ಮಾನವನ ಆರೋಗ್ಯ ವೃದ್ಧಿಗೆ ಹಾಲಿನ ಉತ್ಪನ್ನಗಳು ಸಹಕಾರಿ: ಎಸ್.ವೆಂಕಟೇಶ ಗೌಡ…!!!

Listen to this article

ಮಾನವನ ಆರೋಗ್ಯ ವೃದ್ಧಿಗೆ ಹಾಲಿನ ಉತ್ಪನ್ನಗಳು ಸಹಕಾರಿ: ಎಸ್.ವೆಂಕಟೇಶ ಗೌಡ
ಬಳ್ಳಾರಿ:ಮಾನವನ ಆರೋಗ್ಯ ವೃದ್ಧಿಗೆ ಹಾಲಿನ ಉತ್ಪನ್ನಗಳಲ್ಲಿ ಲಭ್ಯವಾಗುವ ಕ್ಯಾಲಿಯಂ, ಪ್ರೋಟಿನ್, ವಿಟಮಿನ್-ಬಿ2 ಮುಂತಾದ ಪೋಷಕಾಂಶಗಳು ಸಹಕಾರಿಯಾಗಿವೆ ಎಂದು ರಾಬಕೋವಿ ಜಿಲ್ಲಾ ಹಾಲು ಒಕ್ಕೂಟದ ಪ್ರಭಾರ ವ್ಯವಸ್ಥಾಪಕ (ಮಾರುಕಟ್ಟೆ) ಎಸ್.ವೆಂಕಟೇಶ ಗೌಡ ಅವರು ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆವರಣದ ಶಾಲೆಯಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ವಿಶ್ವ ಹಾಲು ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2001 ರಲ್ಲಿ ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು (ಎಫ್‌ಎಒ) ಹಾಲಿನ ಮಹತ್ವದ ಬಗ್ಗೆ ಗುರುತಿಸಿ ವಿಶ್ವ ಹಾಲು ದಿನಾಚರಣೆಯನ್ನು ಆಚರಿಸಲು ಪ್ರಾರಂಭಿಸಲಾಯಿತು. ಡೈರಿ ಉದ್ಯಮಕ್ಕೆ ಸಂಬAಧಿಸಿದ ಯಾವುದೇ ರೀತಿಯಲ್ಲಿ ಸಾಧ್ಯವಿರುವ ಉಪಕ್ರಮಗಳ ಬಗ್ಗೆ ಅರಿವು ಮೂಡಿಸಲು ಮತ್ತು ಬೆಂಬಲಿಸಲು, ಅವಕಾಶ ಒದಗಿಸಲು ಈ ದಿನದ ಗುರಿಯಾಗಿದೆ ಎಂದು ತಿಳಿಸಿದರು.
ಜೀವನದಲ್ಲಿ ಹಾಲಿನ ಅಗತ್ಯತೆಗೆ ಪ್ರಾಮುಖ್ಯತೆ ಹೊಂದಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಒದಗಿಸುವುದಲ್ಲದೇ, ಹಾಲಿನಲ್ಲಿರುವ ಕ್ಯಾಲಿಯಂ, ಪ್ರೋಟಿನ್, ವಿಟಮಿನ್-ಬಿ2 ಮುಂತಾದ ಪೋಷಕಾಂಶಗಳ ಬಗ್ಗೆ ಜನರಿಗೆ ತಿಳಿಸುವುದಾಗಿದೆ ಎಂದರು.
ರಾಬಕೋವಿಯ ಪ್ರಭಾರ ವ್ಯವಸ್ಥಾಪಕ (ಡೇರಿ) ಟಿ.ಮಲ್ಲಿಕಾರ್ಜುನ ಅವರು ಮಾತನಾಡಿ, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಸಮತೋಲನ ಆಹಾರದಲ್ಲಿರುವ ಪೋಷಕಾಂಶಗಳಾಗಿವೆ. ಇವು ಸಧೃಢ ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.


ರಾಬಕೋವಿಯ ವ್ಯವಸ್ಥಾಪಕ (ಶೇಖರಣೆ) ಡಾ.ಮಹೇಶ ಲಕ್ಕಣ್ಣನವರ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ರೈತರಿಂದಲೇ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಗುಣಮಟ್ಟದ ಹಾಲನ್ನು ಶೇಖರಿಸಿ ಬಿ.ಎಂ.ಸಿ ಕೇಂದ್ರಗಳಿoದಒಕ್ಕೂಟಕ್ಕೆ ಸರಬರಾಜು ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ರಾಬಕೋವಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಕಿ (ಮಾ) ಕೆ.ಆರ್.ಇಂದುಕಲಾ, ಮಾರುಕಟ್ಟೆ ಸಹಾಯಕರಾದ ಲೋಹಿತ ಕುಮಾರ್, ಸಿ.ಎನ್.ಮಂಜುನಾಥ, ಬಾಬು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀಕ್ಷಕರಾದ ಸುವರ್ಣ ಲತಾ, ನೀರಜಾ, ಪಾರ್ವತಮ್ಮ, ಕು.ಪೂಜ ಸೇರಿದಂತೆ ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನಂದಿನಿ ಗುಡ್ ಲೈಫ್ ಟೆಟ್ರ ಪ್ಯಾಕ್ ಹಾಲು ವಿತರಿಸಲಾಯಿತು….

ವರದಿ. ವಿರೇಶ್, ಎಚ್, ಬಳ್ಳಾರಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend