ತಿಂಗಳ ಸೊಬಗು ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾ ಪ್ರತಿಭೆಗಳ ಅನಾವರಣ…!!!

Listen to this article

ತಿಂಗಳ ಸೊಬಗು ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾ ಪ್ರತಿಭೆಗಳ ಅನಾವರಣ

ಬಳ್ಳಾರಿ,:ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಂಸ್ಕೃತಿಕ ಸಮುಚ್ಛಯ ನಿರ್ವಹಣಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ
ನಗರದ ಡಾ.ರಾಜ್‌ಕುಮಾರ್ ರಸ್ತೆಯ ಸಾಂಸ್ಕೃತಿಕ ಸಮುಚ್ಛಯ ಆವರಣದ ನಾಡೋಜ ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ
ಶನಿವಾರದಂದು ಆಯೋಜಿಸಿದ್ದ ತಿಂಗಳ ಸೊಬಗು ಸಾಂಸ್ಕೃತಿಕ ಕಾರ್ಯಕ್ರಮವು ಸ್ಥಳೀಯ ಕಲಾ ಪ್ರತಿಭೆಗಳ ಕಲೆಗೆ ಅನಾವರಣಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮದಲ್ಲಿ ನೆರೆದಿದ್ದವರು ಭರಪೂರ ಮನರಂಜೆ ಪಡೆದು ಸಾಂಸ್ಕೃತಿಕ ಕಲೆಗೆ ಮನಸೋತರು.

ನಗರದ ಸರ್ಕಾರಿ ಬಾಲಕಿಯರ ಮತ್ತು ಬಾಲಕರ ಬಾಲಮಂದಿರ ತಂಡಗಳ ಜಾನಪದ ನೃತ್ಯವು ಜಾನಪದ ಪ್ರೇಮಿಗಳಲ್ಲಿ ಮನದಲ್ಲಿ ಮನಸೂರೆಗೊಂಡಿತು.

ಬಳ್ಳಾರಿ ತಾಲ್ಲೂಕಿನ ಸಿಂಧುವಾಳ ಗ್ರಾಮದ ಪರಮೇಶ್.ಕೆ ಅವರ ಕೋಲಾಟ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಮನಸೋತು ಚಪ್ಪಾಳೆ ಸುರಿಮಳೆಗೈದರು.

ಸಿರುಗುಪ್ಪದ ವೀರೇಶ್ ದಳವಾಯಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮಕ್ಕೆ ಸಂಗೀತ ಪ್ರಿಯರು ತಲೆದೂಗಿದರು.

ಒಟ್ಟಿನಲ್ಲಿ ಕಲಾಭಿಮಾನಿಗಳು ತಿಂಗಳ ಸೊಬಗು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಣ್ಮನ ಸೆಳೆದಂತೆ ಸಾಂಸ್ಕೃತಿಕ ಮನರಂಜನೆ ಪಡೆದುಕೊಂಡರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಕಲಾಭಿಮಾನಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend