ಶಿವಮೊಗ್ಗ ದಿಂದ ಮಹಿಮಾ ಪಾಟೀಲ್ ಮತ್ತು ತಂಡ ಇಕ್ರಾ ಸಂಸ್ಥೆಗೆ ಭೇಟಿ…!!!

Listen to this article

ಕೊಟ್ಟೂರು ತಾಲೂಕು ಬಳಿಗನೂರು ದೂಪದಹಳ್ಳಿ ಮತ್ತು ಹ್ಯಾಳ್ಳ್ಯಾಇನ್ನೂ ಹಲವಾರು ಗ್ರಾಮಗಳ ರೈತರನ್ನು ಭೇಟಿಯಾದ ಸಾವಯವ ಕೃಷಿಕರು. ಶಿವಮೊಗ್ಗದಿಂದ ಸುಮಾರು 120 ಜನರ ತಂಡ ಕೊಟ್ಟೂರು ತಾಲೂಕಿನ ಅನೇಕ ಹಳ್ಳಿಗಳಿಗೆ ಸಾವಯವ ಕೃಷಿ ಮಾಡುವ ರೈತರನ್ನು ಭೇಟಿಯಾಗಿ ಅವರು ಮಾಡಿರುವ ಕೃಷಿಯ ಅನೇಕ ಅವಿಷ್ಕಾರಗಳನ್ನು ನೋಡುತ್ತಾ ಮತ್ತು ಸಾವಯವ ಕೃಷಿಯಲ್ಲಿ ಸಾಧಕ ಬಾಧಕಗಳನ್ನು ಅವರ ಜೊತೆ ಚರ್ಚಿಸುತ್ತ ಸಾವಯವ ಕೃಷಿಗೆ ಒತ್ತು ಕೊಡಬೇಕು ಎಂಬುವ ಉದ್ದೇಶದಿಂದ ಕೊಟ್ಟೂರಿನ ಇಕ್ರಾ ಸಂಸ್ಥೆಯವರು ಅನೇಕ ಹಳ್ಳಿಗಳಲ್ಲಿ ಸಾವಯವ ಕೃಷಿಯಲ್ಲಿ ರೈತರನ್ನು ತೊಡಗಿಸುವುದರ ಮೂಲಕ ರೈತರಿಗೆ ಖರ್ಚನ್ನು ಕಡಿಮೆ ಮಾಡಿ ಮತ್ತು ದೇಶದ ಜನರಿಗೆ ಒಳ್ಳೆಯ ಆಹಾರವನ್ನು ಒದಗಿಸುವ ಮೂಲಕ ಅವರ ಕುಟುಂಬದಲ್ಲಿಯೂ ಕೂಡ ಆರೋಗ್ಯವನ್ನು ಕಾಪಾಡುವುದರ ಮೂಲಕ ಕೃಷಿಯನ್ನೇ ನಂಬಿ ಬದುಕುವ ಹಲವಾರು ಕುಟುಂಬಗಳು ಇಂದು ಇಕ್ರಾ ಸಂಸ್ಥೆಯ ಫಲವಾಗಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡು ಅನೇಕ ಬೆಳೆ ಮತ್ತು ತರಕಾರಿಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ ಮಹಿಮಾ ಪಾಟೀಲ್ ಮತ್ತು ಅವರ ತಂಡ ಅನೇಕ ಹಳ್ಳಿಗಳನ್ನು ಸುತ್ತಾಡಿ ಸಾವಯವ ಕೃಷಿಯಲ್ಲಿ ಮಾಡಿರುವಂತಹ ಅನೇಕ ಬೆಳೆಗಳನ್ನು ವೀಕ್ಷಿಸುತ್ತಾ ಈ ಒಂದು ವಿಷಯವನ್ನು ಮಲೆನಾಡಿನ ಜನರಿಗೆ ತೋರಿಸುತ್ತಾ ಮಲೆನಾಡಿನ ಜನರಿಗೂ ಕೂಡ ಸಾವಯವ ಕೃಷಿಯ ಬಗ್ಗೆ ಅನೇಕ ಆವಿಷ್ಕಾರಗಳನ್ನು ಮನವರಿಕೆ ಮಾಡಿ ಕೊಟ್ಟು ಅವರು ಕೂಡ ಸಲಹೆಯನ್ನು ನೀಡುತ್ತಾ ಅನೇಕ ವಿಚಾರಗಳನ್ನು ತಿಳಿಸಿದರು ಹ್ಯಾಳ್ಳ್ಯಾ ಸಮೀಪ ಶ್ರೀ ವರಗಳ ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಸಭೆಯನ್ನು ನಡೆಸಿ ಅನೇಕ ವಿಚಾರಗಳನ್ನು ತಿಳಿಸುತ್ತಾ ಅನೇಕ ಸಾವಯವ ರೈತರೊಳಗೊಂಡ ತಂಡ ಅವರವರ ವಿಚಾರಗಳನ್ನು ಮಂಡಿಸುತ್ತಾ ರಾಜ್ಯದಲ್ಲಿ ಸಾವಯವ ಕೃಷಿಯನ್ನು ಉತ್ತೇಜನ್ನು ಗೊಳಿಸಲು ಸಲಹೆ ನೀಡಲಾಯಿತು ಈ ಸಂದರ್ಭದಲ್ಲಿ ಸಾವಯವ ಕೃಷಿಕರಾದ ಶಿವಲಿಂಗಪ್ಪ ಶ್ರೀಮತಿ ವೀ ಗಾಯಿತ್ರಿ ಮೇಡಂ ಸಹಜ ಸಾಗುವಳಿ ಪತ್ರಿಕೆಯ ಸಂಪಾದಕರು ಮಂಜುನಾಥ್ ಮತ್ತೆ ಇಕ್ರಾ ಸಂಸ್ಥೆಯ ಎಲ್ಲಾ ಅಧಿಕಾರಿ ವರ್ಗದವರು ಹಾಜರಿದ್ದು ಅಲ್ಲಿ ನೆರದಿದ್ದ ರೈತರಿಗೆ ಅನೇಕ ಸಲಹೆ ನೀಡಿದರು ಇದು ಒಂದು ಅತ್ಯಂತ ಉತ್ತಮ ಕಾರ್ಯಕ್ರಮವಾಗಿದ್ದು ರಾಜ್ಯದಲ್ಲಿ ಎಲ್ಲೆಡೆ ಇಂತಹ ಒಂದು ಕಾರ್ಯಕ್ರಮಗಳನ್ನು ನಡೆಸಲು ಮುಂದಾಗಬೇಕು ಎಂದು ಗಾಯಿತ್ರಿ ಮೇಡಮ್ ಅವರು ತಿಳಿಸಿದರು..

ವರದಿ ಎಂ ಬಸವರಾಜ್ ಕಕ್ಕುಪ್ಪಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend