ಕೂಡ್ಲಿಗಿ: ಆ11_ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ…!!!

Listen to this article

ಕೂಡ್ಲಿಗಿ: ಆ11_ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಸಂಡೂರು ರಸ್ತೆಯ ಜ್ಞಾನಭಾರತಿ ವಿದ್ಯಾಸಂಸ್ಥೆಯಲ್ಲಿ, ಆ11ರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜಯನಗರ ಜಿಲ್ಲೆ ಯೋಗಾಸನ ಸ್ಪೋರ್ಟ್ಸ್​ ಅಸೋಸಿಯೇಷನ್ ಮತ್ತು ಕೂಡ್ಲಿಗಿಯ ಸೃಷ್ಠಿ ಯೋಗ ಚಿಕಿತ್ಸಾ ಕೇಂದ್ರದ ಸಹಯೋಗದಲ್ಲಿ. ವಿಜಯನಗರ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿದೆ. ಸಂಬಂಧಿಸಿದಂತೆ ವಿಜಯನಗರ ಜಿಲ್ಲಾ ಸಂಯೋಜಕರಾದ, ಎನ್.ಎಲ್. ಸುಮಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಪರ್ಧೆಯ ವಿಭಾಗಗಳು: ಸಬ್​ ಜೂನಿಯರ್​ ವಿಭಾಗ _(10 ರಿಂದ 14 ವರ್ಷ), ಜೂನಿಯರ್​ ವಿಭಾಗ _(14 ರಿಂದ 18 ವರ್ಷ), ಸೀನಿಯರ್​ ವಿಭಾಗ _(18 ರಿಂದ ಮತ್ತು ಮೇಲ್ಪಟ್ಟವರು), ಮಾಸ್ಟರ್ಸ ವಿಭಾಗ _(36 ರಿಂದ 45 ವರ್ಷ), ವೇಟನ ವಿಭಾಗ _(45 ರಿಂದ 55ವರ್ಷ) ಸೇರಿದಂತೆ ಒಟ್ಟು 5 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ. ಸ್ಪರ್ಧೆಗಳು ಅಂದು ಬೆಳಗ್ಗೆ 8 ಗಂಟೆಯಿಂದ, ಯೋಗ ಸ್ಪರ್ಧೆಗಳು ಆರಂಭಗೊಳ್ಳಲಿವೆ. ಪ್ರತಿ ವಿಭಾಗಗಳಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳಿವೆ, ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರು. ಆ17ಮತ್ತು 18ರಂದು ಕಡೂರಿನಲ್ಲಿ ಜರುಗುವ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದೆಂದು ಅವರು ಮಾಹಿತಿ ನೀಡಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ದೂರವಾಣಿ ಮೂಲಕ ಸಂಪರ್ಕಿಸಿ, ವಿವರ ನೀಡಿ ನೋಂದಣಿ ಮಾಡಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಯೋಗ ಸ್ಪರ್ಧೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ಸಂಯೋಜಕರಾದ ಎನ್​.ಎಲ್​.ಸುಮಲತಾ ರವರನ್ನು (ಮೊ ನಂ_9538722430)

ವರದಿ.. ಎಮ್. ಬಸವರಾಜ್. ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend