ದೇಶದ ಸುಸ್ಥಿರ ಅಭಿವೃದ್ಧಿಗೆ ಯುವಕರ ಪಾತ್ರ ಅತ್ಯಂತ ಪ್ರಮುಖವಾಗಿದೆ; ಡಾ.ಶಶಿ ಪಾಟೀಲ…!!!

Listen to this article

ದೇಶದ ಸುಸ್ಥಿರ ಅಭಿವೃದ್ಧಿಗೆ ಯುವಕರ ಪಾತ್ರ ಅತ್ಯಂತ ಪ್ರಮುಖವಾಗಿದೆ; ಡಾ.ಶಶಿ ಪಾಟೀಲ

ಧಾರವಾಡ ; ಭಾರತ ದೇಶದಲ್ಲಿ ಹೆಚ್ಚಾಗಿ ಯುವಕರೇ ಇರುವುದರಿಂದ ಯುವಕರಿಗೆ ತಂತ್ರಜ್ಞಾನದ ಮಾಹಿತಿ ಇದೆ. ದೇಶದ ಸುಸ್ಥಿರ ಅಭಿವೃದ್ಧಿಗೊಳಿಸಲು ಯುವಕರ ಪಾತ್ರ ಅ ಅತ್ಯಂತ ಪ್ರಮುಖವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿ ಪಾಟೀಲ ಅವರು ಹೇಳಿದರು.

ಅವರು ಇಂದು ಸಂಜೆ ಕರ್ನಾಟಕ ವಿಶ್ವವಿದ್ಯಾಲಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕದಲ್ಲಿ ಜಿಲ್ಲಾ ಏಡ್ಸ್ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕರ್ನಾಟಕ ವಿಶ್ವ ವಿಶ್ವವಿದ್ಯಾಲಯ, ಎನ್.ಎಸ್.ಎಸ್. ಕೋಶ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಅಂತರಾಷ್ಟ್ರೀಯ ಯುವ ದಿನಾಚರಣೆಯ ಹಾಗೂ ಹೆಚ್.ಐ.ವಿ. ತಡೆಗಟ್ಟಲು ತೀವ್ರಗೊಳಿಸುವ ಐಇಸಿ ಪ್ರಚಾರಾಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ಇತ್ತಿಚಿನ ದಿನಮಾನಗಳಲ್ಲಿ ನಮಗೆ ಬೇಕಾಗಿರುವ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ತಂತ್ರಜ್ಞಾನದ ಮೂಲಕ ಪಡೆಯಬಹುದು. ದೇಶ ವಿದೇಶಗಳಲ್ಲಿ ನಡೆಯುವಂತಹ ಯುದ್ಧ, ಕ್ರೀಡೆ, ಮನರಂಜನೆ ಮುಂತಾದವುಗಳನ್ನು ನಮ್ಮ ಕೈಯಲ್ಲಿ ಇರುವಂತಹ ಮೊಬೈಲ್‍ಗಳ ಮೂಲಕ ಮಾಹಿತಿಯನ್ನು ತಿಳಿಯಲು ಸಹಾಯಕವಾಗಿದೆ. ಇಂದು ಪ್ರಪಂಚದಲ್ಲಿ ಬೇರೆ ಬೇರೆ ದೇಶಗಳ ಜೊತೆ ತಂತ್ರಜ್ಞಾನದಲ್ಲಿ ಸ್ಫರ್ಧೆ ನಡೆಸಲು ಭಾರತ ದೇಶ ಮುಂಚೂಣಿಯಲ್ಲಿದೆ ಎಂದು ಅವರು ತಿಳಿಸಿದರು.

ಕ.ವಿ.ವಿ ಕುಲಸಚಿವ ಕೆ.ಚನ್ನಪ್ಪ ಅವರು ಮಾತನಾಡಿ, ಮೊದಲು ಗುರುಕುಲಗಳಲ್ಲಿ ಜ್ಞಾನಾರ್ಜನೆಗಾಗಿ ಕುಳಿತು ಪಾಠ, ಆಚಾರ, ವಿಚಾರಗಳನ್ನು ತಿಳಿದು ಕೊಳ್ಳುತ್ತಿದೆವು ಇತ್ತೀಚಿನ ದಿನಗಳಲ್ಲಿ ಯುವಕರು ಲೈಬ್ರೆರಿಗಳಿಗೆ ಅವಲಂಬಿತರಾಗಿದ್ದಾರೆ. ಯುವಕರು ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಯುವಕರು ತಮ್ಮ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಡಿಜಿಟಲ್‍ಗಳಿಂದ ಲಾಭ ಮತ್ತು ನಷ್ಟಗಳು ಎರಡು ಇವೆ ಇದನ್ನು ನಮಗೆ ಬೇಕಾಗುವಷ್ಟು ಮಾತ್ರ ಬಳಕೆ ಮಾಡಿಕೊಳ್ಳಬೇಕು. ಡಿಜಿಟಲ್ ಕಾರಣದಿಂದ ಹೆಚ್ಚಾಗಿ ಜನರ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಅಗತ್ಯ ರೂಪದಲ್ಲಿ ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಂದು ಕ್ಷೇತ್ರವು ಆನ್ಲೈನ್ ಆಗಿ ಪರಿವರ್ತನೆಯಾಗುತ್ತಿರುವದರಿಂದ ಮನುಷ್ಯನ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುತ್ತಿದೆ ಎಂದು ಅವರು ಹೇಳಿದರು.

ಡಾಪ್ಕು ಕಚೇರಿಯ ಮೇಲ್ವಿಚಾರಕ ಶಂಕರಗೌಡ ವಿ.ಪಾಟೀಲ ಅವರು ಹೆಚ್.ಐ.ವಿ.ಏಡ್ಸ್ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕ.ವಿ.ವಿ.ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರಭಾ ಎಸ್. ಗುಡ್ಡದಾನ್ವೇರಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಎಸ್.ಬಿ.ಕಳಸೂರಮಠ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ರವೀಂದ್ರ ಬೊವೇರ, ಕ.ವಿ.ವಿ ಯ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಾ. ಎನ್.ಎಸ್.ತಳವಾರ, ಕ.ವಿ.ವಿ. ಎನ್.ಎಸ್.ಎಸ್.ಕೋಶದ ಸಂಯೋಜನಾಧಿಕಾರಿ ಪ್ರೋ .ಎಂ.ದಳಪತಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳು, ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು…

ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend