ವಿಪರೀತ ಮಳೆ ನೀರಿನಿಂದಾಗಿ ಮಹಾದೇವಪುರ ಮನೆಗಳಿಗೆ ಹಾನಿಯನ್ನುಂಟು ಮಾಡಿದ್ದನ್ನು ಪರಿಶೀಲಿಸಿದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ..
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದಲ್ಲಿ ವಿಪರೀತ ಮಳೆಯಾಗಿರುವುದರಿಂದ ಮಹಾದೇವಪುರದ ದೂರದ ಅಡವಿಯಿಂದ ಹರಿಯುತ್ತಿರುವ ನೀರು ಊರಿನ ಮಧ್ಯೆ ಕುಂಬಾರ, ಗಾಣಿಗರ ಓಣಿ ಮತ್ತು ಹರಿಜನ ಕೇರಿಯಲ್ಲಿ ಹಾದುಹೋಗುವುದರಿಂದ ಕೆಲವು ಕಡೆ ಮನೆಗಳಿಗೆ ನೀರು ನುಗ್ಗಿ ಹಾನಿಯನ್ನುಂಟು ಮಾಡಿದೆ ಎಂಬ ದೂರುಗಳು ಕೇಳಿ ಬಂದಿರುವುದರಿಂದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿ; 23-10-2024 ರಂದು ಸಂಜೆ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರೊಂದಿಗೆ ಶಾಸಕರು ಖುದ್ದಾಗಿ ಭೇಟಿ ನೀಡಿ ಭೂ ನಕ್ಷೆ ಇಡಿದು ಊರಿನ ಮಧ್ಯೆ ಹರಿಯುವ ನೀರನ್ನು ತಪ್ಪಿಸುವುದು ಹೇಗೆ ಎಂಬ ನಿಟ್ಟಿನಲ್ಲಿ ಪರಿಹಾರ ಕಂಡುಕೊಳ್ಳಲು ಸುದೀರ್ಘವಾಗಿ ಚರ್ಚಿಸಿದರು. ಹರಿಜನ ಕಾಲೋನಿಯಲ್ಲಿ ತೆರದ ಬಾವಿ ನೀರಿನ ಮಟ್ಟ ಹೆಚ್ಚಿರುವುದರಿಂದ ಮನೆಗಳಿಗೆ ನೀರು ಬಸಿಯುತ್ತದೆ ಎಂಬ ಅಳಲನ್ನು ತೋಡಿಕೊಂಡಾಗ ಶಾಸಕರು ಪರಿಶೀಲಿಸಿ ಬಗೆಹರಿಸುವುದಾಗಿ ತಿಳಿಸಿ ಧೈರ್ಯ ತುಂಬುವ ಕೆಲಸ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರರಾದ ಎಂ. ರೇಣುಕಾ, ಸಣ್ಣ ನೀರಾವರಿ ಇಲಾಖೆಯ ಎ. ಇ. ಇ. ಮೇಡಮ್ ರಾಜ್, ಮಾಜಿ ತಾ. ಪಂ. ಸದಸ್ಯರಾದ ವಿರೇಶ, ಮುಖಂಡರಾದ ದಿನ್ನೇ ಮಲ್ಲಿಕಾರ್ಜುನ, ಹಾಲಸಾಗರ ಮಾರೇಶ, ರಾಯಾಪುರದ ಕೃಷ್ಣಮೂರ್ತಿ , ಗಂಗಾಧರ, ಹಾಗೂ ಊರಿನ ಹಿರಿಯರು, ಗ್ರಾಮಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು….
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030