ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಕರೆ ಮಲೇರಿಯಾ ಮುಕ್ತ ಚಿತ್ರದುರ್ಗಕ್ಕಾಗಿ ಎಲ್ಲರೂ ಸಹಕರಿಸಿ…!!!

Listen to this article

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಕರೆ
ಮಲೇರಿಯಾ ಮುಕ್ತ ಚಿತ್ರದುರ್ಗಕ್ಕಾಗಿ ಎಲ್ಲರೂ ಸಹಕರಿಸಿ

ಚಿತ್ರದುರ್ಗ:ಕೀಟಜನ್ಯ ರೋಗಗಳ ನಿಯಂತ್ರಣ ನಿರ್ಲಕ್ಷಿಸಬೇಡಿ ಮರಣದೊಂದಿಗೆ ಕುಟುಂಬಕ್ಕೆ ಆರ್ಥಿಕ ಹೊರೆಯಾಗುತ್ತದೆ. ಮಲೇರಿಯಾ ಮುಕ್ತ ಚಿತ್ರದುರ್ಗಕ್ಕಾಗಿ ಎಲ್ಲರೂ ಸಹಕರಿಸಿ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಕರೆ ನೀಡಿದರು.
ಇಲ್ಲಿನ ಕರುವಿನಕಟ್ಟೆ ವೃತ್ತ ಸಮೀಪದ ಕಬೀರಾನಂದಾಶ್ರಮದ ಶಾಲಾ ಮಕ್ಕಳಿಂದ ಬುಧವಾರ ಜನ ಜಾಗೃತಿ ಜಾಥಾ ಮಲೇರಿಯಾ ವಿರೋಧಿ ಮಾಸಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.


ಮುಖ್ಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ಎಂ.ಬಿ.ಹನುಮಂತಪ್ಪ ಮಾತನಾಡಿ, ಮಾನ್ಸೂನ್ ದಿನಗಳಲ್ಲಿ ಮಳೆಯ ಕಾರಣ ಮನವ ನಿರ್ಮಿತ ಘನ ತ್ಯಾಜ್ಯ ವಸ್ತುಗಳಾದ ಎಳನೀರಿನ ಬುರುಡೆ, ಒಡೆದ ಮಡಕೆ ಹಂಚು ಚಿಪ್ಪು ಗುಂಡಿಗಳಲ್ಲಿ ನೀರು ಸೇರಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿ ಕೀಟ ಜನ್ಯ ರೋಗಗಳಾದ ಮಲೇರಿಯ, ಡೆಂಗ್ಯೂ, ಚಿಕನ್ ಗುನ್ಯಾ, ಆನೆಕಾಲು ರೋಗಗಳು ಹರಡುತ್ತವೆ. ಸಾರ್ವಜನಿಕರು ಬುದ್ದಿವಂತರಾಗಿ ಮನೆಯ ಸುತ್ತಮುತ್ತಲಿನ ಪರಿಸರ ಸೊಳ್ಳೆಗಳ ತಾಣವಾಗದಂತೆ ಕ್ರಮವಹಿಸಿ. ಕೀಟಗಳು ಚಿಕ್ಕದಾದರೂ ಅವುಗಳು ನೀಡುವ ಬಾದೆ ದೊಡ್ಡದು ಎಂದರು.
ಘನ ತ್ಯಾಜ್ಯ ವಸ್ತುಗಳನ್ನು ಸರಿಯಾದ ಜಾಗದಲ್ಲಿ ವಿಲೇವಾರಿ ಮಾಡಿ. ಯಾವುದೇ ಜ್ವರವಿರಲಿ, ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ. ಶೀಘ್ರ ರೋಗಪತ್ತೆ ತ್ವರಿತ ಚಿಕಿತ್ಸೆ ಪಡೆಯುವುದರೊಂದಿಗೆ ಮಲೇರಿಯಾ ಮುಕ್ತ ಮಾಡೋಣ ಎಂದರು.
ಜಾಥಾವು ಕಬೀರಾನಂದ ಶಾಲೆಯಿಂದ ಹೊರಟು ಕರುವಿನಕಟ್ಟೆ ವೃತ್ತ, ಏಕನಾಥೇಶ್ವರಿ ಪಾದ ಗುಡಿಯ ತನಕ ಜರುಗಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಬುದ್ದ ನಗರ ಆರೋಗ್ಯ ಕೇದ್ರದ ವೈದ್ಯಾಧಿಕಾರಿ ಡಾ.ಸುರೇಂದ್ರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗುರುಮೂರ್ತಿ, ರಂಗಾರೆಡ್ಡಿ, ಪ್ರವೀಣ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೋಟೇಶ್ ಚಕ್ರವರ್ತಿ, ಪಾರ್ವತಿ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಾದ ತಿಪ್ಪಮ್ಮ, ಗೀತಾ, ಸುಜಾತ, ಏಕಾಂತಮ್ಮ ಶಾಲಾ ಶಿಕ್ಷಕರಾದ ನವೀನ್, ಪರಮೇಶ್ವರಪ್ಪ, ಆಶಾಕಾರ್ಯಕರ್ತೆಯರು, 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು…

ವರದಿ. ಸುರೇಶ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend