ತುಂಗಭದ್ರ ಡ್ಯಾಮ್ ಗೆ ಒಳಹರಿವು ರೈತರಲ್ಲಿ ಸಂತಸ…!!!

Listen to this article

ತುಂಗಭದ್ರ ಡ್ಯಾಮ್ ಗೆ ಒಳಹರಿವು ರೈತರಲ್ಲಿ ಸಂತಸ
ಕೊಪ್ಪಳ. ಏಳು ತಿಂಗಳ ನಂತರ ತುಂಗಭದ್ರ ಡ್ಯಾಮ್ ಗೆ ಒಳ ಹರಿವು ಆರಂಭವಾಗಿದ್ದು, ರೈತರಲ್ಲಿ ಸಂತಸ ಮೂಡಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ತುಂಗಭದ್ರ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಾಣ ಮಾಡಲಾಗಿದೆ. ತುಂಗಭದ್ರ ಡ್ಯಾಮ್ ತುಂಬಿದರೆ ಮೂರು ರಾಜ್ಯದ 10 ಜಿಲ್ಲೆಗಳ ಜನರ ಸಂತಸ ಹೆಚ್ಚಾಗುತ್ತದೆ. ಆದರೆ 2023 ರಲ್ಲಿ ರಾಜ್ಯದಲ್ಲಿ ಮಳೆಯಾಗದೆ ಭೀಕರ ಬರಗಾಲದಿಂದ ಡ್ಯಾಮ್ ಒಮ್ಮೆಯೂ ತುಂಬಿಲ್ಲ. ಹೀಗಾಗಿ ಬೇಸಿಗೆ ಸಮಯದಲ್ಲಿ ಎರಡನೇ ಬೆಳೆಗೆ ನೀರು ಸಿಗದೇ ರೈತರು ಪರದಾಡಿದರು. ಇದೀಗ ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು ಕಳೆದ ಏಳು ತಿಂಗಳಿಂದ ಸ್ಥಗಿತವಾಗಿದ್ದ ಜಲಾಶಯದ ಒಳ ಅರಿವು ಇದೀಗ ಮತ್ತೆ ಆರಂಭವಾಗಿದೆ.
ತುಂಗಭದ್ರ ನದಿ 105 ಟಿಎಂಸಿ ನೀರು ಸಂಗ್ರಹ ಸಮರ್ಥವಿರುವ ಈ ಡ್ಯಾಮ್ ನಾ ನೀರಿನ ಮೇಲೆಯೇ ರಾಜ್ಯದ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ, ಜಿಲ್ಲೆಯ ಜನರು ನಿಂತಿದ್ದಾರೆ.. ನೆರೆಯ ರಾಜ್ಯದ ತೆಲಂಗಾಣ, ಆಂಧ್ರ ಪ್ರದೇಶ್ ರಾಜ್ಯದ ಕೆಲ ಜಿಲ್ಲೆಯ ಜನರು ಇದೇ ನೀರಿನ ಮೇಲೆಯೇ ಅವಲಂಬಿತರಾಗಿದ್ದಾರೆ. ವರ್ಷದಲ್ಲಿ ಎರಡು ಬೆಳೆಗಳಿಗೆ ನೀರು ಬಿಡಬೇಕು ಮತ್ತು ಕುಡಿಯುವ ನೀರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಜಲಾಶಯ ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ ವರ್ಷ ಮಳೆ ಇಲ್ಲದೆ ಜನತೆ ನರಳಾಡುವಂತಹ ಪರಿಸ್ಥಿತಿಯು ನಿರ್ಮಾಣವಾಗಿತ್ತು. ಇನ್ನೂ ಕೆಲವು ವರ್ಷಗಳಲ್ಲಿ ನೂರಾರು ಟಿಎಂಸಿ ನೀರು ಅರಿದು ವ್ಯರ್ಥವಾಗಿ ಹೋಗಿದೆ.ಈ ವರ್ಷ ಮುಂಗಾರು ಆರಂಭಕ್ಕಿಂತ ಮೊದಲೇ ರಾಜ್ಯದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ರಾಜ್ಯದ ರೈತರು ಸಂತಸಗೊಂಡಿದ್ದಾರೆ. ಇನ್ನೂ ಕಳೆದ ನಾಲ್ಕು ದಿನಗಳಿಂದ ತುಂಗಭದ್ರಾ ಜಲಾಶಯಕ್ಕೆ ಒಳ ಅರಿವು ಆರಂಭವಾಗಿದೆ. ಪ್ರತಿನಿತ್ಯ 400ರಿಂದ 500 ಕ್ಯೂಸೆಕ್ ನೀರು ಡ್ಯಾಮ್ ಗೆ ಹರಿದು ಬರ್ತಿದ್ದು, ಬುದುವಾರ (ಜೂನ್ 05) ಡ್ಯಾಮ್ ಗೆ 495 ಕ್ಯೂಸೆಕ್ ಒಳ ಹರಿವು ಇದೆ. ಇನ್ನೂ 3.34 ಟಿ ಎಂ ಸಿ ಗೆ ಕುಸಿದಿದ್ದ. ನೀರಿನ ಸಾಮರ್ಥ್ಯ, ಇದೀಗ ಒಳ ಅರಿವು ಆರಂಭವಾದಾಗಿನಿಂದ 3.49 ಟಿಎಂಸಿಗೆ ಹೆಚ್ಚಾಗಿದೆ. ಶಿವಮೊಗ್ಗ ಸೇರಿದಂತೆ ತುಂಗಭದ್ರ ನದಿ ಉಗಮದ ಸ್ಥಳದಲ್ಲಿ ಹೆಚ್ಚಿನ ಮಳೆ ಆದರೆ ಡ್ಯಾಮ್ ಗೆ ನೀರು ಬರುತ್ತದೆ ಅದೇ ನದಿ ಪ್ರದೇಶದಲ್ಲಿ ಮಳೆ ಕಡಿಮೆಯಾದರೆ ಜಲಾಯಶಕ್ಕೆ ನೀರು ಬರುವುದು ಕಷ್ಟವಾಗಿದೆ ನದಿ ಪ್ರದೇಶದ ಉತ್ತಮ ಮಳೆಯಾದರೆ ಮಾತ್ರ ಡ್ಯಾಮ್, ತುಂಬಲಿದೆ ಕಳೆದ ವರ್ಷ ಡ್ಯಾಮ್ ಒಮ್ಮೆ ಕೂಡ ತುಂಬಿರ್ಲಿಲ್ಲ ಇದೀಗ ಡ್ಯಾಮ್ ಗೆ ನೀರು ಬರುತ್ತಿರುವುದು ಜನರ ಸಂತಸ ಹೆಚ್ಚಾಗುತ್ತದೆ ಈ ಬಾರಿ ಮಳೆ ಹೆಚ್ಚಾಗಿ ಜಲಾಶಯಗಳು ತುಂಬಿಲಿ ಎಂದು ಜನತೆ ಪ್ರಾರ್ಥಿಸುತ್ತಿದ್ದಾರೆ.

ವರದಿಗಾರ: ಮ್ಯಾಗೇರಿ ಸಂತೋಷ್ ಹೂವಿನ ಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend