ಜನಮಾನಸದಲ್ಲಿ ನೆಲೆನಿಂತ ರಾಜಾವೀರ ಮದಕರಿನಾಯಕರನ್ನು ಮತ್ತೆ ಮತ್ತೇ ನೆನಪಿಸಿಕೊಳ್ಳಬೇಕು ಎಂದ. ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ಜನಮಾನಸದಲ್ಲಿ ನೆಲೆನಿಂತ ರಾಜಾವೀರ ಮದಕರಿನಾಯಕರನ್ನು ಮತ್ತೆ ಮತ್ತೇ ನೆನಪಿಸಿಕೊಳ್ಳಬೇಕು ಎಂದ. ಶಾಸಕ ಡಾ. ಶ್ರೀನಿವಾಸ್. ಎನ್. ಟಿ

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಖಾನಹೊಸಹಳ್ಳಿ ಗ್ರಾಮದಲ್ಲಿ ದಿ; 13-10-2024 ರಂದು ಶ್ರೀ ರಾಜಾವೀರ ಮದಕರಿನಾಯಕ ಜಯಂತೋತ್ಸವ ಹಾಗೂ ಪುತ್ಥಳಿ ಅನಾವರಣ*ದ ಮೆರವಣಿಗೆಯಲ್ಲಿ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳ ದಿವ್ಯಾ ಸಾನಿಧ್ಯದಲ್ಲಿ ವಾಲ್ಮೀಕಿ ಸಮುದಾಯದ ಹಿರಿಯರು, ಮಹಿಳೆಯರು, ಯುವಕರು ಹಾಗೂ ಎಲ್ಲಾ ವರ್ಗ, ಧರ್ಮದವರನ್ನು ಒಳಗೊಂಡಂತೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಪೂಜನೀಯವಾಗಿ ರಾಜಾವೀರ ಮದಕರಿನಾಯಕರ ಪುತ್ಥಳಿಯನ್ನು ಉದ್ಘಾಟಿಸಿದರು. ಬಳಿಕ ದಿ.ಮಾಜಿ ಶಾಸಕ ಎನ್.‌ಟಿ. ಬೊಮ್ಮಣ್ಣನವರ ವೇದಿಕೆ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.

ವಿಜಯನಗರೋತ್ತರ 18 ನೇ ಶತಮಾನದ ಕಾಲ ಘಟ್ಟದ ಚಿತ್ರದುರ್ಗದ ಪಾಳೆಯಗಾರರಲ್ಲಿ ಶ್ರೀ ರಾಜಾವೀರ ಮದಕರಿನಾಯಕರು ಶೌರ್ಯ, ಸಾಹಸ ಮತ್ತು ಪರಾಕ್ರಮದಿಂದಲೇ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕವಾದ ಸುಧಾರಣೆಗಳನ್ನು ಜಾರಿಗೆ ತಂದರು. ಅವರು ಅಂದಿನ ರಾಜಪ್ರಭುತ್ವದಲ್ಲಿ ಒಳ್ಳೆಯ ಆಡಳಿತ ಕೊಟ್ಟು ಜನಮಾನಸದಲ್ಲಿ ಉಳಿದಿರುವಂತದ್ದನ್ನು ಇಂತಹ ಜಯಂತಿ ಮೂಲಕ ನೆನಪಿಸಿಕೊಳ್ಳುವ ನಿಟ್ಟಿನಲ್ಲಿ ಇಂದಿನ ತಲೆಮಾರಿನ ಜನರಿಗೆ ಮುಟ್ಟಿಸುವಂತದ್ದು ಸಂತಸ ತಂದಿದೆ ಎಂದರು

ನಮ್ಮ ಭಾಗದ ಜರ್ಮಲಿ, ಗುಡೇಕೋಟೆ, ರಾಯದುರ್ಗ, ನಾಯಕನಹಟ್ಟಿ ಪಾಳೆಯಗಾರರು ಮತ್ತು ಶ್ರೀ ರಾಜಾವೀರ ಮದಕರಿನಾಯಕರು ಅವರ ನಡುವೆ ಒಳ್ಳೆಯ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ  ಈ ಪುಣ್ಯಭೂಮಿಯಲ್ಲಿ ಮದಕರಿನಾಯಕರು ನಡೆದಾಡಿದ ಹೆಜ್ಜೆಯ ಗುರುತುಗಳು ಪ್ರಸ್ತುತ ಸಮಾಜಕ್ಕೆ ಪ್ರೇರಣೆ ಮತ್ತು ಸ್ಪೂರ್ತಿ ತುಂಬುವಂತಹ ಅರ್ಥ ಪೂರ್ಣ ಕಾರ್ಯಕ್ರಮವಿದು ಎಂದೂ ಹೇಳಿದರು.

ಅದರ ಜೊತೆಗೆ ಇಂದಿನ ಪ್ರಜಾ ಪ್ರಭುತ್ವದಲ್ಲಿ ಡಾ. ಬಿ.ಆರ್.‌ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಅಡಿಯಲ್ಲಿ ನಾವು ಎಲ್ಲರೂ ಸಾಗೋಣ ಎಂದೂ ತಿಳಿಸಿದರು. ಇನ್ನೂ ನಮ್ಮ ಕ್ಷೇತ್ರದ ಅಭಿವೃದ್ಧಿಯ ವಿಚಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೇ, ಇಲ್ಲಿನ ಜನ ತಾಳ್ಮೆಯಿಂದ ನನಗೆ ಸಹಕಾರ ಕೊಟ್ಟರೇ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣತೊಡುವೆ ಎಂದೂ ಶಾಸಕರು ಸಭೆಯಲ್ಲಿ ತಿಳಿಸಿದರು. ‌

ಒಟ್ಟಿನಲ್ಲಿ ಈ ದಿನ, ಜನಪ್ರತಿನಿಧಿಗಳು, ಗಣ್ಯರು, ವಿವಿಧ ಶ್ರೀಗಳು ದಿ. ಮಾಜಿ ಶಾಸಕರಾದ ಎನ್. ಟಿ. ಬೊಮ್ಮಣ್ಣನವರು ಸಂಘಟನೆ ಮತ್ತು ಹೋರಾಟ ಹಿನ್ನೆಲೆಯೊಂದಿಗೆ ರಾಜಕೀಯವಾಗಿ ಆಲದಮರದಂತೆ ಬೆಳೆದು ಬೇಡನಾಯಕರ ಏಳಿಗೆಗಾಗಿ ತಮ್ಮನ್ನೂ ತಾವು ಅರ್ಪಿಸಿಕೊಂಡಿರುವಂತದ್ದನ್ನು ಎಲ್ಲರೂ ಸ್ಮರಿಸಿಕೊಂಡರು* ಆ ಮೂಲಕ ಡಾ. ಶ್ರೀನಿವಾಸ್ ‌.ಎನ್. ಟಿ. ಅವರು ಒಬ್ಬ ವೈದ್ಯರಾಗಿ ಈ ಭಾಗದ ಶಾಸಕರಾಗಿ ಹಿಂದುಳಿದ ಕೂಡ್ಲಿಗಿ ಕ್ಷೇತ್ರದ ಶಿಕ್ಷಣ, ಆರೋಗ್ಯ ಮತ್ತು ಮೂಲ ಭೂತ ಸೌಕರ್ಯಗಳ ಅಭಿವೃದ್ಧಿಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದೂ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಶ್ರೀ ಎನ್. ವೈ. ಗೋಪಾಲಕೃಷ್ಣ, ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷರಾದ ಶ್ರೀ ಯೋಗೇಶ್ ಬಾಬು, ದಿವ್ಯ ಸಾನಿಧ್ಯ ವಹಿಸಿದ ಶ್ರೀಗಳಾದ ಪ್ರಸನ್ನಾನಂದ ಪುರಿ ಮಹಾಸ್ವಾಮಿಗಳು, ಶ್ರೀ ವರದಾನೇಶ್ವರ ಮಹಾಸ್ವಾಮಿಗಳು, ಶ್ರೀ ಷ-ಬ್ರ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿಯವರು. ಶ್ರೀ ದಾ.ಮ. ಐಮಡಿ ಶರಣಾರ್ಯರು. ಶ್ರೀ ಬಸವಲಿಂಗ ಸ್ವಾಮಿಗಳು ,
ವಾಲ್ಮೀಕಿ ಸಮುದಾಯ ಸಂಘಟನೆಯಕಾರರಾದ ಶ್ರೀ ಸುರೇಶ, ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ, ವಿಶೇಷ ಸನ್ಮಾನಿತರಾದ ಶ್ರೀ ವೆಂಕಟೇಶ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಕಾನಾಮಡುಗು ಶಶಿಧರಸ್ವಾಮಿ, ಬಿಡಿಸಿಸಿ ಅಧ್ಯಕ್ಷರಾದ ಗುಂಡುಮುಣುಗು ಕೆ. ಟಿ. ತಿಪ್ಪೇಸ್ವಾಮಿ, ಮುಖಂಡರಾದ ಎನ್. ಟಿ. ತಮ್ಮಣ್ಣ, ಗುಂಡುಮುಣುಗು ಎಸ್. ಪಿ. ಪ್ರಕಾಶ್, ಗುಂಡುಮುಣುಗು ಮಂಜಣ್ಣ, ಶ್ರೀ ಪಾಪನಾಯಕ, ಜಿ.ಓ. ಓಬಣ್ಣ, ಸೂರ್ಯ ಪ್ರಕಾಶ, ಡಾ. ಟಿ. ಓಂಕಾರಪ್ಪ, ತಳವಾರ ಶರಣಪ್ಪ, ಮಾರಪ್ಪ, ಕುರಿಹಟ್ಟಿ ಬೋಸಣ್ಣ, ಗಂಗಾಧರ, ದುರುಗಪ್ಪ, ಪೂಜಾರಹಳ್ಳಿ ಮಹೇಶ, ಪಸಲು ಪಾಲಯ್ಯ, ಲಾಯರ್ ಬೋರಣ್ಣ, ದಾಸಣ್ಣ, ಗ್ರಾ. ಪಂ‌. ಅಧ್ಯಕ್ಷರಾದ ಚೇತನ್, ಉಪಾಧ್ಯಕ್ಷರು, ಸರ್ವ ಸದಸ್ಯರು, ಖಾನಹೊಸಹಳ್ಳಿ ಗ್ರಾಮದ ಹಿರಿಯರು, ವಾಲ್ಮೀಕಿ ಸಮುದಾಯ ಮತ್ತು ಎಲ್ಲಾ ವರ್ಗದ ಗಣ್ಯರು, ವಿವಿಧ ಸಂಘಟನೆಕಾರರು , ಮಹಿಳೆಯರು, ಪತ್ರಕರ್ತರು, ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ, ಎಂ, ಬಸವರಾಜ್ ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend