ಬೆಳ್ಳಿಗಟ್ಟ : ಗ್ರಾಮ ಪಂಚಾಯಿತಿ ಮಟ್ಟದ ಕ್ರಿಕೇಟ್ ಟೂರ್ನಮೆಂಟ್…!!!

Listen to this article

ಬೆಳ್ಳಿಗಟ್ಟ : ಗ್ರಾಮ ಪಂಚಾಯಿತಿ ಮಟ್ಟದ ಕ್ರಿಕೇಟ್ ಟೂರ್ನಮೆಂಟ್
ಗುಡೇಕೋಟೆ:- ಕೂಡ್ಲಿಗಿ ತಾಲೂಕು ವಿಜಯನಗರ ಜಿಲ್ಲೆ ಬೆಳ್ಳಿಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹುಲಿಕುಂಟೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಹ್ಯಾಂಗ್ರಿ ಟೈಗರ್ಸ್ ಹುಲಿಕುಂಟೆ ವತಿಯಿಂದ ಪ್ರಥಮ ಬಾರಿಗೆ ಸ್ಟಂಪರ್ ಬಾಲ್ ಟೂರ್ನಮೆಂಟ್ ದಿನಾಂಕ 31 /8/ 2024 ರಿಂದ 1/ 9/ 2024 ರವರೆಗೆ ಆಯೋಜಿಸಲಾಗಿದ್ದು ಇದರ ಉದ್ಘಾಟನೆಯನ್ನು ಶ್ರೀ ಡಾ. ಎನ್. ಟಿ. ಶ್ರೀನಿವಾಸ್ ಜನಪ್ರಿಯ ಶಾಸಕರು ಕೂಡ್ಲಿಗಿ ಕ್ಷೇತ್ರ ಮಾಡಬೇಕಾಗಿದ್ದು ಅವರು ಬೇರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಅವರ ಪರವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸಣ್ಣಓಬಮ್ಮ ಓಬಣ್ಣ, ಶ್ರೀಮತಿ ಇಂದ್ರಮ್ಮ ಮಲಿಯಪ್ಪ, ಕೆ ನಾಗರಾಜ್ ಗ್ರಾಮ ಪಂಚಾಯಿತಿ ಸದಸ್ಯರು ಹುಲಿಕುಂಟೆ ಇವರು ಟೇಪ್ ಕಟ್ ಮಾಡುವುದರ ಮೂಲಕ ಉದ್ಘಾಟನೆಗೆ ಚಾಲನೆ ನೀಡಿದರು ಈ ಟೂರ್ನಿಯಾ ಪ್ರಥಮ ಬಹುಮಾನ ಹತ್ತು ಸಾವಿರ ರೂಪಾಯಿಗಳನ್ನು ಶ್ರೀಮತಿ ಇಂದ್ರಮ್ಮ ಮಲಿಯಪ್ಪ, ಕೆ ನಾಗರಾಜ್ ಹಾಗೂ ಶ್ರೀಮತಿ ಸಣ್ಣ ಓಬಮ್ಮ ಗ್ರಾಮ ಪಂಚಾಯತಿ ಅಧ್ಯಕ್ಷರು ನೀಡಿದ್ದು ಹಾಗೂ ದ್ವಿತೀಯ ಬಹುಮಾನ 5000 ರೂಪಾಯಿ ಗಳನ್ನು ಹುಲಿಕುಂಟೆಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ವಸಂತಗೌಡ್ರು ನೀಡಿದ್ದು ದಾನಿಗಳಾದ ಶ್ರೀಮತಿ ಇಂದ್ರಮ್ಮ ಮಲಿಯಪ್ಪ ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಪುತ್ರ ಹಾಗೂ ಡಿಎಸ್ಎಸ್ ಅಧ್ಯಕ್ಷರಾದ ಡಿ ಓಬಳೇಶ್ ಅವರು ನೀಡಿದರು ಶಾಮಿಯಾನ ಸಪ್ಲೇಯರ್ ಕೋಟಗೇರ ಮಲ್ಲಿಕಾರ್ಜುನ ಅವರು ಶಾಮಿಯಾನ ಸಪ್ಲೇಯರ್ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದು ತಂಡದ ಆಯೋಜಕರಾದ ಎಂ ತುಮಲೇಶ್, ರಾಜಣ್ಣ, ಕೊಟ್ರೇಶ್, ವಿಷ್ಣು, ಎಚ್ ಬಿ ಗಣೇಶ್, ಅಣ್ಣಪ್ಪ, ಅಭಿ, ಬೆಸ್ಟ್ ಸಪೋರ್ಟರ್ಸ್ ಆಗಿ ನಿಭಾಯಿಸಿದ್ದು ಗ್ರಾಮ ಪಂಚಾಯಿತಿ ಟೂರ್ನಿಯಲ್ಲಿ ರನ್ನರ್ ಅಫ್ ಆಗಿ ಹುಲಿಕುಂಟೆ ಗ್ರಾಮದ ಹ್ಯಾಂಗ್ರಿ ಟೈಗರ್ಸ್ ಟೀಮ್ ಆಗಿದ್ದು ದ್ವಿತೀಯ ಬಹುಮಾನ ಹಾಗೂ ಟ್ರೋಪಿಯನ್ನು ಪಡೆದುಕೊಂಡಿದೆ ಮ್ಯಾನ್ ಆಫ್ ದಿ ಸಿರಿಯಸ್ ಆಗಿ ಅಭಿ ಆಯ್ಕೆಯಾಗಿದ್ದು ಬೆಸ್ಟ್ ಬೋಲರಾಗಿ ವಿಷ್ಣು ಹಾಗೂ ಬೆಸ್ಟ್ ಬ್ಯಾಟರಾಗಿ ನರಸಿಂಹನಗಿರಿ ಗ್ರಾಮದ ಸಿಂಹಾಳ ತಂಡದ ಯೋಗೇಶ್ ಇವರಿಗೆ ಟ್ರೋಫಿ ಜೊತೆಗೆ ಸನ್ಮಾನ ಮಾಡಲಾಯಿತು ಪ್ರಥಮ ಬಹುಮಾನವಾಗಿ ನರಸಿಂಹನಗಿರಿ ಸಿಂಹಾಳ ತಂಡವು ಉತ್ತಮ ಆಟವನ್ನು ಆಡಿ ಪ್ರಥಮ ಬಹುಮಾನ ಪಡೆದುಕೊಂಡು ಹಾಗೂ ಟ್ರೋಪಿಯನ್ನು ಪಡೆದುಕೊಂಡಿದೆ ಈ ಸಮಯದಲ್ಲಿ ನರಸಿಂಹನಗಿರಿ ಗ್ರಾಮದ ಎನ್.ವಿ. ತಮ್ಮಣ್ಣನವರು ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮೊದಲಿಗೆ ಟೂರ್ನಮೆಂಟ್ ಅಂದರೆ ನಮ್ಮ ಗ್ರಾಮಕ್ಕೆ ಮಾತ್ರ ಸೀಮಿತವಾಗಿ ಆಟ ಆಡುತ್ತಿದ್ದೆವು ಆದರೆ ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯೋಜಿಸಲಾದ ಈ ಟೂರ್ನಿಯನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು ಎಂದು ಈ ಸಮಯದಲ್ಲಿ ಕ್ರೀಡೆಯನ್ನು ಉದ್ದೇಶಿಸಿ ಮಾತನಾಡಿದರು ಈ ಸಮಯದಲ್ಲಿ ಹುಲಿಕುಂಟೆ ಗ್ರಾಮದ ಬೆಸ್ಟ್ ಸಪೋರ್ಟರ್ಸ್ ಆದ ಹೆಚ್ ಬಿ ಗಣೇಶ್, ಕಾಂತರಾಜ್, ಶ್ರೀಧರ್ ಬಾಲ್ ದಾನಿಗಳಾದ ಡಿ ಓಬಳೇಶ್, ಹೆಚ್ ಅನಿಲ್, ಕೊಟ್ರೇಶ್, ತುಮಲೇಶ್, ಆರ್ ಅಂಜಿನಪ್ಪ, ಆಟೋ ತಿಪ್ಪೇಸ್ವಾಮಿ, ಶಿವಪುತ್ರ, ಎಸ್ ಟಿಎಂಸಿ ಅಧ್ಯಕ್ಷರಾದ ಕೊಟ್ರೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಇಂದ್ರಮ್ಮ ಮಲಿಯಪ್ಪ,ಕೆ. ನಾಗರಾಜ್, ಕೆ. ಬಸವರಾಜ್ ಜೈ ಭೀಮ್ ಲಯನ್ಸ್ ತಂಡದ ಆಟಗಾರರು ಹಾಗೂ ಹ್ಯಾಂಗ್ರಿ ಟೈಗರ್ಸ್ ತಂಡದ ಆಟಗಾರರು ಹಾಗೂ ಸಿಂಹಳ ಕ್ರಿಕೆಟರ್ಸ್ ನರಸಿಂಹಗಿರಿ ತಂಡದ ಆಟಗಾರರು ಹಾಗೂ ಊರಿನ ಮುಖಂಡರು ಹಾಗೂ ಉಪಸ್ಥಿತರಿದ್ದರು…


ವರದಿ:- ಶಿವಕುಮಾರ್ ಗುಡೇಕೋಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend