ವಿಶ್ವೇಶ್ವರಯ್ಯ ಕಬ್ಬಿಣ ಉಕ್ಕು ಸಂಸ್ಥೆಗೆ 29,400 ಮರಗಳನ್ನು ಕತ್ತರಿಸಿ ಗಣಿಗಾರಿಕೆಗೆ ಅವಕಾಶ ಕೊಡುತ್ತಿರುವುದಕ್ಕೆ ಆಕ್ಷೇಪ…!!!

Listen to this article

ಸಂಡೂರು ತಾಲೂಕಿನ ರಾಮನಮಲೈ ಅರಣ್ಯ ಪ್ರದೇಶದಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಉಕ್ಕು ಸಂಸ್ಥೆಗೆ 29,400 ಮರಗಳನ್ನು ಕತ್ತರಿಸಿ ಗಣಿಗಾರಿಕೆಗೆ ಅವಕಾಶ ಕೊಡುತ್ತಿರುವುದಕ್ಕೆ ಆಕ್ಷೇಪ
ಸಂಡೂರು ತಾಲೂಕಿನ ರಾಮನ ಮಲೈ ಅರಣ್ಯ ಪ್ರದೇಶದಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಉಕ್ಕು ಸಂಸ್ಥೆಯ ರಾಮನ ದುರ್ಗ ಅದಿರುಗಣಿ 60.70 ಹೆಕ್ಟರ್ ಅರಣ್ಯದಲ್ಲಿ ಗಣಿ ಗುತ್ತಿಗೆ ಯೋಜನೆಗೆ ಸಂಬಂಧಿಸಿ ದಂತೆ ಕೇಂದ್ರ ಸರ್ಕಾರದಿಂದ ರಚಿಸಲ್ಪಟ್ಟ ಕರ್ನಾಟಕ ರಾಜ್ಯದ ರಾಜ್ಯ ಪರಿಸರ ಆಘಾತ ಅಧ್ಯಯನ ಪ್ರಾಧಿಕಾರ ಈ ಯೋಜನೆಗೆ ಅನುಮೋದಿಸಿದ ಮೇರೆಗೆ ದಿನಾಂಕ 2.08.2024ರಂದು ಕರ್ನಾಟಕ ಕ. ರಾ. ಮಾ.ನಿಯಮ ಮಂಡಳಿಯ ಪರಿಸರ ಸಭೆಯನ್ನು ಕರೆದಿರುತ್ತದೆ ಉದ್ದೇಶಿತ ಯೋಜನೆಯ ಆರಂಭಿಸಬೇಕಾದಲ್ಲಿ 29,400 ಮರಗಳನ್ನು ಕತ್ತರಿಸಬೇಕಾಗುತ್ತದೆ ಎಂದು ಅರಣ್ಯ ಇಲಾಖೆಯ ವರದಿಯನ್ನು ನೀಡಿರುತ್ತದೆ ಜಾಗತಿಕ ತಾಪಮಾನ ಹವಾಮಾನ ಬದಲಾವಣೆ ನೈಸರ್ಗಿಕ ವಿಕೋಪಗಳು ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ ಅರಣ್ಯೀಕರಣ ಮಾಡುವುದರ ಕಡೆಗೆ ಲಕ್ಷ್ಯ ವಹಿಸಬೇಕು ಆದರೆ ಅರಣ್ಯ ನಾಶ ಮಾಡುವ ಇಂತಹ ಯೋಜನೆಗಳಿಂದ ಪರಿಸರದ ಮೇಲೆ ಗಂಭೀರವಾದ ಪರಿಣಾಮವನ್ನು ಉಂಟು ಮಾಡಿದಂತಾಗುತ್ತದೆ
ತಕ್ಷಣದ ಕ್ರಮಕ್ಕಾಗಿ ತಮ್ಮನ್ನು ಆಗ್ರಹಿಸುವುದೇನೆಂದರೆ ರಾಮನ ದುರ್ಗ ಅದಿರು ಗಣಿಗೆ ಗಣಿ ಗುತ್ತಿಗೆ ನೀಡುವ ಯೋಜನೆಗಾಗಿ ಏರ್ಪಡಿಸಿರುವ ಸಾರ್ವಜನಿಕ ಪರಿಸರ ಸಭೆಯನ್ನು ರದ್ದುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಅರಣ್ಯ ಇಲಾಖೆಯ ಮುಖ್ಯಸ್ಥರಾದ ಪಿ. ಸಿ. ಎಫ್ ಇವರ ನೇತೃತ್ವದಲ್ಲಿ ದಿನಾಂಕ 28.03.2016 ರಂದು ನಡೆದ ಸಭೆಯಲ್ಲಿ ಹೊಸ ಅರಣ್ಯ ಪ್ರದೇಶದಲ್ಲಿ ಯಾವುದೇ ತರಹದ ಗಣಿ ಗುತ್ತಿಗೆಗೆ ಪ್ರಸ್ತಾವನೆಗಳಿಗೆ ಶಿಫಾರಸು ಮಾಡದಿರಲು ತೆಗೆದುಕೊಂಡ ನಿರ್ಧಾರವನ್ನು ತಾವುಗಳು ಬೆಂಬಲಿಸಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದಾರೆ ರಾಜ್ಯದ್ಯಂತ ಪರಿಸರಕ್ಕಾಗಿ ನಾವು ವೇದಿಕೆಯು ಸಂಡೂರಿನಲ್ಲಿ ನಡೆಸಲು ಉದ್ದೇಶಿಸಿರುವ ಗಣಿಗಾರಿಕೆಗಳನ್ನು ತಕ್ಷಣವೇ ನಿಲ್ಲಿಸಬೇಕು ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಮಳೆಯ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದು ಮಳೆಗಾಲ ಕಡಿಮೆಯಾಗುತ್ತಿರುವ ಪರಿಣಾಮದಿಂದ ಕೆರೆಕಟ್ಟೆ ಡ್ಯಾಮ್ ಗಳಲ್ಲಿ ನೀರು ಇಲ್ಲದೆ ಬರೆದಾಗುತ್ತಿದ್ದು ಎಂತಹ ಸಂಕಷ್ಟ ಎದುರಾಗುತ್ತಿದೆ ಎಂದು ಎಲ್ಲರೂ ಕಣ್ಣಾರೆ ಕಾಣುತ್ತಿದ್ದಾರೆ ಅರಣ್ಯ ಬೆಳೆಸುವುದರ ಕಡೆ ಗಮನ ಕೊಡದೆ ಗಣಿಗಾರಿಕೆ ನೆಪವೊಡ್ಡಿ ಅರಣ್ಯವನ್ನು ನಾಶ ಮಾಡುವುದರಿಂದ ಸಿಗುವ ಲಾಭವಾದರೂ ಏನು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಕೆಲವು ರಾಜಕಾರಣಿಗಳು ಪೂರ್ವಪರ ಯೋಚನೆ ಮಾಡದೆ ಗಣಿಗಾರಿಕೆಗೆ ಅವಕಾಶ ಕೊಡುವುದನ್ನು ನೋಡಿದರೆ ಇವರಿಗೆ ಪರಿಸರ ಕಾಳಜಿ ಮತ್ತು ಜನಗಳ ಕಾಳಜಿ ಎಷ್ಟಿದೆ ಅನ್ನೋದು ಇದರಲ್ಲಿ ಗೊತ್ತಾಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಆದ್ದರಿಂದ ಪರಿಸರ ಉಳಿಸಿ ಎಂದು ಪರಿಸರಕ್ಕಾಗಿ ನಾವು ಎಂಬ ಸಂಘಟನೆಯೊಂದಿಗೆ ರಾಜ್ಯದ್ಯಂತ ಪರಿಸರ ಉಳಿಸಲು ಕರೆ ಕೊಟ್ಟಿದೆ ಪ್ರತಿ ತಾಲೂಕಿನಿಂದ ಗಾಣಿಗರಿಕೆ ನಿಲ್ಲಿಸಿ ಎಂದು ಮನವಿಯನ್ನು ಅರಣ್ಯ ಸಚಿವರಿಗೆ ಮನವಿ ಪತ್ರ ಕೊಡಲು ತೀರ್ಮಾನ ತೆಗೆದು ಕೊಳ್ಳಲು ನಿರ್ಧಾರಿಸಲುಯಿತು..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend