ಪಟ್ಟಸಾಲೆ ಮಠಕ್ಕೆ ನೂತನ ಪೀಠಾಧಿಪತಿಯಾಗಿ ಗುರುಬಸವ ದೇವರು…!!!

Listen to this article

ಪಟ್ಟಸಾಲೆ ಮಠಕ್ಕೆ ನೂತನ ಪೀಠಾಧಿಪತಿ ಗುರುಬಸವ ದೇವರು
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಶ್ರೀಮದ್ ಹಿಮಾವತ್ಕೆದಾರ ವೈರಾಗ್ಯ ಸಿಂಹಾಸನಾಧೀಶ ಏಕೋರಾಮ ಕರಕಮಲ ಸಂಜಾತ ಶ್ರೀ 1008 ಕರ್ತೃ ಜಗದ್ಗುರು ಗುರುಷಸಿದ್ದ ಪಟ್ಟಧ್ಯಾರ್ಯ ಮಹಾಸ್ವಾಮಿಗಳವರ 39ನೇ ವಾರ್ಷಿಕ ಪುಣ್ಯರಾದನೆಯ ಶರಣ ಸಂಗಮ ಸಮಾರಂಭದಲ್ಲಿ ಪಟ್ಟಸಾಲಿ ನೇಕಾರ ಗುರುಪೀಠವಾದ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬ್ರಹನ್ ಮಠದ ಉತ್ತರಾಧಿಕಾರಿಯನ್ನಾಗಿ ಪೂಜ್ಯ ಶ್ರೀ ಗುರುಬಸವ ದೇವರ ಪಟ್ಟಾಭಿಷೇಕ ಸಮಾರಂಭ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸುವರ್ಣ ಮಹೋತ್ಸವದ ಕಾರ್ಯಕ್ರಮ ಡಿಸೆಂಬರ್ 15 ರಿಂದ 23 ವರೆಗೆ ಆಯೋಜಿಸಲಾಗಿ.

ಬಾಗಲಕೋಟ ಜಿಲ್ಲೆ ಗುಳೇದಗುಡ್ಡ ದಲ್ಲಿ ಇರುವ ಜಗದ್ಗುರು ಗುರು ಸಿದ್ದೇಶ್ವರ ಮಠದ ಅವರಣದಲ್ಲಿ ಡಿಸೆಂಬರ್ 15 ರಿಂದ ಡಿಸೆಂಬರ್ 23 ರವರೆಗೆ ಗುರುಪೀಠದ ಮೂರನೇ ಪೀಠಾಧಿಕಾರಿಗಳಾಗಲಿರುವ ಪೂಜ್ಯ ಶ್ರೀ ಗುರುಬಸವ ದೇವರ ಪಟ್ಟಾಭಿಷೇಕ ಹಾಗು ಶ್ರೀ ಜಗದ್ಗುರು ಗುರುಸಿದ್ದೇಶ್ವರ ವಿದ್ಯಾವರ್ಧಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸುವರ್ಣ ಮಹೋತ್ಸವನ್ನು ಸ್ಮರಣ ಸಂಚಿಕೆ ಗಳನ್ನು ಹೊರತರುವುದರೊಂದಿಗೆ
ನೇರವೇರಿಸಲು ತಿರ್ಮಾನಿಸಿದೆ. ಆದ್ದರಿಂದ ಸಮಸ್ತ ಭಕ್ತಮಹಾಶಯರು ಈ ಚಾರಿತ್ರಿಕ ದಾಖಲೆಯ ಸಮಾರಂಭ ಐತಿಹಾಸಿಕ ವಾಗುವಂತೆ ಕಾಯ, ವಾಚಾ , ಮನಸ ತ್ರಿಕರಣ ಪೂರ್ವಕವಾಗಿ ವಿಜೃಭನೆಯಿಂದ ನೇಡೆಸಲು ಕಾರ್ಯಕ್ರಮದ ಪೂರ್ವ ಭಾವಿ ಸಭೆಯೆಲ್ಲಿ ಪಟ್ಟಸಾಲಿ ನೇಕಾರರ ಗುರು ಪೀಠದ 1008 ಜಗದ್ಗುರು ಗುರುಶಿದ್ದೇಶ್ವರ ಪಟ್ಟದ್ದಾರ್ಯ ಬಸವರಾಜ ಸ್ವಾಮೀಜಿ ತಿಳಿಸಿದರು. 1937 ರಲ್ಲಿ ಗುರುಶಿದ್ದೇಶ್ವರ ಸ್ವಾಮೀಜಿಯವರು ಪ್ರಥಮ ಪೀಠಾದಿಕಾರಿಗಳಾಗಿದ್ದರು . ರಾಜ್ಯದಲ್ಲಿ ಶರಣ ಸಂಸ್ಕೃತಿ ಉತ್ಸವದ ಮಾಧರಿ ಪರಿಚಯಿಸಿದ ಕೀರ್ತಿ ಪಟ್ಟಸಾಲಿ ಮಠಕ್ಕೆ ಸಲ್ಲುತ್ತದೆ ಎಂದರು.

ವರದಿಗಾರ: ಸಚಿನ್ ಅಲದಿ. ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend