ಗುಳೇದಗುಡ್ಡ: ವಿವಿಧೆಡೆ ಆಕರ್ಷಕ ಗಣೇಶ ಮೂರ್ತಿಗಳ ಸ್ಥಾಪನೆ…!!!

Listen to this article

ಗುಳೇದಗುಡ್ಡ: ವಿವಿಧೆಡೆ ಆಕರ್ಷಕ ಗಣೇಶ ಮೂರ್ತಿಗಳ ಸ್ಥಾಪನೆ

ಗುಳೇದಗುಡ್ಡ: ಗೌರಿಸುತ ಗಣೇಶ ಹಬ್ಬದ ಸಡಗರ ಖಣದ ನಾಡಾದ ಗುಳೇದಗುಡ್ಡ ಪಟ್ಟಣದಲ್ಲಿ ಸಂಭ್ರಮ ಮಾನೆಮಾಡಿದೆ. ಹಬ್ಬದ ಹಿನ್ನೆಲೆಯಲ್ಲಿ ಶನಿವಾರ ಮನೆ, ಸರ್ಕಾರಿ, ಖಾಸಗಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಭಕ್ತರು ಬಗೆ ಬಗೆಯ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.


ಬಾಲಗಣಪ, ಗದೆಯ ಮೇಲೆ ಕುಳಿತ ಶ್ರೀರಾಮನ ಅವತಾರದ ಗಣೇಶ, ನವಿಲಿನ ಮೇಲೆ ಕುಳಿತ ಗಣೇಶ, ಸರ್ಪದಾರಿ ಗಣಪ, ಶಿವರೂಪಿ ಗಣೇಶ, ವಕ್ರತುಂಡ ಗಣಪ ಹೀಗೆ ತರಹೇವಾರಿ ರೂಪದಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ನೋಡುಗರನ್ನು ತನ್ನತ್ತ ಆಕರ್ಷಿಸುತ್ತಿವೆ. ಶನಿವಾರ ಬೆಳಗ್ಗೆಯಿಂದಲೇ ದೇವಸ್ಥಾನ, ಮೂರ್ತಿ ತಯಾರಕರ ಮನೆಗಳಿಂದ ಶುಭ್ರ ವಸ್ತ್ರಧಾರಿಗಳಾಗಿ, ಪಟಾಕಿ ಸಿಡಿಸಿ, ವಾದ್ಯ ವೈಭವಗಳೊಂದಿಗೆ ಗಣೇಶ ಮೂರ್ತಿಗಳನ್ನು ಮನೆಗೆ ಕರೆತರುತ್ತಿರುವ ದೃಶ್ಯಗಳು ಕಂಡು ಬಂದವು.
ಗುಳೇದಗುಡ್ಡ ತಾಲೂಕಿನ ಸೇರಿದಂತೆ ವಿವಿಧ ವೃತ್ತಗಳಲ್ಲಿ, ಪ್ರಮುಖ ಬೀದಿಗಳಲ್ಲಿ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಬೃಹತ್ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ.
ವಿದ್ಯುತ್ ದೀಪಾಲಂಕಾರ : ಪ್ರಟ್ಟಣ ಪ್ರಮುಖ ವೃತ್ತಗಳಲ್ಲಿ ಗಣೇಶ ಪ್ರತಿಷ್ಠಾಪನೆಗಾಗಿ ಪೆಂಡಾಲ ಹಾಕಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಿ ವಿವಿಧ ಭಂಗಿಗಳಲ್ಲಿರುವ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಸ್ಥಳೀಯ ಭಾರತ್ ಮಾರ್ಕೆಟ್, ಕಮತಗಿ ನಾಕಾ, ಚೌಬಜಾರ, ಅರಳಿಕಟ್ಟೆ, ಗಚ್ಚಿನಕಟ್ಟಿ, ಸಾಲೇಶ್ವರ ದೇವಸ್ಥಾನ, ಕಾಬ್ರಾ ಗಲ್ಲಿ, ಚುಂಗಿನ ಓಣಿ, ಮೂಕೇಶ್ವರಿ ದೇವಸ್ಥಾನ, ನಗ್ಲಿ ಪೇಟೆ, ಜಂವಾರ ಓಣಿ, ತಿಪಪಾ ಪೇಟೆ, ಗೋಪಾಲಪ್ಪನ ಸದರ, ಪುರಸಭೆ, ಕೆಇಬಿ ಸೇರಿದಂತೆ ವಿವಿಧೆಡೆ ಆಕರ್ಷಕ ಭಂಗಿಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಅಲಂಕರಿಸಲಾಗಿದೆ…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend