ಕೂಡ್ಲಿಗಿ:ಸಡಗರ ಸಂಭ್ರಮದ ನಾಗಪಂಚಮಿ ಹಬ್ಬ ಆಚರಣೆ…!!!

Listen to this article

ಕೂಡ್ಲಿಗಿ:ಸಡಗರ ಸಂಭ್ರಮದ ನಾಗಪಂಚಮಿ ಹಬ್ಬ ಆಚರಣೆ-ವಿಜಯನಗರ ಜಿಲ್ಲೆ ಕೂಡ್ಲಿಗಿ: ನಾಗರ ಪಂಚಮಿ ನಾಡಿನ ಬಹು ದೊಡ್ಡ ಸಾಪ್ರದಾಯಿಕ ಹಬ್ಬವಾಗಿದೆ, ಕೆಲವರು ನಾಗದೇವತೆ ಮೂರ್ತಿಗೆ ನಾಗ ಚೌತಿಯಂದು ಹಾಲೆರೆದು ಹಬ್ಬ ಆಚರಿಸಿದರೆ. ಉಳಿದಂತೆ ಪಂಚಮಿಯಂದು , ನಾಗದೇವತೆಯ ಮೂರ್ತಿಗೆ ಅಥವಾ ನಾಗರ ಹುತ್ತಕ್ಕೆ ಶ್ರದ್ಧಾ ಭಕ್ತಿಯಿಂದ ಹಾಲೆರೆದು ಆರಾಧಿಸಲಾಯಿತು. ನಾಗಾರಾಧನೆ ಶ್ರಾವಣ ಮಾಸದ ಪ್ರಾರಂಭದ ದಿನದಿಂದ, ಅಂದರೆ ನಾಗರ ಅಮವಾಸ್ಯೆ ದಿನದಿಂದಲೇ ಆರಂಭವಾಗುತ್ತದೆ. ಅಂದಿನಿಂದ ಮತ್ತೊಂದು ಅಮವಾಸ್ಯೆವರೆಗೆ ಹಿಂದೂಗಳ ಬಹುತೇಕ ಮನೆ ಮನೆಗಳಲ್ಲಿ, ನಾಗಾರಾಧನೆ ಸಂಪ್ರದಾಯಿಕವಾಗಿ ಧಾರ್ಮಿಕ ನೆಲೆಗಟ್ಟಿನಲ್ಲಿ ಜರುಗುತ್ತದೆ. ನಾಗರಾಧನೆ ವಿಶೇಷವಾಗಿ ಮೂರು ದಿನಗಳ ಕಾಲ ಹಬ್ಬ ಆಚರಿಸಲಾಗುತ್ತದೆ, ಮೊದಲಿನ ದಿನ ನಾಗದೇವತೆಗೆ ರೊಟ್ಟಿ ನೈವೇಧ್ಯ ಮಾಡಲಾಗುತ್ತದೆ. ನಂತರದ ದಿನ ಹಾಲೆರೆದು ಉಂಡೆ ನೈವೇಧ್ಯ ಮಾಡಲಾಗುತ್ತದೆ, ಹಬ್ಬದ ಮೂರನೇ ದಿನ ಹೋಳಿಗೆ ನೈವೇಧ್ಯದ ಹಬ್ಬ ರೂಡಿ ಸಂಪ್ರದಾಯದಂತೆ ಆಚರಿಸಲಾಗುತ್ತದೆ. ಉಳಿದಂತೆ ಹಲವರು ಎರೆಡನೇಶ್ರಾವಣ ಸೋಮವಾರ, ಮತ್ತೆ ಕೆಲವರು ಮೂರನೇ ಸೋಮವಾರ, ನಾಲ್ಕುನೇ ಸೋಮವಾರ, ಕಡೇ ಸೋಮವಾರ ಗಳಲ್ಲಿ ಅಂದರೆ ಶ್ರಾವಣ ಮಾಸದ ಕೊನೆ ಸೋಮವಾರದಂದು ಹಾಲೆರೆದು ಆರಾಧಿಸುತ್ತಾರೆ. ಮತ್ತೆ ಕೆಲವರು ಗಣೇಶ ಚತುರ್ಥಿಯಂದು ನಾಗ ದೇವತೆಯನ್ನ ಆರಾಧಿಸಿ, ಹಾಲೆರೆದು ಗಣೇಶ ಚತುರ್ಥಿ ಜೊತೆಗೆ ನಾಗರಾಧನೆ ಮಾಡುತ್ತಾರೆ. ಹಿಂದೂಗಳಲ್ಲಿ ಕೆಲವು ಸಮುದಾಯವು ಶ್ರಾವಣ ಮಾಸದಲ್ಲಿ, ದೇವತಾರಾಧನೆ ಅದರಲ್ಲಿ ನಾಗ ದೇವತಾರಾಧನೆ ನಿಶಿದ್ಧವಾಗಿಸುತ್ತಾರೆ. ಅದು ಅವರ ಮನೆತನದವರು ಅನಾಧಿಕಾಲದಿಂದ, ನಡೆದು ಕೊಂಡು ಬಂದ ಪೂರ್ವಕಾಲದ ಪದ್ಧತಿ ಎಂದು ಕಾರಣ ನೀಡುತ್ತಾರೆ. ಬಹುತೇಕ ಹಿಂದೂಗಳೆಲ್ಲರೂ ಬಹು ಭಕ್ತಿ ಭಾವದಿಂದ, ಶ್ರಾವಣ ಮಾಸವನ್ನ ದೈವಾರಾಧನೆಗೆ ವಿನಿಯೋಗ ಮಾಡುತ್ತಾರೆ. ವಿಶೇಷವಾಗಿ ನಾಗಾರಾಧನೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ, ವರ್ಷವಿಡೀ ಮಾಂಸ ಮದ್ಯಾಧಿಗಳನ್ನೆೇ ತಮ್ಮ ಆಹಾರವನ್ನಾಗಿಸಿ ಕೊಂಡವರೂ ಕೂಡ. ಶ್ರಾವಣ ಮಾಸದಲ್ಲಿ ಅವೆಲ್ಲವುಗಳನ್ನ ವರ್ಜಿಸುತ್ತಾರೆ. ಮಕ್ಕಳು ನಾಡಿನಾಧ್ಯಾಂತ ಎಲ್ಲಾ ವರ್ಗದವರು ಯುವಕರು ವೃದ್ಧರಾಧಿಯಾಗಿ, ಯುವತಿಯರು ಮಹಿಳೆಯರು ತುಂಬಾ ಸಂಭ್ರಮದಿಂದ ನಾಗರ ಪಂಚಮಿ ಆಚರಿಸುತ್ತಾರೆ. ಜೋಕಾಲಿ ಉಂಡಿ ಕೊಬ್ಬರಿ ಆಟ ಹಾಗೂ ನಿಂಬೆ ಹಣ್ಣು ಎಸೆತ ಕಾಯಿ ಗುದ್ದೋದು ಸೇರಿದಂತೆ, ಹತ್ತು ಹಲವು ಸಾಂಪ್ರದಾಯಿಕ ಗ್ರಾಮೀಣ ಆಟಗಲನ್ನು ಆಡಿ ಸಂಪಭ್ರಮಿಸಲಾಗುತ್ತದೆ….

ವರದಿ..ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend