ಕೂಡ್ಲಿಗಿ:ಹಿಂದೂ ಮಹ‍ಾ ಗಣಪತಿ ಸಂಘದಿಂದ ಗಣೇಶೋತ್ಸವಸಂಪನ್ನಃ…!!!

Listen to this article

ಕೂಡ್ಲಿಗಿ:ಹಿಂದೂ ಮಹ‍ಾ ಗಣಪತಿ ಸಂಘದಿಂದ ಗಣೇಶೋತ್ಸವಸಂಪನ್ನಃ-ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಶ್ರೀ ಹಿಂದೂ ಮಹಾಗಣಪತಿ ಸಂಘದಿಂದ, ಹನ್ನೆರಡನೇ ವರ್ಷದ ಗಣೇಶೋತ್ಸವವಾಗಿದ್ದು. ಈ ಭಾರಿ ಹದಿಮೂರು ದಿನಗಳ ಕಾಲ, ಬಹು ಅದ್ದೂರಿಯಿಂದ ಗಣೇಶೋತ್ಸವ ಜರುಗಿಸಲಾಯಿತು.
ಯುವಕರಿಗೆ ಮಾದರಿ ಹಿಂದೂ ಮಹಾ ಗಣಪತಿ ಸೇವ‍ಾ ಸಮಿತಿಯ ಯುವಕರು_ ಶಾಸಕ ಡಾ”ಎನ್.ಟಿ.ಶ್ರೀನಿವಾಸ್- ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಹನ್ನೆರೆಡನೇ ದಿನವಾದ ಸೆ18ರಂದು. ಶ್ರೀಗಣಪತಿ ದೇವರ ದರ್ಶನ ಪಡೆದ ಕ್ಷೇತ್ರದ ಶಾಸಕರಾದ, ಡಾ”ಎನ್.ಟಿ.ಶ್ರೀನಿವಾಸ್ ರವರು ಮಾತನಾಡಿದರು. ಎಲ್ಲಾ ಸಮುದಾಗಳ ಸಂಗಮ ಎಂಬಂತೆ, ಹಳೇ ಸಂತೆ ಮೈದಾನದ ಗಲ್ಲಿವಾಸಿಗಳಾದ ಎಲ್ಲಾ ಸಮುದಾಯಗಳ ಯುವಕರು. ಒಂದೇ ವೇದಿಕೆಯಲ್ಲಿ ಒಗ್ಗೂಡಿ ಸುಮಾರು ಹನ್ನೆರೆಡು ವರ್ಷಗಳಿಂದ, ಸತತವಾಗಿ ಪ್ರತಿವರ್ಷವೂ ಈ ಭಾರಿ ವಿಶೇಷವಾಗಿ 13ದಿನಗಳ ಕಾಲ. ಶ್ರೀಗಣೇಶೋತ್ಸವವನ್ನು ಬಹು ಅರ್ಥಪೂರ್ಣವಾಗಿ ಹಾಗೂ ಶ್ರದ್ಧಾ ಭಕ್ತಿಯಿಂದ, ನವೋಲ್ಲಾಸದಿಂದ ಸೌಹಾರ್ದತೆಯಿಂದ ಅದ್ಧೂರಿಯಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು. ಈ ಮೂಲಕ ಹಿಂದೂ ಮಹಾ ಗಣಪತಿ ಸೇವಾ ಸಮತಿಯ ಯುವಕರು. ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ, ಆಧುನಿಕ ಯುವ ಪೀಳಿಗೆಗೆ ಅವರು ಆದರ್ಶವಾಗಿದ್ದಾರೆ. ಹಿಂದೂ ಮಹಾ ಗಣಪತಿ ಸೇವಾ ಸಮಿತಿಯ ಯುವಕರೆಲ್ಲರೂ, ಸಾಂಸ್ಕೃತಿಕವಾಗಿ ಧಾರ್ಮಿಕವಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆಂದರು.
ಪ್ರಸಾದ ಬಡಿಸಿದ ಶಾಸಕ ಡಾ”ಎನ್.ಟಿ.ಶ್ರೀನಿವಾಸ್- ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು, ಹಿಂದೂ ಮಹಾ ಗಣಪತಿ ದರ್ಶನ ಪಡೆದರು. ನಂತರ ಅವರೇ ಸ್ವತಃ ಪ್ರಸಾದವನ್ನು ಬಡಿಸುವ ಮೂಲಕ, ನೆರದವರು ಹುಬ್ಬೇರಿಸುವಂತೆ ಸರಳತೆ ಹಾಗೂ ಧರ್ಮ ಶ್ರದ್ಧೆ ಮೆರೆದರು. ಒಂದು ಪಂಕ್ತಿ ಮುಗಿಯೋ ವರೆಗೂ ಖದ್ದು ಅವರೇ ಎಲ್ಲರಿಗೂ ಪ್ರಸಾದ ನೀಡಿದರು, ನಂತರ ಅವರು ಗಣೇಶ ಪ್ರಸಾದವನ್ನು ಸೇವಿಸಿದರು. ಪಟ್ಟಣದ ಹಳೇ ಸಂತೆ ಮಾರ್ಕೇಟ್ ಗಲ್ಲಿಯ, ಹಾಗೂ ಪಟ್ಟಣದೆಲ್ಲೆಡೆಯ ಸಾರ್ವಜನಿಕರು. ಮತ್ತು ತಾಲೂಕಿನೆಲ್ಲೆಡೆಯಿಂದ ಆಗಿಮಿಸಿದ್ದ ಗಣೇಶನ ಸಾವಿರಾರು ಭಕ್ತರು, ಧರ್ಮ ಶ್ರದ್ಧೆಯಿಂದ ಪ್ರಸಾದ ಸೇವಿಸಿ ಪುನೀತರಾದರು.
13ದಿನಗಳ ಕಾಲ ಗಣೇಶೋತ್ಸವ-ವೇದಿಕೆಯ ಮೇಲೆ ಗಣೇಶ ಚತುರ್ಥಿಯಂದು ಮೂರ್ತಿ ಪ್ರತಿಷ್ಠಾಪಿಸಿದ ದಿನದಿಂದ, ಹನ್ನೆರೆಡು ದಿನಗಳವರೆಗೆ ಪ್ರತಿ ನಿತ್ಯವೂ ಯುವಕರಿಂದ ಮಕ್ಕಳಿಂದ ಸ್ಥಳೀಯ ಯುವ ಪ್ರತಿಭಾನ್ವಿತ ಕಲಾವಿದರಿಂದ. ಅನೇಕ ಸಾಂಸ್ಕೃತಿಕ ಕಲೆಗಳ ಪ್ರದರ್ಶನ ಜರುಗಿದವು, ಯುವ ಪ್ರತಿಭೆಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನ. ನಿಯಮಿತಬಾಗಿ ಹೊರಹಾಕುವಂತ ಕಾರ್ಯಕ್ರಮಗಳು ಜರುಗಿದವು, ಉದಯೋನ್ಮುಕ ಪ್ರತಿಭೆಗಳ ಹಾಗೂ ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಳ್ಳವ ವೇದಿಕೆಯಾಲಾಗಿತ್ತು. ಸಂತೆ ಮೈದಾನದ ಗಲ್ಲಿಯ ಹಿರಿಯರು ಸಾರ್ವಜನಿಕರು, ಯುವಕರು ನಾಗರೀಕರು ಮಹಿಳೆಯರು. ಮಕ್ಕಳು ಎಲ್ಲಾ ಕೋಮುಗಳ ಮುಖಂಡರು, ಜನಪ್ರತಿನಿಧಿಗಳು ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ವಿವಿದ ಪಕ್ಷಗಳ ಪ್ರಮುಖರು, ವಿವಿದ ಜನಪ್ರತಿನಿಧಿಗಳು ಉತ್ಸವದಲ್ಲಿ ಸಕ್ರೀವಾಗಿ ಭಾಗಿಯಾಗಿ ಅದ್ಧೂರಿ ಗಣೇಶೋತ್ಸವಕ್ಕೆ ಸಾಕ್ಷಿಯಾದರು…

ವರದಿ. ಎಂ. ಬಸವರಾಜ್ ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend