ತಾಲ್ಲೂಕು ಚಾಲನಾ ಸಮಿತಿ ಸಭೆಯಲ್ಲಿ ತಹಶೀಲ್ದಾರ್ ಡಾ.ನಾಗವೇಣಿ
ಕುಷ್ಠರೋಗ ಮುಕ್ತ ತಾಲ್ಲೂಕು ನಿರ್ಮಾಣ ಗುರಿಯಾಗಲಿ
ಚಿತ್ರದುರ್ಗ:ಎಲ್ಲಾ ಸಮನ್ವಯ ಇಲಾಖೆಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ, ಅಂಗನವಾಡಿ ಸಹಾಯಕಿಯರು, ಶಾಲಾ ಶಿಕ್ಷಕರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಪ್ರಚಾರ ಆಂದೋಲನ ನಡೆಸಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಿ ಕುಷ್ಠರೋಗ ಮುಕ್ತ ತಾಲ್ಲೂಕು ನಿರ್ಮಾಣ ನಿಮ್ಮ ಗುರಿಯಾಗಲಿ ಎಂದು ತಹಶೀಲ್ದಾರ್ ಡಾ.ನಾಗವೇಣಿ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ತಾಲೂಕು ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಬಿ.ವಿ.ಗಿರೀಶ್ ಮಾತನಾಡಿ, 2024ರ ನವೆಂಬರ 04 ರಿಂ 21 ರವರೆಗೆ ತಾಲೂಕಿನ 265 ಹಳ್ಳಿಗಳಲ್ಲಿಯೂ ಕುಷ್ಟರೋಗ ಪ್ರಕರಣ ಪತ್ತೆ ಅಭಿಯಾನದ ಅಡಿಯಲ್ಲಿ ಮನೆ ಮನೆ ಸಮೀಕ್ಷೆ ಕುಷ್ಟರೋಗಗಳ ಲಕ್ಷಣಗಳ ಪತ್ತೆ ಹಚ್ಚುವಿಕೆ ಕಾರ್ಯ ಜರುಗಲಿದೆ ಸಮೀಕ್ಷೆಗೆ ಸಂಬಂಧಿಸಿದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಆರೋಗ್ಯ ನಿರೀಕ್ಷಣಾಧಿಕಾರಿಗಳು ಆಶಾ ಕಾರ್ಯಕರ್ತೆಯರು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ತಾಲೂಕಿನ ಎಲ್ಲಾ ಮನೆಗಳನ್ನು ಭೇಟಿ ನೀಡಿ ಚರ್ಮದ ಮೇಲಿನ ಕಲೆಗಳನ್ನು ಪತ್ತೆ ಹಚ್ಚಿ ಸಂಶಯಸ್ಪದ ಪ್ರಕರಣಗಳ ಪಟ್ಟಿಯನ್ನು ಮಾಡಿ ಸಂಬಂಧಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಬಳಿ ಪ್ರಕರಣಗಳ ಮರು ತಪಾಸಣೆ ನಡೆಸಿ ಕುಷ್ಟರೋಗವೆಂದು ಖಚಿತಪಡಿಸಿದಲ್ಲಿ ಶೀಘ್ರವೇ ಬಹು ವಿಧ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ ಎಂದರು
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಲೋಚಕರಾದ ಪ್ರಭುದೇವ ಮಾತನಾಡಿ ರಾಷ್ಟ್ರೀಯತ ತಂಬಾಕು ಕಾರ್ಯಕ್ರಮದ ಅಡಿಯಲ್ಲಿ ಯುವಜನ 2.0 ಕುರಿತು ಚರ್ಚಿಸಲಾಯಿತು, ಮುಖ್ಯವಾಗಿ, ಶಾಲಾ /ಕಾಲೇಜುಗಳಲ್ಲಿ ಜಾಗೃತಿ ಮತ್ತು ಪ್ರತಿಜ್ಞಾ ವಿಧಿ ಭೋದಿಸುವುದು, ತಂಬಾಕು ಕಾರ್ಯಾಚರಣೆ ಯನ್ನು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಮಿತಿಯನ್ನು ರಚನೆ ಮಾಡಿಕೊಂಡು ದಾಳಿ ನಡೆಸಲು ಚರ್ಚಿಸಲಾಯಿತು.
ಚಾಲನಾ ಸಮಿತಿ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂಜುಳಾ, ನಗರಸಭೆಯ ಆರೋಗ್ಯ ನಿರೀಕ್ಷಣಾಧಿಕಾರಿ ನಾಗರಾಜ್, ತಾಲೂಕ್ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಆರ್ಬಿಎಸ್ಕೆ ಕಾರ್ಯಕ್ರಮದ ಡಾ. ಮಹೇಂದ್ರ ಕುಮಾರ್, ಡಾ.ಮಂಜುಳಾ ಡಾ. ಸುಪ್ರೀತಾ, ನಸಿರ್ಂಗ್ ಅಧಿಕಾರಿ ಪೂಜಾ ತಾಲೂಕು ವ್ಯವಸ್ಥಾಪಕ ಮೊಹಮ್ಮದ್ ಅಲಿ ತಾಲೂಕ್ ಲೆಕ್ಕಪತ್ರ ಪರಿಶೋಧಕ ಹಬೀಬ್. ಆರೋಗ್ಯ ನಿರೀಕ್ಷಣಾಧಿಕಾರಿ ಪ್ರವೀಣ್ ಮತ್ತಿತರರು ಇದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030