹಾಗೂ ಖೊಟ್ಟಿ ಪ್ರಮಾಣಪತ್ರ ನೀಡಿದ
ಅಧಿಕರಿಗಳ ಮೇಲೆ ಕ್ರಮಕೈಗೊಳ್ಳದೇ ವಿಳಂಬ ಮಾಡಿದ್ದನ್ನು
ಖಂಡಿಸಿ, ಶನಿವಾರ ನಡೆದ ವಾಲ್ಮೀಕಿ ಜಯಂತಿ ಆಚರಣೆಯ ಪೂರ್ವಭಾವಿ
ಸಭೆಯನ್ನು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ
ತಾಲೂಕು ಘಟಕ ಬಹಿಷ್ಕರಿಸಿ, ಖೊಟ್ಟಿ ಜಾತಿ ಪ್ರಮಾಣಪತ್ರ ನೀಡಿದವರ
ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ತಹಶೀಲ್ದಾರ
ಮಂಗಳಾ ಎಂ. ಅವರಿಗೆ ಮನವಿ ಸಲ್ಲಿಸಿತು.
ಖೊಟ್ಟಿ ಜಾತಿ ಪ್ರಮಾಣಪತ್ರ ನೀಡಿದ ಮತ್ತು ನೀಡುತ್ತಿರುವ
ಕುರಿತು ಈ ಹಿಂದೆ ತಾಲೂಕು ವಾಲ್ಮೀಕಿ ಸಮಾಜದವರು ಜಿಲ್ಲಾಧಿಕಾರಿಗಳ
ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಕೈಗೊಂಡಾಗ, 15ದಿನಗಳ
ಒಳಗಾಗಿ ಖೊಟ್ಟಿ ಜಾತಿಪ್ರಮಾಣಪತ್ರಗಳನ್ನು ನೀಡಿದ್ದನ್ನು
ರದ್ದುಗೊಳಿಸಿ, ಖೊಟ್ಟಿ ಜಾತಿಪ್ರಮಾಣಪತ್ರ ನೀಡಿದ ಅಧಿಕಾರಿಗಳ
ಮೇಲೆ ಕ್ರಮತೆಗೆದುಕೊಂಡು ವರದಿ ನೀಡುವಂತೆ
ಜಿಲ್ಲಾಧಿಕಾರಿಗಳು ತಹಶೀಲ್ದಾರರಿಗೆ ಸೂಚನೆ ನೀಡಿದ್ದರೂ
ತಹಶೀಲ್ದಾರರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ
ಸಭೆಯನ್ನು ಬಹಿಷ್ಕರಿಸಲಾಗಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ
ತಹಶೀಲ್ದಾರರು ಇಂತಹವರ ಮೇಲೆ ಯಾವ
ಕ್ರಮಕೈಗೊಂಡಿದ್ದಾರೆ ಎಂದು ಲಿಖಿತವಾಗಿ ತಿಳಿಸಿದ ನಂತರವೇ ವಾಲ್ಮೀಕಿ
ಜಯಂತಿ ಸಭೆಯಲ್ಲಿ ಹಾಗೂ ಜಯಂತಿ ಕಾರ್ಯಕ್ರಮದಲ್ಲಿ
ಭಾಗವಹಿಸುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ. ಇನ್ನು ಮುಂದೆ
ಬೇರೆ ಸಮುದಾಯದವರಿಗೆ ಖೊಟ್ಟಿಜಾತಿ ಪ್ರಮಾಣಪತ್ರ ನೀಡದರೆ
ಅವರ ಮೇಲೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು
ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಫಕೀರಪ್ಪ ತಳವಾರ,
ಯಮನಪ್ಪ ಗೌಡರ, ಶಿವಾನಂದ ವಾಲೀಕಾರ, ಶಂಕ್ರಗೌಡ ಗೌಡ್ರ,
ಯಲ್ಲಪ್ಪ ಮನ್ನಿಕಟ್ಟಿ, ರಾಮನಗೌಡ ಗೌಡ್ರ, ಸುಭಾಷ ಹೊಸಮನಿ,
ಶಿವು ಗೋತಗಿ, ಪರಶುರಾಮ ತಳವಾರ, ಶಿವಾನಂದ ದಂಡೀನ,
ಭೀಮನಗೌಡ ಗೌಡರ, ಲಕ್ಷ್ಮಣ ಗದ್ದನಕೇರಿ, ದ್ಯಾವನಗೌಡ
ಗೌಡರ, ಗಣೇಶ ತಳವಾರ, ಶಿವು ಕಾಟಾಪುರ, ಪಡಿಯಪ್ಪ
ಮನ್ನಿಕಟ್ಟಿ, ಬಾಲು ಹೊಸಮನಿ ಮತ್ತಿತರರು ಇದ್ದರು…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend