ಪರಿಸರ ಕಾಳಜಿ ಬೆಳೆಸಿಕೊಳ್ಳಲು ಚಿತ್ರದುರ್ಗ ಅರಣ್ಯ ಇಲಾಖೆಯ ಉಪವಲಯ ಅಧಿಕಾರಿ ಹೆಚ್.ಉಷಾರಾಣಿ ಸಲಹೆ…!!!

Listen to this article

ಪರಿಸರ ಕಾಳಜಿ ಬೆಳೆಸಿಕೊಳ್ಳಲು ಸಲಹೆ

ಚಿತ್ರದುರ್ಗ:ವಿದ್ಯಾರ್ಥಿ ದಿಸೆಯಲ್ಲಿಯೇ ಪರಿಸರ ಕಾಳಜಿ ಪ್ರಾರಂಭವಾಗಬೇಕಾಗಿರುವುದು ಪ್ರಸ್ತುತ ಸನ್ನವೇಶಕ್ಕೆ ಅವಶ್ಯಕತೆ ಇದೆ ಎಂದು ಚಿತ್ರದುರ್ಗ ಅರಣ್ಯ ಇಲಾಖೆಯ ಉಪವಲಯ ಅಧಿಕಾರಿ ಹೆಚ್.ಉಷಾರಾಣಿ ಹೇಳಿದರು.
ನಗರದ ಚಂದ್ರವಳ್ಳಿ ಕೆರೆಯ ಹಿಂಭಾಗದ ಪ್ರದೇಶದಲ್ಲಿ ಸೋಮವಾರ ಅರಣ್ಯ ಇಲಾಖೆ ಹಾಗೂ ಡಾನ್ ಬೋಸ್ಕೋ ಕನ್ನಡ ಮಾಧ್ಯಮ ಶಾಲೆ ವತಿಯಿಂದ ಪರಿಸರ ದಿನಾಚರಣೆಯ ಅಂಗವಾಗಿ ಗಿಡನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಹಾಗೂ ನಿರ್ವಹಣೆಯ ಮಹತ್ವದ ಬಗ್ಗೆ ತಿಳಿಸಿ, ಡಾನ್ ಬೋಸ್ಕೋ ಸಂಸ್ಥೆ ಹಾಗೂ ಸಂಸ್ಥೆಯ ಮುಖ್ಯಸ್ಥರು ಪ್ರತಿ ವರ್ಷ ಒಂದಲ್ಲಾ ಒಂದು ಕಾರ್ಯಕ್ರಮ ಹಾಕಿಕೊಂಡು ಪರಿಸರ ಪೋಷಿಸುವ ಕಾರ್ಯದಲ್ಲಿ ನಿರತವಾಗಿರುವುದು ಶ್ಲಾಘನೀಯವಾಗಿದೆ. 2024ರ ವಿಶ್ವ ಪರಿಸರ ದಿನದ ಧ್ಯೇಯವಾದ “ಭೂಮಿ ಮರು ಸ್ಥಾಪನೆ ಮರು ಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ ಹಾಗೂ ಘೋಷವಾಕ್ಯ “ನಮ್ಮ ಭೂಮಿ, ನಮ್ಮ ಭವಿಷ್ಯ”ದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಪರಿಸಿರ ಕಾಳಜಿ ಬೆಳೆಸಿಕೊಳ್ಳಲು ತಿಳಿ ಹೇಳಿದರು.
ಇದೇ ಸಂದರ್ಭದಲ್ಲಿ ಡಾನ್ ಬಾಸ್ಕೋ ಶಾಲೆಯ ವಿದ್ಯಾರ್ಥಿಗಳು 150 ಗಿಡಗಳನ್ನು ನೆಡುವ ಮೂಲಕ ಪರಿಸರ ಕಾಳಜಿಯ ಮಹತ್ವ ಮೆರೆದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ರೆ.ಫಾ.ಜಾನ್ ಪಾಲ್, ಮುಖ್ಯೋಪಾಧ್ಯಾಯ ಬಸವಂತ ಕುಮಾರ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend