ನಿರಾಶ್ರಿತ ವೃದ್ಧನ ರಕ್ಷಣೆಗೆ ಶೀಘ್ರ ಸ್ಪಂದಿಸಿದ ಧಾರವಾಡ ಜಿಲ್ಲಾಡಳಿತ…!!!

Listen to this article

ನಿರಾಶ್ರಿತ ವೃದ್ಧನ ರಕ್ಷಣೆಗೆ ಶೀಘ್ರ ಸ್ಪಂದಿಸಿದ ಧಾರವಾಡ ಜಿಲ್ಲಾಡಳಿತ

ಧಾರವಾಡ (ಕರ್ನಾಟಕ ವಾರ್ತೆ) ಆಗಸ್ಟ್ 23: ನಗರದ ಜನ ನಿಬಿಡ ಹಾಗೂ ವಾಹನ ನಿಬಿಡ ಸ್ಥಳ, ಆಲೂರು ವೆಂಕಟರಾವ ವೃತ್ತ (ಜ್ಯುಬಿಲಿ ಸರ್ಕಲ್) ಬಳಿಯ, ಪಿಜ್ಜಾ ಅಡ್ಡದ ಬುಡದ ಬೃಹತ್ ಗಟಾರು ಬಳಿ ಕಳೆದ 15 ದಿನಗಳಿಂದ ಓರ್ವ ನಿರಾಶ್ರಿತ ವೃದ್ಧ ಹಾಗೆ ಒರಗಿಕೊಂಡಿದ್ದರು.

ಮೂರಕಟ್ಟಿ ಗ್ರಾಮದ ಕೃಷಿಕ ಶಿವಪ್ಪ ಅಂತ ಅವರು ಹೇಳಿಕೊಳ್ಳುತ್ತಿದ್ದರು. ಮನನೊಂದು ಊರು ಬಿಟ್ಟು, ಭಿಕ್ಷಾಟನೆಯಲ್ಲಿ ತೊಡಗಿದ್ದರು. ಶಕ್ತಿ ಕುಂದಿ ಮಳೆಯಲ್ಲಿ ನೆನೆಯುತ್ತ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರು.

ಅಭ್ಯುದಯ ಪತ್ರಕರ್ತ ಹರ್ಷವರ್ಧನ್ ಶೀಲವಂತ ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಅಂಚಿಸಿದ ಟ್ವೀಟ್‍ಗೆ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಕೂಡಲೇ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಲು ಆದೇಶಿಸಿದ್ದಾರೆ.

ಹಿರಿಯ ಜೀವ ಸದ್ಯಕ್ಕೆ ತುಸು ಗೆಲುವಾಗಿ, ಉಸಿರಾಡುವಂತಾಗಿದೆ. ಹಿರಿಯ ನಾಗರಿಕರ ಇಲಾಖೆಯ ಜಿಲ್ಲಾ ಅಧಿಕಾರಿ ಜಗದೀಶ, ಉಪ ನಗರ ಠಾಣೆಯ  ಪೋಲೀಸ್ ಸಿಬ್ಬಂದಿ, ಡಿಮ್ಹಾನ್ಸ್ ಸಿಬ್ಬಂದಿ ಹಾಗೂ ರಾಯಪುರ ನಿರಾಶ್ರಿತರ ಪುನರ್ವಸತಿ ಕೇಂದ್ರದ ಸಿಬ್ಬಂದಿಗಳ ಸಕಾಲಿಕ ಪ್ರಯತ್ನ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend