ಕೂಡ್ಲಿಗಿ:ಡಾ॥ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ…!!!

Listen to this article

ಕೂಡ್ಲಿಗಿ:ಡಾ॥ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

-ವಿಜಯನಗರ ನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಡಾ॥ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ, 78ನೇ ಸ್ವಾತಂತ್ರ್ಯೊತ್ಸವ ಬಹು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಭೋದಕ ಹಾಗೂ ಭೋದಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು, ವಸತಿ ಶಾಲೆಯನ್ನು ಒಪ್ಪ ಓರಣವಾಗಿಸಿ ವಿವಿದ ರೀತಿಯಲ್ಲಿ ಒಳಾಂಗಣವನ್ನು ಅಲಂಕಾರಗೊಳಿಸಿದರು. ವಸತಿ ಶಾಲೆಯ ಅಂಗಳವನ್ನು ಸ್ವಚ್ಚಗೊಳಿಸಿ, ಬೆರಣಿಯಿಂದ ಸಾರಿ ರಂಗೋಲಿ ಹಾಕಿ ಭಾರತ ನಕಾಕ್ಷೆ ಹಾಕಿದರು. ಶುಚಿಬ್ರೂತರಾಗಿ ಶಾಲಾವಧಿಗೆ ಸಮವಸ್ತ್ರದೊಂದಿಗೆ ನಿಗಧಿತ ಸಮಯಕ್ಕೆ ಹಾಜರಾಗಿ, ಸ್ವಾತಂತ್ರ್ಯೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರನಾಯಕರ ಭಾವ ಚಿತ್ರಕ್ಕೆ ಗೌರವ ನಮನ ಸಮರ್ಪಿಸಲಾಯಿತು, ಪ್ರಾಂಶುಪಾಲರಾದ ಶೋಭಾರವರು ಧ್ವಜಾರೋಹಣ ನೆರವೇರಿಸಿದರು, ಧ್ವಜ ವಂದನೆಯೊಂದಿಗೆ ರಾಷ್ಟ್ರಗೀತೆ ಹಾಡಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಶೋಭಾರವರು ಮಾತನಾಡಿ, ಸ್ವಾತಂತ್ರ್ಯೋತ್ಸವ ಆಚರಣೆ ಮಹತ್ವ ಕುರಿತು ಮಾತನಾಡಿದರು. ಸ್ವಾತಂತ್ರ್ಯ ದೊರಕುವದಕ್ಕಿಂತ ಪೂರ್ವದಲ್ಲಿ ರಾಷ್ಟ್ರನಾಯಕರ ಹೋರಾಟಗಾರರ ಪಾತ್ರ, ಹಾಗೂ ಅಸಂಖ್ಯಾತ ಸೈನಿಕರ ಬಲಿದಾನಗಳ ಮಹತ್ವವನ್ನು. ವಿದ್ಯಾರ್ಥಿಗಳಿಗೆ ವಿವರಿಸಿ ಅವರಲ್ಲಿ ದೇಶ ಪ್ರೇಮವನ್ನು ಮೂಡಿಸುವ ಮೂಲಕ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ರೂಡಿಸಿಕೊಳ್ಳುವಂತೆ ಮಕ್ಕಳಿಗೆ ಕರೆ ನೀಡಿ ಸ್ವಾತಂತ್ರ್ಯತ್ಸವ ಸಂದೇಶ ನೀಡಿದರು. ವೇದಿಕೆಯಲ್ಲಿದ್ದ ಕೆಲವು ಮುಖ್ಯ ಅತಿಥಿಗಳು ಸ್ವಾತಂತ್ರ್ಯತ್ಸವ ಕುರಿತು ಮಾತನಾಡಿದರು, ಅಂತಿಮ ಹಂತದಲ್ಲಿ ವಿದ್ಯಾರ್ಥಿಗಳಿಂದ ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಸತಿ ಶಾಲೆಯ ನಿಲಯ ಪಾಲಕರು, ಉಪಧ್ಯಾಯರು ಭೋದಕ ವರ್ಗದವರು, ಹಾಗೂ ಭೋದ ಕೇತರ ಸಿಬ್ಬಂದಿಯವರು ಎಲ್ಲಾ ನೌಕರರು ಇದ್ದರು. ವಸತಿ ಶಾಲೆಯ ಎಲ್ಲಾ ವಿದ್ಯಾರ್ಥಿನಿಯರು, ಹಾಗೂ ಎಲ್ಲಾ ವಿದ್ಯಾರ್ಥಿಗಳು ಬಹು ಉತ್ಸಾಹದಿಂದ ಸ್ವಾತಂತ್ರ್ಯೋತ್ಸವದಲ್ಲಿ ಭಾಗಿಯಾಗಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend