ಆ5:ಬೆಂಗಳೂರು ಚಲೋ, ಮುಖ್ಯ ಮಂತ್ರಿ ಮನೆಗೆ ಮುತ್ತಿಗೆ ಯಶಸ್ವಿ ಗೊಳಿಸಿ-ಕಾರ್ಮಿಕರಿಗೆ ಮುಖಂಡರ ಕರೆ…!!!

Listen to this article

ಆ5:ಬೆಂಗಳೂರು ಚಲೋ, ಮುಖ್ಯ ಮಂತ್ರಿ ಮನೆಗೆ ಮುತ್ತಿಗೆ ಯಶಸ್ವಿ ಗೊಳಿಸಿ-ಕಾರ್ಮಿಕರಿಗೆ ಮುಖಂಡರ ಕರೆ-ವಿಜಯನಗರ ಜಿಲ್ಲೆ ಕೂಡ್ಲಿಗಿ: ಕಟ್ಟಡ ನಿರ್ಮ‍ಾಣ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿ ಯಿಂದ, ಕಾರ್ಮಿಕರ ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ.

ಆ5ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ಬಳಿ ಪ್ರತಿಭಟನೆ, ಹಾಗೂ ಮುಖ್ಯ ಮಂತ್ರಿಗಳ ಮನೆ ಮುತ್ತಿಗೆ ಹಾಕಲು ಸಮಿತಿ ನಿಶ್ಚಯಿಸಿದ್ದು. ಕಾರಣ ಸಮಸ್ತ ಕಾರ್ಮಿಕರು ಬೆಂಗಳೂರು ಚಲೋ ನಲ್ಲಿ ಭಾಗವಹಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವೀಗೊಳಿಸಬೇಕೆಂದು ಕಾರ್ಮಿಕ ಮುಖಂಡರು ಕಾರ್ಮಿಕರಿಗೆ ಕರೆ ನೀಡಿದ್ದಾರೆ. ಸಂಬಂಧಿಸಿದಂತೆ ಕಾರ್ಮಿಕ ಮುಖಂಡರಾದ ಹೊಸಪೇಟೆಯ ಯಲ್ಲಲಿಂಗ, ಹಾಗೂ ಕೂಡ್ಲಿಗಿಯ ಗುನ್ನಳ್ಳಿ ರಾಘವೇಂದ್ರ ಜಂಟಿ ಹೇಳಿಕೆ ನೀಡಿ ಪ್ರಕಟಣೆ ಕೋರಿದ್ದಾರೆ.

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ, ಕಾರ್ಮಿಕರ ವಿಷಯದಲ್ಲಿ ಸರ್ಕಾರ ನ್ಯಾಯಾಲಯದ ಆದೇಶಗಳನ್ನು ಪಾಲಿಸಬೇಕು, ಹಾಗೂ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ಜಾರಿಗೆ ತರಬೇಕು ಸೇರಿದಂತೆ. ಹತ್ತು ಹಲವು ಪ್ರಮುಖ ಹಕ್ಕೊತ್ತಾಯ ಗಳನ್ನು, ಶೀಘ್ರವೇ ಈಡೆೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಲ‍ಾಗುವುದು. ಮುಖ್ಯಮಂತ್ರಿಗಳ ಮನೆಗೆ ಮುತ್ತಿಗೆ ಹಾಕುವ ಉದ್ದೇಶವಿದ್ದು, ಈ ಮೂಲಕ ಸರ್ಕಾರದ ಕಣ್ಣು ತೆರೆಸುವ ಪ್ರಯತ್ನವನ್ನು, ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿ ಮಾಡಲಿದೆ ಎಂದರು. ಕಾರಣ ಆ5ರಂದು ಎಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ, ಯಶಸ್ವಿ ಗೊಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ, ಕಟ್ಟಡ ನಿರ್ಮಾಣ ಕಾರ್ಮಿಕರು. ಕಟ್ಟಡ ನಿರ್ಮಾಣ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆಯ, ತಾಲೂಕು ಘಟಕ ಹಾಗೂ ವಿವಿದ ಗ್ರಾಮ ಘಟಕಗಳ ಪದಾಧಿಕಾರಿಗಳು ಸದಸ್ಯರು ಇದ್ದರು….

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend