ಹಾಸ್ಟೆಲ್ ಗಳನ್ನು ಮನೆಯಂತೆ ಸ್ವಚ್ಛತೆ ಕಾಪಾಡಿ…!!!

Listen to this article

ಚನ್ನಗಿರಿ: ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಬಿಸಿಎಂ ಇಲಾಖೆ ತಾಲೂಕು ಕಲ್ಯಾಣಾಧಿಕಾರಿ ರವೀಂದ್ರ ಅಥರ್ಗ ಶುಕ್ರವಾರ ದಿಢೀರ್ ಭೇಟಿ ನೀಡಿ, ಹಾಸ್ಟೆಲ್ ವ್ಯವಸ್ಥೆ ಪರಿಶೀಲನೆ ನಡೆಸಿದರು.

ತಾಲೂಕು ಕಲ್ಯಾಣಾಧಿಕಾರಿ ರವೀಂದ್ರ ಅಥರ್ಗ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮಗಳ ಮಕ್ಕಳು ವ್ಯಾಸಂಗ ಮಾಡಲೆಂದು ಹಾಸ್ಟೆಲ್ ಸೇರುತ್ತಾರೆ.

ಅವರಿಗೆ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು. ಮನೆಯಂತೆ ಸ್ವಚ್ಛತೆ ಕಾಪಾಡಬೇಕು. ಶುದ್ಧ ಕುಡಿಯುವ ನೀರು, ಸಕಾಲಕ್ಕೆ ಊಟದ ವ್ಯವಸ್ಥೆ ಆಗಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಬಾಲಕಿಯರ ವಿದ್ಯಾರ್ಥಿನಿಲಯವಾಗಿರುವ ಕಾರಣ ರಾತ್ರಿ ವೇಳೆ ವಾಚ್‌ಮನ್‌ಗಳು ಎಲ್ಲಿಯೂ ಹೋಗಬಾರದು. ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕುಟುಂಬದ ಸದಸ್ಯರು ಬಂದರೆ ಮಾತ್ರ ಹೊರಗೆ ಕಳುಹಿಸಬೇಕು. ಹಾಜರಾತಿ ಪುಸ್ತಕ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಹಾಸ್ಟೆಲ್‌ನ ಕುರಿತು ಯಾವುದೇ ದೂರು ಬಂದರೆ ವಾರ್ಡನ್ ಸೇರಿ ಸಿಬ್ಬಂದಿಯನ್ನು ನೇರ ಹೊಣೆಗಾರರಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸರ್ಕಾರ ನಿಗದಿಪಡಿಸಿದಂತೆ ನಿತ್ಯವೂ ಊಟದ ವ್ಯವಸ್ಥೆ ಮಾಡಬೇಕು. ಯಾವುದೇ ಲೋಪದೋಷ ಬರಬಾರದು. ಕಟ್ಟಡದ ಸುತ್ತ ಗಿಡಗಳು ಬೆಳೆಯದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿನಿಯರು ಸಮಯಕ್ಕೆ ಸರಿಯಾಗಿ ಹಾಸ್ಟೆಲ್‌ಗೆ ಒಳಬರಬೇಕು ಎಂದರು. ಅಡುಗೆ ಸಿಬ್ಬಂದಿ ಶಾರದಮ್ಮ, ವಿದ್ಯಾರ್ಥಿಯ ಪಾಲಕಿ ನೇತ್ರಾವತಿ ಇತರರಿದ್ದರು…

ವರದಿ. ಯುವರಾಜ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend