ಕ.ಕ ಭಾಗ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ದೂರಗೊಳಿಸೋಣ; ಡಾ.ವೈ ರಮೇಶ್ ಬಾಬು ಕರೆ…!!!

Listen to this article

ಕ.ಕ ಭಾಗ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ದೂರಗೊಳಿಸೋಣ; ಡಾ.ವೈ ರಮೇಶ್ ಬಾಬು ಕರೆ

ಬಳ್ಳಾರಿ:ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ 371(ಜೆ)ನಡಿ ವಿಶೇಷ ಸ್ಥಾನಮಾನ ನೀಡಿದ್ದು, ಅವಕಾಶ ಸದುಪಯೋಗ ಪಡೆದುಕೊಂಡು ಕ.ಕ ಭಾಗ ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ದೂರಗೊಳಿಸೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಹೇಳಿದರು.
ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಗರದ ಅನಂತಪುರ ರಸ್ತೆಯ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.
ಭಾರತ ದೇಶಕ್ಕೆ 1947, ಆಗಷ್ಟ್.15 ರಂದು ಸ್ವಾತಂತ್ರ‍್ಯ ದೊರೆತಾಗ ಈಗಿನ ಕಲ್ಯಾಣ ಕರ್ನಾಟಕ ಭಾಗವು ಹೈದರಾಬಾದ್ ನಿಜಾಮರ ಅಳ್ವಿಕೆಯಲ್ಲಿತ್ತು. ಉಕ್ಕಿನ ಮನುಷ್ಯ ಸರ್ಧಾರ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ಹೋರಾಟ ನಡೆಸಿ 1948 ಸೆಪ್ಟೆಂಬರ್.17 ರಂದು ವಿಮೋಚನೆ ಹೊಂದಲಾಯಿತು.

ಹಿಂದುಳಿದ ಜಿಲ್ಲೆ ಪ್ರದೇಶವೆಂಬ ಪಟ್ಟಿಯಿಂದ ಹೊರಬರಲು ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳನ್ನು ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಸೌಕರ್ಯ ಒದಗಿಸಲಾಗುತ್ತಿದ್ದು, ಸರಳ ಹೆರಿಗೆ ವ್ಯವಸ್ಥೆಗಾಗಿ ಮನೆಯಿಂದ ಆಸ್ಪತ್ರೆಗೆ ಬರಲು 108 ವಾಹನ, ಆಸ್ಪತ್ರೆಯಲ್ಲಿ ಸುಸಜ್ಜಿತ ಹೆರಿಗೆ ಕೋಣೆ, ವಾರ್ಡ್, ಪ್ರಯೋಗಾಲಯ ಸೇವೆ, ಉಚಿತ ಊಟ, ಔಷಧಿ, ರಕ್ತ ಮನೆ ಬಿಡಲು ನಗುಮಗು ವಾಹನ ಒದಗಿಸುವಿಕೆ, ಜನನಿ ಸುರಕ್ಷಾ ಯೋಜನೆ ಅಡಿ 600 ರೂ. ಹಾಗೂ 700 ರೂ. ಸಹಾಯಧನ ಅವರ ಖಾತೆಗೆ ಸೌಲಭ್ಯದೊಂದಿಗೆ ತಾಯಿ ಮತ್ತು ಮಕ್ಕಳ ಆರೋಗ್ಯವನ್ನು ನಾವೆಲ್ಲರೂ ಕಾಪಾಡಲು ಕೈಜೊಡಿಸೋಣ, ಮತ್ತು ಸೌಲಭ್ಯಗಳನ್ನು ಜನತೆ ಕೇಳಿದಾಗ ತಕ್ಷಣವೇ ಒದಗಿಸುವ ದಿಶೆಯಲ್ಲಿ ಸನ್ನದ್ಧರಾಗಿಸಿ ಜಿಲ್ಲೆಯನ್ನು ಆರೋಗ್ಯ ಸೂಚಂಕದಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಅಭಿವೃದ್ಧಿ ಪಥದ ಕಡೆ ಮುನ್ನಡೆಸೊಣ ಎಂದು ತಿಳಿಸಿದರು.ಸಾರ್ವಜನಿಕರು ಆಸ್ಪತ್ರೆಗೆ ಬಂದಾಗ ಸೌಜನ್ಯ ಪೂರ್ವಕವಾಗಿ ಮಾತನಾಡಿಸಿ ರೋಗಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಿ ಸರ್ವರ ಆರೋಗ್ಯ ಸುಧಾರಣೆಗೆ ಎಲ್ಲರೂ ಪಣತೊಡಬೇಕು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಆರ್.ಅಬ್ದುಲ್ಲಾ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರಕುಮಾರ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಸಹಾಯಕ ಆಡಳಿತ ಅಧಿಕಾರಿ ಮೆಹಬೂಬ್ ಖಾನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ.ಹೆಚ್ ದಾಸಪ್ಪನವರ, ಕಾಯಕಲ್ಪ ಕಾರ್ಯಕ್ರಮ ಸಂಯೋಜಕ ಡಾ.ಸುರೇಶ ಕುಮಾರ, ಕಛೇರಿ ಅಧಿಕ್ಷಕ ಬಸವರಾಜ್, ರವಿಚಂದ್ರ, ಡಿಎನ್‌ಓ ಗಿರೀಶ್ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು, ಸಲಹೆಗಾರರು, ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend