ಕೂಡ್ಲಿಗಿ:ಕಳಪೆ ಔಷಧ ಔಷದೋಪಚಾರವನ್ನು ಗ್ರಾಹಕರು ಖಂಡಿಸಬೇಕಿದೆ_ ಕೆ.ಎಮ್.ರೂಪ…!!!

Listen to this article

ಕೂಡ್ಲಿಗಿ:ಕಳಪೆ ಔಷಧ ಔಷದೋಪಚಾರವನ್ನು ಗ್ರಾಹಕರು ಖಂಡಿಸಬೇಕಿದೆ_ ಕೆ.ಎಮ್.ರೂಪ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಕಳಪೆ ಔಷಧ ಹಾಗೂ ಕಳಪೆ ಔಷದೋಪಚಾರವನ್ನು, ಗ್ರಾಹಕರು ಸಹಿಸಬಾರದು ಮತ್ತು ಅದನ್ನು ಖಂಡಿಸಬೇಕೆಂದು. ಪಟ್ಟಣದ ಜ್ಞಾನಭಾರತಿ ಮತ್ತು ವೈ.ಎಸ್.ಎಸ್ ಸಂಸ್ಥೆಯ ಮುಖ್ಯಸ್ಥೆ, ಕೆ.ಎಂ.ರೂಪ ಹೇಳಿದರು.
ಅವರು ಪಟ್ಟಣದ ವೈ.ಎಸ್.ಎಸ್ ಸಮೂಹ ಸಂಸ್ಥೆಯಲ್ಲಿ ಸೆ25 ರಂದು ಜರುಗಿದ, ವಿಶ್ವ ಔಷಧಿಕಾರರ ದಿನಾಚರಣೆಯನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿ ವರ್ಷದ ಸೆಪ್ಟೆಂಬರ್ 25 ರಂದು, ವಿಶ್ವ ಫಾರ್ಮಾಸಿಸ್ಟ್ ದಿನವನ್ನಾಗಿ ಆಚರಿಸಲಾಗುತ್ತದೆ. 1912ರ ಸೆಪ್ಟೆಂಬರ್ 25ರಂದು, ಇಂಟರ್ನ್ಯಾಷನಲ್ ಫಾರ್ಮಾಸ್ಯುಟಿಕಲ್ ಫೆಡರೇಶನ್ ಸ್ಥಾಪನೆಯಾಗಿದ್ದು. ಸ್ಥಾಪನೆಯ ದಿನವನ್ನು ಕಳೆದ 2009ರಿಂದ, ಸಾರ್ವತ್ರಿಕವಾಗಿ ನಿರಂತರ ಆಚರಿಸಲಾಗುತ್ತಿದೆ ಎಂದರು.

ಔಧದವನ್ನು ಮಾರುಕಟ್ಟೆಯಲ್ಲಿ ಒಂದು ಕಡೆ ಗ್ರಾಹಕರಿಗೆ ಗುಣತ್ಮಕವಾದವುಗಳನ್ನು ನೀಡುತ್ತಿದ್ದರೆ, ಇನ್ನೊಂದು ಕಡೆ ಕಳಪೆ ಗುಣಮಟ್ಟದ ಔಷದಗಳನ್ನು ನೀಡುತ್ತಿದೆ. ಆದ ಕಾರಣ ದಯಾಮಾಡಿ ಗ್ರಾಹಕರು, ಕಳಪೆ ಔಷಧ ಹಾಗೂ ಕಳಪೆ ಔಷದೋಪಚಾರವನ್ನು ಖಂಡಿಸಬೇಕು ಎಂದು ಗ್ರಾಹಕರಿಗರ ಕರೆ ನೀಡಿದರು.

“ಜಾಗತಿಕ ಮಟ್ಟದಲ್ಲಿ ಫಾರ್ಮಸಿ ಅಭ್ಯಾಸವನ್ನು ಮುನ್ನಡೆಸುವುದು”, ಮತ್ತು ವಿಶ್ವ ಫಾರ್ಮಸಿಸ್ಟ್‌ಗಳ ದಿನದ ಮೂಲಕ ಜಾಗೃತಿ ಮೂಡಿಸುವುದು ಸಂಸ್ಥೆಯ ಮುಖ್ಯ ಉದ್ದೇಶ ಎಂದರು.
*ಸಮಯ ಪ್ರಜ್ಞೆ ಮುಖ್ಯ-ಜಿ.ಆರ್.ರಾಜು*-
ಆಡಳಿತಾಧಿಕಾರಿ ಜಿ.ಆರ್ ರಾಜು ಮಾತನಾಡಿ, ಒಬ್ಬ ಮನುಷ್ಯ ತೀವ್ರ ಅನಾರೋಗ್ಯಕ್ಕೀಡಾಗಿ ಗಂಭೀರ ಸ್ಥಿತಿಯಲ್ಲಿದ್ದಾಗ. ವೈದ್ಯ ಸಮಯಕ್ಕೆ ಸರಿಯಾಗಿ ಅಗತ್ಯ ಔಷದೋಪಚಾರ ಮಾಡಿದರೆ ಮಾತ್ರ, ವ್ಯಕ್ತಿ ಬದುಕಲು ಸಾಧ್ಯ ಪ್ರಾಣಪಾಯದಿಂದ ಪಾರಾಗಲು ಸಾಧ್ಯ ಎಂದರು. ವೈದ್ಯರಿಗೆ ಹಾಗೂ ಆರೋಗ್ಯ ಸಿಬ್ಬಂದಿಗೆ ಸಮಯ ಪ್ರಜ್ಞೆ ಮುಖ್ಯ, ಇಲ್ಲವಾದರೆ ರೋಗಿಗೆ ಪ್ರಾಣಾಪಾಯ ಖಂಡಿತ ಎಂದರು. ಕಾರಣ ನಮ್ಮ ವಿದ್ಯಾರ್ಥಿಗಳು ಯಾವಾಗಲೂ ಸಮಯ ಪ್ರಜ್ಞೆ ಹೊಂದಿರಬೆೇಕು, ಜೊತೆಗೆ ಸಮಾಜಮುಖಿಯಾಗಿ ಮುಖಿ ಮನೋಭಾವ ಹೊಂದುವುದು ಬಹಳ ಮುಖ್ಯ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಪಾರ್ಮಸಿ ಮುಖ್ಯಸ್ಥರಾದ ಡಾ.ಜಯಚಂದ್ರ, ಸಹಾಯ ಪ್ರಾಧ್ಯಾಪಕರಾದ ಮುಜಾಮಿಲ್ಲಾ, ಬಿಇಡಿ ಪ್ರಚಾರ್ಯರಾದ ಕೆ.ಎಚ್.ವಿಜಯಕುಮಾರ. ಎನ್.ಬಸವರಾಜ ಹಿರಿಯ ಸಹಾಯಕ ಪ್ರಾಧ್ಯಪಕರಾದ ಎನ್.ಬಸವರಾಜ, ಉಪನ್ಯಾಸಕರು ಹಾಗೂ ಪತ್ರಕರ್ತರಾದ ಕೆ.ನಾಗರಾಜ, ಇಂಗ್ಲೀಷ ಮಿಡಿಯಂ ಮುಖ್ಯ ಶಿಕ್ಷಕರಾದ ಮಲೈಕ್, ಸಿಬಿಎಸ್‌ಸಿ ಮುಖ್ಯ ಶಿಕ್ಷಕರಾದ ಅರುಣ ಸೇರಿದಂತೆ. ಎಲ್ಲ ಭೋದಕರ ವರ್ಗ, ಹಾಗೂ ಭೋದಕೇತರ ವರ್ಗದವರು ಹಾಜರಿದ್ದರು. ವಿದ್ಯಾ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾರಂಭಕ್ಕೂ ಮುನ್ನ ದಿನಾಚರಣೆ ಪ್ರಯುಕ್ತ, ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಥಾ ನಡೆಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥೆ, ಕೆ.ಎಮ್.ರೂಪರವರನ್ನು. ಸಂಸ್ಥೆಯ ಪರವಾಗಿ ಎಲ್ಲಾ ಸಿಬ್ಬಂದಿಯರು, ಹಾಗೂ ವಿದ್ಯಾರ್ಥಿಗಳು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು…

ವರದಿ. ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend