ಗುಳೇದಗುಡ್ಡ: ವಿದ್ಯಾರ್ಥಿಗಳು ಈ ನಾಡಿನ ಆಸ್ತಿ. ವಿದ್ಯಾರ್ಥಿ ಶಕ್ತಿ ರಾಷ್ಟ್ರಕ್ಕೆ ಆಸ್ತಿಯಾಗಿದೆ. ದೇಶದ ಭವಿಷ್ಯ ವಿದ್ಯಾರ್ಥಿಗಳ ಮೇಲಿದೆ…!!!

Listen to this article

ವಿದ್ಯಾರ್ಥಿಗಳು ರಾಷ್ಟ್ರದ ಆಸ್ತಿ
ಗುಳೇದಗುಡ್ಡ: ವಿದ್ಯಾರ್ಥಿಗಳು ಈ ನಾಡಿನ ಆಸ್ತಿ. ವಿದ್ಯಾರ್ಥಿ ಶಕ್ತಿ ರಾಷ್ಟ್ರಕ್ಕೆ ಆಸ್ತಿಯಾಗಿದೆ. ದೇಶದ ಭವಿಷ್ಯ ವಿದ್ಯಾರ್ಥಿಗಳ ಮೇಲಿದೆ. ಸಾಕಷ್ಟು ಮಹನೀಯರು ತಮ್ಮ ಪ್ರಾಣ ತ್ಯಾಗ ಮಾಡಿ ದೇಶ ರಕ್ಷಣೆ ಮಾಡಿದ್ದಾರೆ. ಅಂಥಹ ವೀರ ಮಹನೀಯರ ತ್ಯಾಗ ಬಲಿದಾನವನ್ನು ನಾವೆಲ್ಲ ಸ್ಮರಿಸಬೇಕು. ಅವರಂತೆ ನಡೆದು ರಾಷ್ಟ್ರದ ಆದರ್ಶ ಭವಿಷ್ಯಕ್ಕೆ ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ ಎಂದು ಆರ್.ಎಸ್.ಎಸ್.ವಿಭಾಗ ಸಂಪರ್ಕ ಪ್ರಮುಖ ರವಿ ಶೇಬಿನಬಕಟ್ಟಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಮುರುಘಾಮಠದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಸಿದ್ದ ನಗರ ಅಭ್ಯಾಸ ವರ್ಗ ಉದ್ಘಾಟನೆ ಹಾಗೂ ಪದಗ್ರಹನ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಸಂಸ್ಕøತಿ, ಸಂಸ್ಕಾರ ಉಳಿಸುವ ನಿಟ್ಟಿನಲ್ಲಿ ಬಾಲಗಂಗಾಧರ ತಿಲಕರು ಗಣೇಶೋತ್ಸವಕ್ಕೆ ಚಾಲನೆ ನೀಡಿದರು. ಇದರಿಂದ ಬ್ರೀಟಿಷ ಸರ್ಕಾರ ಕಿತ್ತೊಗೆಯಲು ಸಾಧ್ಯವಾಯಿತು. ‘ಸ್ವರಾಜ್ಯವೇ ನಮ್ಮ ಜನ್ಮ ಸಿದ್ಧ ಹಕ್ಕು’ ಎಂದು ಪ್ರತಿಪಾಧಿಸಿದ್ದನ್ನು ಸ್ಮರಿಸಿದರು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ, ವಿಭಾಗ ಸಂಚಾಲಕ ಹರ್ಷಾ ನಾಯಕ, ಉಪನ್ಯಾಸಕ ಯುವರಾಜ ಗಾಜಿ ಮಾತನಾಡಿ, ಒಂದು ದೇಶ ಪ್ರಬಲವಾಗಿ ಬೆಳೆಯಲು ಆ ರಾಷ್ಟ್ರದ ಯುವ ಶಕ್ತಿ ಶ್ರಮ ಅಪಾರವಾಗಿರುತ್ತದೆ. ಭಾರತ ವಿದ್ಯಾರ್ಥಿಗಳು ಆದರ್ಶ ಸಂಸ್ಕøತಿ ಬೆಳೆಸಿಕೊಂಡು ದೇಶದ ಉನ್ನತಿಗೆ ಕೆಲಸ ಮಾಡಬೇಕೆಂದರು.
ಇದೇ ಸಂದರ್ಭದಲ್ಲಿ ಎಬಿವಿಪಿ ನಗರ ಕಾರ್ಯದರ್ಶಿಯಾಗಿ ಅಮಿತ ವಾಳದ, ನಗರ ಸಹಕಾರ್ಯದರ್ಶಿಯಾಗಿ ಮೈತ್ರೇಯಿ ರಾಜನಾಳ ಇತರರಿಗೆ ಪದಗ್ರಹನ ನಡೆಯಿತು. ಕಾರ್ಯಕ್ರಮದಲ್ಲಿ ರವಿ ಉಪ್ಪಾರ, ಪ್ರಥಮೇಶ ವಾಗಮೋಡೆ, ಅಪೂರ್ವ ಚವ್ಹಾಣ, ಪ್ರವೀಣ ರಾಠೋಡ, ಮಂಝುನಾಥ ರಾಠೋಡ, ಪ್ರಜ್ವಲ ಹುನಗುಂದ ಇತರರು ಇದ್ದರು…

ವರದಿ. ಸಚಿನ್, ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend