ಹಗಲುವೇಷ ಕಲಾವಿದರಿಗೆ ಮಾಸಾಶನ ನೀಡಿ…!!!

Listen to this article

ಹಗಲುವೇಷ ಕಲಾವಿದರಿಗೆ ಮಾಸಾಶನ ನೀಡಿ

ನೋಡುಗರಿಗೆ ಅಚ್ಚರಿ ಮೂಡಿಸಿತು: ಹಗಲುವೇಷ ರಾಮಾಯಣ ಕಥೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಬೀದಿಗಳ ತುಂಬೆಲ್ಲ 20ದಿನಗಳಿಂದ ಮನೆ ಮನೆಗಳಿಗೆ ತೆರಳಿ ರಾಮಾಯಣದ ಪಾತ್ರಗಳು ಸಂಚರಿಸುತ್ತಿವೆ. ಹನುಮಂತ, ರಾಕ್ಷಸಿ, ಜಾಂಬವಂತ, ರಾಮ, ಸೀತೆ, ಲಕ್ಷ್ಮಣ, ಸುರ್ಪನಕ್ಕಿ ಮುಂತಾದ ಪಾತ್ರಗಳು ಸಜೀವವಾಗಿ ಮನೆಗಳ ಮುಂದೆ ಪ್ರತ್ಯಕ್ಷಗೊಂಡು ಪ್ರೇಕ್ಷಕರ ಮನ ತಣಿಸುತ್ತಿವೆ. ರಾಮಾಯಣದ ಕತೆಗಳನ್ನು ಕಿರಿಯರಿಂದ ಹಿರಿಯರವರೆಗೆ ಪರಿಚಯಿಸುತ್ತಿರುವ ಹಗಲು ವೇಷಗಾರರು ಸದ್ದಿಲ್ಲದೇ ನಮ್ಮ ಸಂಸ್ಕೃತಿಯ ಕುರುಹನ್ನು ಉಳಿಸುತ್ತ ಸಾಗಿದ್ದಾರೆ. ತಲೆತಲಾಂತರದಿಂದ ಒಂದೇ ವೃತ್ತಿಯನ್ನು ಅವಲಂಬಿಸಿ ಬಂದಂತಹ ವೃತ್ತಿಗಳಲ್ಲಿ ಹಗಲುವೇಷವೂ ಒಂದಾಗಿದೆ. ಇಂದು ಪಟ್ಟಣದಲ್ಲಿ ನೋಡುಗರಿಗೆ ಅಚ್ಚರಿ ಮೂಡಿಸಿತು. ಮನೆಗಳಲ್ಲಿ ಟಿವಿ ಬಂದು ಮಕ್ಕಳೆಲ್ಲ ಸುಪರ್‌ಮ್ಯಾನ್, ಸ್ಪೈಡರ್‌ಮ್ಯಾನ್‌ಗಳ ಮುಂದೆ ಕುಳಿತಿರುವಾಗ, ನಮ್ಮದೇ ನೆಲದ ರಾಮಾಯಣದ ಕತೆಗಳನ್ನು ಕಿರಿಯರಿಂದ ಹಿರಿಯರವರೆಗೆ ಪರಿಚಯಿಸುತ್ತಿರುವ ಹಗಲು ವೇಷಗಾರರು ಸದ್ದಿಲ್ಲದೇ ನಮ್ಮ ಸಂಸ್ಕೃತಿಯ ಕುರುಹನ್ನು ಉಳಿಸುತ್ತ ಸಾಗಿದ್ದಾರೆ. ತಲೆತಲಾಂತರದಿಂದ ಒಂದೇ ವೃತ್ತಿಯನ್ನು ಅವಲಂಬಿಸಿ ಬಂದಂತಹ ವೃತ್ತಿಗಳಲ್ಲಿ ಹಗಲುವೇಷವೂ ಒಂದಾಗಿದೆ. ಹಗಲು ಹೊತ್ತಿನಲ್ಲಿ ವಿವಿಧ ವೇಷಗಳನ್ನು ಧರಿಸಿ, ಮನೆಮನೆಗಳಿಗೆ ತೆರಳಿ ರಂಜನೆಯನ್ನೊದಗಿಸಿ ಹೊಟ್ಟೆ ಹೊರೆಯುವ ಕಾಯಕ ಹಗಲು ವೇಷಗಾರರದು ಬಹಳ ಪುರಾತನ ಹಾಗೂ ವೆವಿಧ್ಯಮಯ ಧಾರ್ಮಿಕ ಕಥೆಗಳ ಆಧಾರಿತ ಹಗಲುವೇಷ ಒಂದು ಕಾಲದಲ್ಲಿ ಸಾಕಷ್ಟು ರಾಜವೆಭವ ಅದರ ಕಲಾವಿದರಿಗೆ ಒಳ್ಳೆಯ ಆರ್ಥಿಕ ಸಂಪಾದನೆ ಇತ್ತು. ಹಗಲುವೇಷ ಒಂದು ಪಾರಂಪರಿಕ ಮನರಂಜನೆಯಾಗಿತ್ತು. ಇಂದು ಜನತೆ ಆರಿಸಿಕೊಂಡ ಆಧುನಿಕ ತಂತ್ರಜ್ಞಾನದ ಮನರಂಜನೆಗೆ ಮನಸೋತು ಕತಕ ಮೋಜಿಗಾಗಿ ಅಂಟಿಕೊಂಡು ಸ್ವಾರಸ್ಯಕರವಾದ ಹಾಗೂ ನೀತಿ ಪಾಠಗಳನ್ನೊಳಗೊಂಡ ಹಗಲುವೇಷದಂತಹ ಪಾರಂಪರಿಕ ಕಲೆಗಳು ನಶಿಸುತ್ತಿರುವುದ ಜತೆಗೆ ಹಗಲು ವೇಷದಾರಿಗಳ ಬದುಕು ಸಹ ಬಸವಳಿದಿದೆ. ಕೂಡ್ಲಿಗಿ ತಾಲೂಕಿನ ಸುಮಾರು ದಶಕಗಳ ವರ್ಷಗಳಿಂದ ಹಗಲುವೇಷಧಾರಿಗಳ ಕುಟುಂಬ ಬಸವಳಿದು ಹೋಗಿದೆ. ವೇಷಧಾರಿಗಳು ಜನರನ್ನು ಮನರಂಜಿಸುವುದಕ್ಕಾಗಿ ಹಾಗೂ ಜನರಿಗೆ ಧಾರ್ಮಿಕ ಕಥಾ ಪಾತ್ರಗಳಲ್ಲಿ ಸಿರಿವಂತಿಕೆ ಪ್ರದರ್ಶಿಸುವ ಇವರ ಬದುಕು ಕಷ್ಟಕೋಟಲೆಯಲ್ಲಿ ಸಿಲುಕಿವೆ. ಆದರೂ ಎದೆಗುಂದದೇ ಈ ಜನಾಂಗ ಮಾತ್ರ ಜಗವೆಲ್ಲ ನಗುತಿರಲಿ ಜಗದಳಲು ನನಗಿರಲಿ ಎಂಬ ಹಾಗೆ ತಮ್ಮ ಕಷ್ಟ ಮುಂದೊಂದು ದಿನ ಪರಿಹಾರವಾಗುವ ಆಸೆಯಿಂದ ಬದುಕುತ್ತಿದೆ. ಹಗಲುವೇಷ ಕಲಾವಿದರಿಗೆ ಮಾಸಾಶನ ನೀಡುವ ಮೂಲಕ ಅವರತ್ತ ಸರ್ಕಾರ ಗಮನಹರಿಸಬೇಕಿದೆ. ಈ ಸಂದರ್ಭದಲ್ಲಿ ಸೀತಾರಾಮ್, ವೀರೇಶ್, ಡಿ ದುರುಗಪ್ಪ, ಜಂಬಣ್ಣ, ಮಾರೇಶ್, ವೈ ಮಾರೇಶ, ಕೆ ಮಂಜು ಸೇರಿದಂತೆ ಹಗಲು ವೇಷಗಾರರು ಮಾಧ್ಯಮದ ಮೂಲಕ ಒತ್ತಾಯಿಸಿದ್ದಾರೆ.

 

ಪುರಾತನ ಪರಂಪರೆಯ ಕಲೆಗಳಿಗೆ ಸರ್ಕಾರ ಮಾನ್ಯತೆ ನೀಡಿ, ಅದರ ಕಲಾವಿದರಿಗೆ ಮಾಸಾಶನ ಈಗಿನ ಕಾಲದಲ್ಲಿ 60 ವರ್ಷ ಮೇಲ್ಪಟ್ಟವರು ಬದುಕುವುದಿಲ್ಲ ಹಾಗಾಗಿ 50 ವರ್ಷಕ್ಕೆ ಮಾಸಾಶನ ಮಾಡಿ ಎಂದು ಮನವಿ ಮಾಡಿದರು, ನಮಗೆ ಸರ್ಕಾರದಿಂದ ನೆರವಿಲ್ಲ, ಜೋಪಡಿಗಳಲ್ಲಿ ವಾಸ ಮಾಡುತ್ತಿದ್ದೇವೆ ನಮಗೆ ಯಾವುದೇ ತರಹದ ಸರಕಾರದಿಂದ ಸೌಲಭ್ಯ ದೊರೆತಿಲ್ಲ ಎಂದರು :ವೀರೇಶ್ ಹಗಲುವೇಷಗಾರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend