ಪುರಸಭೆ ಸಾಮಾನ್ಯ ಸಭೆ: ವಿವಿಧ ಕಾಮಗಾರಿಗಳಿಗೆ ಅನುಮೋದನೆ…!!!

Listen to this article

ಪುರಸಭೆ ಸಾಮಾನ್ಯ ಸಭೆ: ವಿವಿಧ ಕಾಮಗಾರಿಗಳಿಗೆ ಅನುಮೋದನೆ
ಗುಳೇದಗುಡ್ಡ: ಕೆಯುಐಡಿಎಫ್‍ಸಿಯಿಂದ ಎನ್‍ಜಿಟಿಯಲ್ಲಿ ಮಂಜೂರಾದ
ಎರಡು ಕೋಟಿ ರೂ. ಅನುದಾನದಲ್ಲಿ ಯುಜಿಡಿ ಕಾಮಗಾರಿಯನ್ನು
ಕೈಗೊಳ್ಳುವುದು ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ
ಪುರಸಭೆ ಸಾಮಾನ್ಯಸಭೆಯಲ್ಲಿ ಅನುಮೋದನೆ ನೀಡಿಲಾಯಿತು.
ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ ಅವರ
ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಎರಡನೇ ಅವಧಿಯ
ಪ್ರಥಮ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಸ್ತಿ ಕರ, ನೀರಿನ
ಶುಲ್ಕ ವಸೂಲಿಯನ್ನು ಮಹಿಳಾ ಸ್ವಸಹಾಯಗುಂಪುಗಳಿಗೆ
ನೀಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ನಳದ ಸಂಪರ್ಕ
ನೀಡುವ ಸಂದರ್ಭದಲ್ಲಿ ರಸ್ತೆ ಕಟಿಂಗ್ ಶುಲ್ಕವನ್ನು ಹೆಚ್ಚಿಸಿ
ನಿಗಧಿಪಡಿಸಲಾಗಿದ್ದು, ಕಾಂಕ್ರೀಟ್ ರಸ್ತೆ ಕಟಿಂಗ್ ಚಾರ್ಜ್ 1500 ರೂ,
ಡಾಂಬರ್ ರಸ್ತೆಗೆ 1200 ರೂ. ಮಣ್ಣಿನ ರಸ್ತೆಗೆ 500 ರೂ. ಪ್ರತಿ
ಮೀಟರ್ ನಿಗಧಿಪಡಿಸಲಾಗಿದೆ.
ಈಗಾಗಲೇ ಟೆಂಡರ್ ಆಹ್ವಾನಿಸಿದ ಎಸ್‍ಎಫ್‍ಸಿ 15ನೇ ಆಯೋಗದ
ಅನುದಾನ, ಎನ್‍ಎಂಪಿ ಅನುದಾನ, ಎಸ್‍ಬಿಎಂ ಅನುದಾನದ ಹಾಗೂ ಸ್ಥಳೀಯ
ನಿಧಿ ಅನುದಾನದಲ್ಲಿ ಕಾಮಗಾರಿಗಳಿಗೆ ಸಭೆಯಲ್ಲಿ ಅನುಮೋದನೆ
ನೀಡಲಾಯಿತು. ವೈಯಕ್ತಿ ಶೌಚಾಲಯ ನಿರ್ಮಾಣ ಹಾಗೂ ನಳದ
ಸಂಪರ್ಕದ ವೆಚ್ಚ ಭರಣಾ ಮಾಡಲು ಫಲಾನುಭವಿಗಳನ್ನು
ಆಯ್ಕೆ ಮಾಡಲು ಒಪ್ಪಿಗೆ ನೀಡಲಾಗಿದ್ದು, ಅರ್ಜಿಸಲ್ಲಿಸಲು ಅವಕಾಶ
ನೀಡಲಾಯಿತು.
ಸಭೆಯಲ್ಲಿ ಸದಸ್ಯರಾದ ವಿಠಲಸಾ ಕಾವಡೆ, ರಫೀಕ ಕಲ್ಬುರ್ಗಿ,
ವಿನೋದ ಮದ್ದಾನಿ, ಶ್ಯಾಮ ಮೇಡಿ, ಸಂತೋಷ ನಾಯನೇಗಲಿ,
ಅಮರೇಶ ಕವಡಿಮಟ್ಟಿ, ಯಲ್ಲಪ್ಪ ಮನ್ನಿಕಟ್ಟಿ, ಕಾಶೀನಾಥ ಕಲಾಲ,
ರಾಜು ಹೆಬ್ಬಳ್ಳಿ, ಪ್ರಶಾಂತ ಜವಳಿ, ಯಲ್ಲವ್ವ ಗೌಡರ, ರಾಜವ್ವ ಹೆಬ್ಬಳ್ಳಿ,
ವಿದ್ಯಾ ಮುರಗೋಡ, ನಾಗರತ್ನಾ ಲಕ್ಕುಂಡಿ, ವಂದನಾ ಭಟ್ಟಡ,
ಸುಮಿತ್ರಾ ಕೋಡಬಳಿ, ಜ್ಯೋತಿ ಆಲೂರ, ರಾಜೇಶ್ವರಿ ಉಂಕಿ,
ಪುರಸಭೆ ಮುಖ್ಯಾಧಿಕಾರಿ ಎ.ಎಚ್. ಮುಜಾವರ, ಅಭಿಯಂತರ ಎಂ.ಜಿ.
ಕಿತ್ತಲಿ, ಮ್ಯಾನೇಜರ ಎ.ಎಚ್. ಮುಜಾವರ, ಆರ್.ವಿ. ಚಂದರಗಿ ಇದ್ದರು…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend