ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಇವರಿಂದ ವಿವಿಧ ಬೇಡಿಕೆಗೆ ಜನಸಂಪರ್ಕ ಸಭೆಯಲ್ಲಿ ಆಗ್ರಹ…!!!

Listen to this article

ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಇವರಿಂದ ವಿವಿಧ ಬೇಡಿಕೆಗೆ ಜನಸಂಪರ್ಕ ಸಭೆಯಲ್ಲಿ ಆಗ್ರಹ
ಕೊಟ್ಟೂರಿನಲ್ಲಿ ನಿನ್ನೆ ನಡೆದ ಜನ ಸಂಪರ್ಕ ಸಭೆಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ನಿವೇಶನ ರಹಿತ ಅನೇಕ ಕುಟುಂಬಗಳಿಗೆ ಸರ್ಕಾರಿ ಜಮೀನು ಗುರುತಿಸಿ ನಿವೇಶನವನ್ನು ಕೊಡಿಸಿ ಎಂದು ಜಿಲ್ಲಾಧಿಕಾರಿಗಳ ಹತ್ತಿರ ಮನವಿ ಮಾಡಿದರು ಕೋಗಳಿ, ಕೋಡಿಹಳ್ಳಿ, ಹಲಬುರು,ರಾಂಪುರ, ಸುಂಕದಕಲ್ಲು ಸಿರಿನಾಯಕನಹಳ್ಳಿ, ಉಜ್ಜಯಿನಿ, ಬಿಡಿಗುಡ್ಡ,ಕಾಳಾಪುರ ಮೂರ್ತಿ ನಾಯಕನಹಳ್ಳಿ ನಡುಮಾವಿನಹಳ್ಳಿ,ಇನ್ನೂ ಅನೇಕ ಹಳ್ಳಿಗಳಲ್ಲಿ ಅನೇಕರು ಇನ್ನೂ ಕೂಡ ಸೋರಿಲ್ಲದೆ ಮತ್ತು ನಿವೇಶನ ಇಲ್ಲದೆ ಪರದಾಡುತ್ತಿದ್ದಾರೆ.

ಆದ್ದರಿಂದ ತಾವುಗಳು ಈ ಹಳ್ಳಿಗಳಲ್ಲಿರುವ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನವನ್ನು ಖರೀದಿ ಮಾಡಿ ಇವರಿಗೆ ಸ್ವಂತ ಸೂರನ್ನು ಕಲ್ಪಿಸಿಕೊಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು ಈ ಗ್ರಾಮಗಳಲ್ಲಿ ಸರ್ಕಾರಿ ಭೂಮಿಯನ್ನು ಹುಡುಕಿಕೊಟ್ಟು ನಿವೇಶನಗಳನ್ನು ಹಂಚಿಕೆ ಮಾಡಬೇಕು ಎಂದು ಅಗ್ರಹಿಸಿದರು ಅದೇ ರೀತಿಯಾಗಿ ಕೊಟ್ಟೂರು ತಾಲೂಕಿನ ಮೂರ್ತಿ ನಾಯಕನಹಳ್ಳಿ ಶಿರಿನಾಯಕನಹಳ್ಳಿ ಬೋರನಹಳ್ಳಿ ಇನ್ನು ಅನೇಕ ಗ್ರಾಮಗಳಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲದಿರುವುದರಿಂದ ಸುಮಾರು 5 ಕಿ.ಮೀಗಟ್ಟಲೆ ಹೋಗಿ ಪಡಿತರವನ್ನು ತೆಗೆದುಕೊಂಡು ಬರಬೇಕಾಗಿರುವುದರಿಂದ ವಯಸ್ಸಾದವರು ಅಂಗವಿಕಲರು ಮತ್ತು ವಾಹನ ಇಲ್ಲದವರ ಪರಿಸ್ಥಿತಿ ತುಂಬಾ ತೊಂದರೆ ಉಂಟಾಗಿದೆ ಆದ್ದರಿಂದ ಈ ಹಳ್ಳಿಗಳಿಗೆ ಪಡಿತರವನ್ನು ವಾರಕ್ಕೆ ಎರಡು ಬಾರಿಯಾದರೂ ಅದೇ ಗ್ರಾಮಗಳಿಗೆ ತೆರಳಿ ಪಡಿತರವನ್ನು ವಿತರಿಸಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು ಈ ಸಂದರ್ಭದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಕಾರ್ಯಕರ್ತರಾದ ಶೈನಜ್ ತಾಲೂಕು ಕಾರ್ಯಕರ್ತರಾದ ಮಲ್ಲೇಶ್ ನೇತ್ರಾವತಿ ಹನುಮಂತಪ್ಪ ಮಂಗಳ ಗೌರಿ ಸೈಯದ್ ಸಾಬ್ ಆನಂದ್ ಅನೇಕ ಕೂಲಿ ಕಾರ್ಮಿಕ ಸಂಘಟನೆಯ ಕಾರ್ಮಿಕರು ಸೇರಿ ಮನವಿ ಸಲ್ಲಿಸಿದರು ಜಿಲ್ಲಾಧಿಕಾರಿಗಳು ಇದಕ್ಕೆ ಸ್ಪಂದಿಸಿ ಪಡಿತರವನ್ನು ವಿತರಿಸಲು 2 ದಿನದಲ್ಲಿ ಇದನ್ನು ಬಗೆಹರಿಸುತ್ತೇವೆ ಎಂದು ಹೇಳಿದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend