ನಿಂಬಳಗೇರೆ:- ಶ್ರೀ ಕಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ…!!!

Listen to this article

ನಿಂಬಳಗೇರೆ:- ಶ್ರೀ ಕಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಕೊಟ್ಟೂರು ತಾಲೂಕಿನ ಶ್ರೀ ಕಲ್ಲೇಶ್ವರ ಹಿರಿಯ ಪ್ರಾಥಮಿಕ ಶಾಲೆ, ನಿಂಬಳಗೇರೆ ಈ ಶಾಲೆಯಲ್ಲಿ ದಿನಾಂಕ 26.08.2024 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಶ್ರೀ ಕೃಷ್ಣ ಜನಿಸಿ ಜಗದೋದ್ಧಾರ ಮಾಡಿದ ಹಾಗೂ ಶ್ರೀ ಕೃಷ್ಣನ ಲೀಲೆಗಳನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ಎಸ್ ವೀರಣ್ಣನವರು ಕಾರ್ಯಕ್ರಮದಲ್ಲಿ ಮುದ್ದು ಮಕ್ಕಳಿಗೆ ಪೋಷಕರಿಗೆ ತಿಳಿಸಿದರು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಿವಲೀಲಾ ಮಾತನಾಡಿ ಮೂರು ಯುಗಗಳಲ್ಲಿ ಜಂಬವಂತ, ಶ್ರೀರಾಮಕೃಷ್ಣ, ಹೀಗೆ ಅವತಾರವನ್ನೇತ್ತಿ ಧರ್ಮವನ್ನು ರಕ್ಷಿಸಿ, ಅಧರ್ಮವನ್ನು ನಾಶಪಡಿಸಿದ ಬಗ್ಗೆ ತಿಳಿಸಿದರು ಸಹ ಶಿಕ್ಷಕಿಯಾದ ಶ್ರೀಮತಿ ಪ್ರಭಾವತಿ ಯವರು ಮಾತನಾಡಿ ಗೋವರ್ಧನಗಿರಿಯ ಪೂಜೆಯ ಮಹತ್ವವನ್ನು ವಿವರಿಸುತ್ತಾ ದೇವತೆಗಳ ದೇವನಾದ ಇಂದ್ರದೇವನನ್ನ ನಂದ ಮಹಾರಾಜ ಮತ್ತು ನಂದಗೋಕುಲ ದವರು ಪೂಜಿಸುತ್ತಿದ್ದರು ಶ್ರೀ ಕೃಷ್ಣ ಇಂದ್ರನ ಬದಲಿಗೆ ಹಲವು ಮಹತ್ವ ಇರುವ ಗೋವರ್ಧನ ಗಿರಿಯನ್ನು ಪೂಜಿಸಲು ತಿಳಿಸಿದ ಜನರು ಇಂದ್ರ ನನ್ನ ಬಿಟ್ಟು ಗೋವರ್ಧನಗಿರಿಯನ್ನು ಪೂಜಿಸಲಿಕ್ಕೆ ಪ್ರಾರಂಭಿಸಿದರು ಇದರಿಂದ ಕುಂಠಿತನಾದ ಇಂದ್ರದೇವ ನಂದಗೋಕುಲವನ್ನು ನಾಶಪಡಿಸಲು ಮಳೆ ಬಿರುಗಾಳಿಯನ್ನು ಸೃಷ್ಟಿಸಿದ ಆದರೆ ಪರಮಾತ್ಮನಾದ ಕೃಷ್ಣ ಎಲ್ಲ ಜನರನ್ನು ಹಾಗೂ ಗೋವುಗಳನ್ನು ತನ್ನ ಕಿರುಬೆರಳಿನಿಂದ ಗೋವರ್ಧನ ಬೆಟ್ಟವನ್ನು ಮೇಲೆತ್ತಿ ಕೆಳಗಡೆ ಆಶ್ರಯಿಸಿ ರಕ್ಷಿಸಿದ ಆಗ ಇಂದ್ರ ದೇವನಿಗೆ ಶ್ರೀಮನ್ ನಾರಾಯಣನ ಸ್ವರೂಪ ಅರಿತು ಶ್ರೀಕೃಷ್ಣನಿಗೆ ನಮಗೆ ತನ್ನ ತಪ್ಪನ್ನು ಕ್ಷಮಿಸಿ ಎಂದು ಕೇಳಿಕೊಂಡಂತಹ ಶ್ರೀ ಕೃಷ್ಣನ ಬಾಲ್ಯದ ಲೀಲೆಯನ್ನು ಮಕ್ಕಳಿಗೆ ತಿಳಿಸಿದರು ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು, ಪೋಷಕರು, ಭಾಗಿಯಾಗಿದ್ದರು ಎಸ್ ದೊಡ್ಡಬಸಪ್ಪ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರೆ ಶ್ರೀಮತಿ ಪ್ರಭಾವತಿ ಪ್ರಾರ್ಥಿಸಿದರು ಪರಶುರಾಮ್ ಸಹ ಶಿಕ್ಷಕರು ವಂದಿಸಿದರು…

ವರದಿ. ಶಿವಕುಮಾರ್, ಗುಡೇಕೋಟೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend