ಜಂಗಮಸೋವೇನಹಳ್ಳಿ ಕೆರೆಗೆ ಗಂಗೆ ಪೂಜೆ.
ಕೂಡ್ಲಿಗಿ ತಾಲೂಕು ಜಂಗಮಸೋವೇನಹಳ್ಳಿ ಗ್ರಾಮದ ಕರೆಗೆ ಈ ವರ್ಷದಲ್ಲಿ ಉತ್ತಮವಾಗಿ ಬಂದಿರುವ ಮಳೆಗೆ ಕೆರೆ ಸಂಪೂರ್ಣ ಭರ್ತಿಯಾಗಿ ಕೆರೆ ನೀರು ಸಂಗ್ರಹ ಸಾಮರ್ಥ್ಯದ ಗರಿಷ್ಠ ಮಟ್ಟಕ್ಕೆ ತಲುಪಿ ಕೋಡಿಯ ಮೇಲೆ ನೀರು ಜಿನುಗುತ್ತಿದ್ದು ಕೆರೆ ಜೀವಕಳೆಗಟ್ಟಿದ್ದು ಕೆರೆಯಲ್ಲಾ ವಿಹಂಗಮವಾಗಿ ಹಾಲು ಕೆಂಬಣ್ಣ ಮಿಶ್ರಿತ ಸೀರೆಯನ್ನುಟ್ಟು ನಿಂತು ಗಂಗಾಮಾತೆಯಂತೆ ನಯನ ಮೊನೋಹರವಾಗಿ ಕಂಗೊಳಿಸುವಂತಿದ್ದು
ದಾರಿದ್ರ್ಯಾ ವೆಂಬ ಕತ್ತಲೆ ಕಳೆದು ಸಮೃದ್ಧಿ ಬೆಳಕ ಪಸರಿಸುವಂತೆ ಹಣತೆಯಲ್ಲಿ ಬೆಳಗುವ ದೀಪ ಪ್ರಜ್ವಲಿಸುವಂತೆ ಕಳೆಗಟ್ಟಿದ್ದು ದೀಪಾವಳಿ ಹಬ್ಬದ ಸಂಭ್ರಮಕೆ ಇನ್ನಷ್ಟು ಸಂಭ್ರಮ ತಂದಿದೆ
ಇಂತಹ ಪ್ರಾಕೃತಿಕ ಕೆರೆಗೆ ಗ್ರಾಮಸ್ಥರೆಲ್ಲರು ತಮ್ಮ ಮನೆಯಲ್ಲಿ ತಾಯರಿಸಿದ ಸಿಹಿ ಖಾದ್ಯಗಳನ್ನು ಸಾಮೋಹಿಕ ವಾಗಿ ನೈವೇದ್ಯ ಅರ್ಪಿಸಲು ಜೊತೆಗೆ ಅಯಾಗಾರ ಮನೆಗಳಿಂದ ಕುಂಭ ಕಳಶ ಹಿಡಿದು ಮಂಗಳ ವಾದ್ಯಗಳ ಮೂಲಕ ಗ್ರಾಮದಿಂದ ಕರೆ ಕೋಡಿಯತನಕ ಸಾಗಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿರುವುದು ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದಿದೆ
ಗ್ರಾಮದ ಭಾಗದಲ್ಲಿ ಅಂತರ್ಜಲ ಹೆಚ್ಚಾಗಿ ಕೃಷಿಕರ ಭವಿತವ್ಯದ ದಿನಗಳಲ್ಲಿ ಬದುಕು ಹಸನಾಗುತ್ತದೆನ್ನುವ ನಂಬಿಕೆ ಮನದಲಿ ಮೂಡಿ ರೈತಾಪಿ ಜನರ ಸಂಭ್ರಮ ವ್ಯಕ್ತಪಡಿಸುವ ಪರಿ ಸ್ವರ್ಗಕ್ಕೆ ಮೂರೆ ಗೇಣು ಎಂಬಂತಾಗಿದ್ದು ಇವರ ಸಂತಸಕೆ ಪಾರವೇ ಇರಲಿಲ್ಲ ಅದೇನೋ ಅನ್ನದಾತನ ಮೊಗದಲಿ ಮಂದಹಾಸ ಮೂಡಿತ್ತು….
ಗ್ರಾಮದ ಕೆರೆಗೆ ಸುಮಾರು ಮುವತ್ಮೂರು ವರ್ಷಗಳ ಹಿಂದೆ 1991ರಲ್ಲಿ ಕೆರೆ ತುಂಬಿ ಕೋಡಿ ಹರಿದಿದ್ದು ಬಿಟ್ಟರೆ ಅಲ್ಲಿಂದ ಇಲ್ಲಿಯವರೆಗೆ ಕೋಡಿ ತುಂಬುವ ಬಯಕೆ ಈಡೆರಿಲ್ಲ ಸುಮಾರು ಎರಡು ಮೂರು ಬಾರಿ ತುಂಬುವ ಹಂತಕ್ಕೆ ಬಂದು ಸ್ವಲ್ಪ ಸ್ವಲ್ಪದರಲ್ಲಿಯೇ ಕೊಡಿ ಹಂತಕ್ಕೆ ತಲುಪಿ ತುಂಬಿ ಹರಿಯಬೇಕೆನ್ನುವಷ್ಟರಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಮತ್ತೆ ಅದೆ ನಿರಾಸೆ ಮೂಡಿಸುತಿತ್ತು
ಕಳೆದ ಎರಡು ವರ್ಷಗಳ ಹಿಂದೆ ಕೋಡಿ ಹಂತಕ್ಕೆ ತಲುಪಿತ್ತು ಕೆರೆಯ ಕೋಡಿ ಹರಿಸಲು ಪ್ರಯತ್ನ ಗ್ರಾಮಸ್ಥರಿಂದ ನೆಡಿದಿತ್ತು ಸುತ್ತಮುತ್ತಲಿನ ಕೊಳವೆ ಬಾವಿಗಳಿಂದ ನೀರನ್ನು ಹರಿಸಿ ತುಂಬಿಸುವ ಭಗಿರಥ ಯತ್ನ ಗ್ರಾಮಸ್ಥರು ಮಾಡಿದ್ದರು ಪ್ರಯತ್ನ ಫಲಿಸಿರಲಿಲ್ಲ ಆದರೂ ತುಂಬದ ಕೆರೆಗೆ ಗಂಗೆಪೂಜೆ ಸಲ್ಲಿಸಿದ್ದರು….
ಮೂರು ನಾಲ್ಕು ವರ್ಷಗಳ ಹಿಂದೆ ಕೂಡ್ಲಿಗಿ ತಾಲುಕಿನ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತಂಬಿಸುವ ಯೋಜನೆ ಜಾರಿಗೆ ಹಿರೇಮಠ ಶ್ರೀಗಳು ಗ್ರಾಮದ ಬತ್ತಿದ ಕೆರೆಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮುಖಾಂತರ ಸರ್ಕಾರದ ಗಮನ ಸೆಳೆಯುವ ಹೋರಾಟಕ್ಕೆ ಮುನ್ನುಡಿ ಬರೆದಿದ್ದರು….
ವರದಿ. ಎಂ. ಬಸವರಾಜ್ ಕಕ್ಕುಪ್ಪೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030