30kg! ಘಟಪ್ರಭಾ ನದಿಯಲ್ಲಿ ಬಲೆಗೆ ಬಿತ್ತು ಬೃಹತ್ ಗಾತ್ರದ ಮೀನು!
ಬಾಗಲಕೋಟೆ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ. ಘಟಪ್ರಭಾ ನದಿಯಲ್ಲಿ ಈ ಮೀನು ಸಿಕ್ಕಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಮಾಚಕನೂರು ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಮಹಾಂತೇಶ್ ಕೆಂಚಪ್ಪಗೋಳ ಎಂಬವರ ಗಾಳಕ್ಕೆ ಬೃಹತ್ ಗಾತ್ರದ ಮೀನು ಬಿದ್ದಿದೆ.
ಮಾಚಕನೂರು ಗ್ರಾಮದ ಬಳಿ ಹಾದು ಹೋಗಿರುವ ಘಟಪ್ರಭಾ ನದಿಯಲ್ಲಿ ಮಹಾಂತೇಶ್ ಬಲೆ ಹಾಕಿದ್ದರು. ನದಿಯಲ್ಲಿ ಹೆಚ್ಚಿನ ನೀರು ಹರಿದು ಬರುತ್ತಿರುವ ಕಾರಣ ಮೀನುಗಳನ್ನು ಸೆರೆ ಹಿಡಿಯಲು ಬಲೆ ಹಾಕಿದ್ದರು. ಈ ವೇಳೆ 30 ಕೆಜಿ ಮೀನು ಮಹಾಂತೇಶ್ ಅವರ ಬಲೆಗೆ ಸಿಕ್ಕಿದೆ…
ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030