ಪಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಸಿದ್ದು ಸವದಿ…!!!

Listen to this article

ಪಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಸಿದ್ದು ಸವದಿ

ಮಹಾಲಿಂಗಪುರ : ಹಕ್ಕು ಪತ್ರ ನಿರಾಶ್ರಿತರನ್ನು ಒಡೆಯರನ್ನಾಗಿ ಮಾಡುತ್ತದೆ. ಹಾಗಾಗಿ ಸಾಕಷ್ಟು ವರ್ಷಗಳಿಂದ ಪರದಾಡುತ್ತಿದ್ದ ನಿರಾಶ್ರಿತರಿಗೆ ಗರಿಷ್ಠ ಸಂಖ್ಯೆಯ ಹಕ್ಕುಪತ್ರ ವಿತರಿಸುತ್ತಿರುವುದು ನಮ್ಮ ಸರ್ಕಾರದ ಶ್ರೇಷ್ಠ ಕಾರ್ಯಗಳಲ್ಲೊಂದು ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು.
ಸ್ಥಳೀಯ ಪುರಸಭೆಯಲ್ಲಿ ಹಮ್ಮಿಕೊಂಡಿದ್ದ ಕೊಳಗೇರಿ ಪ್ರದೇಶಗಳ ನಿವಾಸಿಗಳ ಹಕ್ಕು ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಕ್ಕು ಪತ್ರ ಬಡವನಿಗೆ ಬಲ ನೀಡುತ್ತದೆ, ಸರ್ಕಾರಿ ಸೌಲಭ್ಯ ಪಡೆಯಲು ಅನುಕೂಲವಾಗಿ ಬದುಕಿನಲ್ಲಿ ಭರವಸೆ ತುಂಬುತ್ತದೆ.ನಮ್ಮ ಸರ್ಕಾರ ಯೋಜನೆಗಳ ಸರ್ಕಾರ ನಮೋ ಸರ್ಕಾರದ ಯೋಜನೆಯ ಲಾಭವನ್ನು ಪಡೆಯದ ಒಂದೇ ಒಂದು ಕುಟುಂಬ ದೇಶದಲ್ಲಿಲ್ಲ ಇದು ನಮ್ಮ ಪ್ರಧಾನಿ ಮೋದಿ ಅವರ ಹೆಗ್ಗಳಿಕೆ ಆ ನಿಟ್ಟಿನಲ್ಲಿ ಕ್ಷೇತ್ರದ ಜನತೆಗೆ 4 ರಿಂದ 5 ಸಾವಿರ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಹಿಂದಿನ ಅವಧಿಯಲ್ಲಿ ಸ್ಥಳೀಯ ಕೆಂಗೇರಿಮಡ್ಡಿಯಲ್ಲಿ ಏಕಕಾಲಕ್ಕೆ 600ಕ್ಕೂ ಅಧಿಕ ಹಕ್ಕು ಪತ್ರಗಳನ್ನು ವಿತರಿಸಿದ್ದೇವೆ ಈಗಲೂ ಸಹ ಬಡವರ ಸಂಕಷ್ಟಗಳನ್ನು ನಿವಾರಣೆ ಮಾಡುವ ಉದ್ದೇಶದಿಂದ ಅಧಿಕೃತ ಹಕ್ಕುಪತ್ರ ವಿತರಣೆ ಕಂಪ್ಯೂಟರ್ ಉತಾರೆ ವಿತರಣೆ ಮಾಡುತ್ತಿದ್ದೇವೆ ಎಂದರು.
400 ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಇಂದು ಕಲ್ಪಡ ಬಡಾವಣೆಯ 131 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು. ಅಕ್ರಮ ಸಕ್ರಮ ಯೋಜನೆಯಲ್ಲಿ ಕಲ್ಪಡ ಬಡಾವಣೆಯ 352 ಕೆಂಗೇರಿಮಡ್ಡಿಯ ೮೮೩ ಹಕ್ಕುಪತ್ರಗಳು ಸಿದ್ಧವಾಗುತ್ತಿದ್ದು ಶೀಘ್ರ ವಿತರಿಸಲಾಗುವುದೆಂದರು.
ಪುರಸಭಾ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಅಧ್ಯಕ್ಷತೆ ವಹಿಸಿದ್ದರು, ಸುನಿಲಗೌಡ ಪಾಟೀಲ,ಜಯವಂತ ಕಾಗಿ, ಮಹಾಲಿಂಗ ಮುದ್ದಾಪುರ, ಚನ್ನಪ್ಪ ರಾಮೋಜಿ, ಕೊಳಚೆ ನಿರ್ಮೂಲನ ಮಂಡಳಿ ಅಧಿಕಾರಿ ಸಸಾಲಟ್ಟಿ, ಮುಖ್ಯಾಧಿಕಾರಿ ಜಗದೀಶ ಈಟಿ ವೇದಿಕೆ ಮೇಲಿದ್ದರು ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಈರಪ್ಪ ದಿನ್ನಿಮನಿ ಇತರರಿದ್ದರು.

ವರದಿ.ಬಸವರಾಜ ನಂದೆಪ್ಪನವರ
ಮಹಾಲಿಂಗಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend