ಕೊಟ್ಟೂರು ಮತ್ತು ಇಕ್ರಾ ಸಂಸ್ಥೆಯಿಂದ ಗ್ರಾಹಕರಿಗೆ ಸಾವಯವ ಸತ್ವ ಆಹಾರ ಕುರಿತು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು…!!!

Listen to this article

ಭೂಮಿ ಮಿತ್ರ ಸಾವಯವ ರೈತ ಒಕ್ಕೂಟ ಕೊಟ್ಟೂರು ಮತ್ತು ಇಕ್ರಾ ಸಂಸ್ಥೆಯಿಂದ ಗ್ರಾಹಕರಿಗೆ ಸಾವಯವ ಸತ್ವ ಆಹಾರ ಎನ್ನುವ ಕಾರ್ಯಕ್ರಮವನ್ನು ಕೊಟ್ಟೂರಿನಲ್ಲಿ ಏರ್ಪಡಿಸಲಾಗಿದೆ
ದಿನಾಂಕ 26.05.2024ರಂದು ಬೆಳಿಗ್ಗೆ 10 ಗಂಟೆಗೆ ಪಂಚಮಶಾಲಿ ಸಮುದಾಯ ಭವನ ಸರ್ಕಾರಿ ಆಸ್ಪತ್ರೆ ಎದುರು ಕೊಟ್ಟೂರು ಈ ಒಂದು ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಕಾರಣ ಇತ್ತೀಚಿನ ದಿನಗಳಲ್ಲಿ ನಾವು ತಿನ್ನುವ ಆಹಾರ ಎಷ್ಟರಮಟ್ಟಿಗೆ ಸತ್ವವಾಗಿದೆ ಮತ್ತು ನಾವು ಎಂತಹ ಸತ್ವ ಆಹಾರವನ್ನು ಸೇವಿಸಬೇಕು ಮತ್ತು ಇಂದು ಮನೆ ಮನೆಗಳಲ್ಲಿ ರುಚಿಕರ ಅಡುಗೆ ಮಾಡಿ ಮನೆ ಮಂದಿಯಲ್ಲ ಉಣ್ಣಲು ಕುಳಿತಾಗ ಇದರಲ್ಲಿ ಎಷ್ಟು ವಿಷಯವಿದ್ದಿತು ಎಂಬುವ ಆತಂಕವೊಂದು ಉಣ್ಣುವ ಸುಖವನ್ನೇ ಕಸಿಯುತ್ತಿದೆ.

ರಾಸಾಯನಿಕ ವಿಷ ಗೊಬ್ಬರಗಳಿಂದ ರೈತರ ಜಮೀನು ಮಣ್ಣು ಹಾಳಾಗಿ ಹೊಲಗಳು ಉತ್ಪತ್ತಿ ಇಲ್ಲದಂತಾಗಿದೆ ತಾವು ವಿಷ ಉಂಡುತಮ್ಮ ಪದಾರ್ಥಗಳನ್ನು ಕೊಳ್ಳುವರಿಗೂ ವಿಷ ಊಣಿ ಸುತ್ತಿದ್ದೇವೆ ಎಂಬ ಕೊರಗು ರೈತರನ್ನು ಕಾಡುತ್ತಿದೆ ಗ್ರಾಹಕರು ಮತ್ತು ರೈತರನ್ನು ಈ ತರ ಕಾಣುತ್ತಿರುವ ಆತಂಕಕ್ಕೆ ಹತ್ತಾರು ವರ್ಷಗಳು ನಡೆದ ಪ್ರಯತ್ನ ಸತ್ವ ಆಹಾರವಾಗಿ ನಿಮ್ಮ ಮುಂದೆ ಬಂದಿದೆ ಕೊಟ್ಟೂರು ಹಗರಿಬೊಮ್ಮನಹಳ್ಳಿ ಹರಪನಹಳ್ಳಿ ಕೂಡ್ಲಿಗಿ ತಾಲೂಕುಗಳ 8500 ಸಣ್ಣ ಮಳೆಯ ಶ್ರೀತ ರೈತ ಕುಟುಂಬಗಳು ವಿಕ್ರ ಸಾವಯವ ಕೃಷಿ ಸಂಘಟನೆಯ ಮಾರ್ಗದರ್ಶನಗಳಲ್ಲಿ ಕಳೆದ 15 ವರ್ಷಗಳಿಂದ ರಸಗೊಬ್ಬರ ವಿಷಗಳನ್ನು ತೊರೆದು ಬಹು ಬೆಳೆ ಬೇಸಾಯದಲ್ಲಿ ತೊಡಗಿದ್ದಾರೆ ಇದರಿಂದ ರೈತರ ಜಮೀನುಗಳು ಫಲವತ್ತಾಗಿದ್ದು ಅತಿ ಕಡಿಮೆ ನೀರಿನಲ್ಲಿ ವಿಧ ವಿಧವಾದ ಬೆಳೆಗಳನ್ನು ಬೆಳೆದು ಪಡುತ್ತ ರೈತರ ಬದುಕಿನಲ್ಲಿ ನೆಮ್ಮದಿ ಕಾಣುವಂತಾಗಿದೆ ಇಕ್ರಾ ಸಂಸ್ಥೆ ಈ ಹಿಂದೆ ಈ ತರ ಜಲ ಮರು ಪೂರಣ ತರಬೇತಿ ಯನ್ನು ದೇವರಾಜ ರೆಡ್ಡಿ ಅವರಿಂದ ಜಲ ಮರು ಪೂರಣ ಪ್ರಾತ್ಯಕ್ಷತೆ ಮಾಡಿಸಿ ಎಷ್ಟೋ ರೈತರು ಬೋರ್ ವೆಲ್ ರಿಚಾರ್ಜ್ ಮಾಡಿಕೊಂಡಿದ್ದಾರೆ.

ಈ ತರ ಅನೇಕ ತರಬೇತಿ ಕೊಡಿಸುತ್ತಾ ರೈತರು ಸ್ವಂತ ಸಾವಯವ ಗೊಬ್ಬರಗಳನ್ನು ಬಳಸಿ ತಮ್ಮದೇ ಸ್ವಂತ ಉತ್ಕೃಷ್ಟ ಬೀಜಗಳಿಂದ ಬೆಳೆದ ಈ ಉತ್ಪನ್ನಗಳು ತಮ್ಮ ಮೂಲ ಪೌಷ್ಟಿಕತೆಯನ್ನು ಉಳಿಸಿಕೊಂಡಿದೆ ಇಂತಹ ಸತ್ವ ಭರಿತ ಸಾವಯವ ದೃಢೀಕರಣ ಪಡೆದ ಆಹಾರ ಪದಾರ್ಥಗಳನ್ನು ರೈತರು ಗ್ರಾಹಕರ ಮುಂದೆ ಸತ್ವ ಆಹಾರ ಬ್ರಾಂಡ್ ನಡಿ ನೇರವಾಗಿ ಹೊತ್ತು ತಂದಿದ್ದಾರೆ ಪ್ರತಿಯೊಬ್ಬ ಗ್ರಾಹಕರಿಗೂ ಕೈಗೆ ಟು ಕುವ ಬೆಲೆಯಲ್ಲಿ ವಿಶ್ವಾಸಾರ್ಹ ಪರಿಶುದ್ಧ ಪದಾರ್ಥಗಳನ್ನು ಒದಗಿಸುವದು ಸಂಸ್ಥೆಯ ಗುರಿಯಾಗಿದೆ ಅಂದಿನ ಕಾರ್ಯಕ್ರಮದಲ್ಲಿ ಒಂದೇ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಸಣ್ಣ ಮಳೆಯಾಶ್ರೀತರ ರೈತ ಕುಟುಂಬಗಳು ಸಾವಯವ ಬಹುಬೆಳೆ ಪದ್ದತಿಯಲ್ಲಿ ಮಾಡಿರುವ ಸಾಧನೆ ಕುರಿತು ಕಿರು ಚಿತ್ರವನ್ನು ಪ್ರದರ್ಶಿಸಲಾಗುವುದು ಹಾಗೂ ಮಾರಾಟಕ್ಕೆ ಲಭ್ಯ ಇರುವ ರೈತರ ಸಾವಯವ ಉತ್ಪನ್ನಗಳನ್ನು ಪ್ರದರ್ಶಿಸಲಾಗುವುದು. ರೈತರು ಮತ್ತು ಗ್ರಾಹಕರು ಈ ಸಭೆಯಲ್ಲಿ ಭಾಗವಹಿಸಿ ಇಂತಹ ಒಂದು ಉತ್ತಮ ಕಾರ್ಯಕ್ರಮಕ್ಕೆ ತಾವು ಸಾಕ್ಷಿಯಾಗಿ ತಮ್ಮ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಈ ಕಾರ್ಯಕ್ರಮದ ಇಕ್ರಾ ಸಂಸ್ಥೆ ಮುಖ್ಯಸ್ಥ ರಾದ ವಿ ಗಾಯತ್ರಿ ಮೇಡಮ್ ಇವರ ಒಂದು ಸಾಮಾಜಿಕ ಕಳಕಳಿಯಿಂದ ಭೂಮಿ ಮತ್ತು ವಿಷಮುಕ್ತ ಆಹಾರ ಗ್ರಾಹಕರಿಗೆ ಒದಗಿಸಬೇಕು ಎನ್ನುವ ದೃಷ್ಟಿಯಿಂದ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಮಂಜುನಾಥ್ ಕೆ 9 9 7 2 0 07.201 ಕೆ ಕೊಟ್ರೇಶ್ 74115 75348 ಮತ್ತು ಎಂ ಕೋಟೆಗೌಡ 9945502778 ಇವರನ್ನು ಸಂಪರ್ಕಿಸಿ ಹೆಚ್ಚಿನ ರೈತರು ಮತ್ತು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend