ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರಿಗೆ ಉಪಯುಕ್ತವಾಗಬೇಕು ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ಕೂಡ್ಲಿಗಿ ಕ್ಷೇತ್ರದ ಅಂಗವಿಕಲರಿಗೆ ಹೆಚ್ಚಿನದಾಗಿ ತ್ರಿಚಕ್ರವಾಹನಗಳನ್ನು ಕೊಡಿಸಿ ಬಡವರ ಪರ ನಿಂತ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.

“ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರಿಗೆ ಉಪಯುಕ್ತ”

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಪಟ್ಟಣದ ಶ್ರೀ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ “ 2022-23 ನೇ ಸಾಲಿನ ಡಿ. ಎಂ. ಎಫ್. ಯೋಜನೆ ಅನುದಾನದ ಅಡಿಯ” ವಿಕಲಚೇತನರಿಗೆ 59 ಯಂತ್ರ ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದರು. ಇಡೀ ಕರ್ನಾಟಕದ ಪೈಕಿ ನಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿ ಅಂಗವಿಕಲರಿಗೆ ಹೆಚ್ಚಿನ ಪ್ರಮಾಣದಲ್ಲಿ ತ್ರಿಚಕ್ರವಾಹನಗಳನ್ನು ಸರ್ಕಾರದಿಂದ ವಿತರಿಸಿರುವಂತದ್ದು ಬಡವರ ಪರ ಕಾಳಜಿ ವ್ಯಕ್ತವಾಗಿರುವುದು ಇದೆ. ಗ್ಯಾರಂಟಿ ಯೋಜನೆಗಳ ಮೂಲಕ ಬಡವರನ್ನು ಮೇಲಕ್ಕೆ ಎತ್ತುವಂತದ್ದೂ ಇದೆ.‌ ಹಾಗೆಯೇ ಏಳನೇ ವೇತನ ಜಾರಿ ಮಾಡಿರುವುದರಿಂದ ಸರ್ಕಾರಿ ನೌಕರರನ್ನು ನೆಚ್ಚಿಕೊಂಡು ಬಾಳುತ್ತಿರುವ ಅಸಂಖ್ಯಾತ ಕುಟುಂಬಗಳ ಬದುಕಿಗೆ ಬೆಳಕಾಗಿರುವುದನ್ನು 78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಸಕರು ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ವಿವಿಧ ಹಳ್ಳಿಗಳಿಂದ ಬಂದ ಅಂಗವಿಕಲರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend