ಕೂಡುಕುಟುಂಬದಂತೆ ಪತ್ರಕರ್ತರು ಬಾಳಬೇಕು; ಪತ್ರಿಕಾ ಭವನದ ನಿರ್ಮಾಣಕ್ಕಾಗಿ ಪಣತೊಡುವೆ ಶಾಸಕ ಡಾ. ಶ್ರೀನಿವಾಸ್. ಎನ್. ಟಿ.‌..!!!

Listen to this article

ಕೂಡುಕುಟುಂಬದಂತೆ ಪತ್ರಕರ್ತರು ಬಾಳಬೇಕು; ಪತ್ರಿಕಾ ಭವನದ ನಿರ್ಮಾಣಕ್ಕಾಗಿ ಪಣತೊಡುವೆ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.‌

ಕೂಡ್ಲಿಗಿ “ ಪತ್ರಿಕಾ ದಿನಾಚರಣೆ” ಹಾಗೂ “ ಸಾಧಕರಿಗೆ ಸನ್ಮಾನ ” ವನ್ನು ದಿ. 29-07-24 ರಂದು ಪ್ರವಾಸಿ ಮಂದಿರದಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಉದ್ಘಾಟಿಸಿದ ಬಳಿಕ ಮಾತನಾಡಿದರು.‌ ನಾನು ಅಧಿವೇಶನ ಮುಗಿದ ತಕ್ಷಣ ಕಾರ್ಯಕ್ರಮಕ್ಕೆ ಬಂದಿರುವುದರಿಂದ ನನ್ನ ಜವಬ್ದಾರಿ ಸ್ಥಾನ ಹೆಚ್ಚಿದೆ. ಪತ್ರಕರ್ತರಲ್ಲಿ ಭಿನ್ನಾಭಿಪ್ರಾಯ ಇದ್ದರೂ, ಅವುಗಳನ್ನು ಮರೆತು ಕೂಡುಕುಟುಂಬದಂತೆ ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಜಾಗತಿಕ ಮಟ್ಟದಲ್ಲಿ ನಮ್ಮ ದೇಶವನ್ನು ಮೂರನೇ ದರ್ಜೆ ಸ್ಥಾನಮಾನದಲ್ಲಿ ನೋಡುವ ಸ್ಥಿತಿಯಲ್ಲಿ ಕೂಡ್ಲಿಗಿ ಕ್ಷೇತ್ರವನ್ನು ಅದೇ ರೀತಿ ನೋಡಲಾಗುತ್ತದೆ. ಅಭಿವೃದ್ಧಿ ವಿಷಯದಲ್ಲಿ ಅದು ಒಳ್ಳೆಯ ಬೆಳವಣಿಗೆ ಅಲ್ಲಾ.‌ ಶಿಕ್ಷಣ, ಆರೋಗ್ಯ ಮತ್ತು ಪತ್ರಿಕಾ ಸಂಸ್ಥೆಗಳು ಶ್ರೀಮಂತರ ಕೈಯಲ್ಲಿವೆ. ಹಾಗೆಯೇ ವ್ಯಾಪಾರದ ಮನಸ್ಥಿತಿಯಲ್ಲಿ ಕೂಡಿವೆ. ಅದು ಕೆಟ್ಟ ಸಂಪ್ರದಾಯ ಎಂದರು. ‌ಪತ್ರಕರ್ತರು ಸತ್ಯವನ್ನು ಬರೆಯಬೇಕು. ಪ್ರಾದೇಶಿಕ ಮತ್ತು ಸಾಮುದಾಯಿಕವಾಗಿ ನಾನು ಯಾವುದೇ ಭೇದ – ಭಾವ ಮಾಡದೇ ಸರ್ವ ರೀತಿಯ ಅಭಿವೃದ್ಧಿಗೆ ಶ್ರಮಿಸುವೆ. ಪತ್ರಕರ್ತರು ಅಭಿವೃದ್ಧಿ ವಿಚಾರದಲ್ಲಿ ನನಗೆ ಒಳ್ಳೆಯ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕು. ಆಗಸ್ಟ್ ತಿಂಗಳಲ್ಲಿ ಪತ್ರಕರ್ತರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವೆ. ಮುಂದಿನ ದಿನಗಳಲ್ಲಿ ತಮ್ಮ ಸಮ್ಮುಖದಲ್ಲಿ ಒಳ್ಳೆಯ ಜಾಗ ಗುರುತಿಸಿ ಪತ್ರಿಕಾ ಭವನ ನಿರ್ಮಿಸಿಕೊಡಲು ಪಣ ತೊಡುವೆ ಎಂದರು. ಈಗಾಗಲೇ ಗಣಿಭಾದಿತ ಪ್ರದೇಶದ ಪ್ರತಿಯೊಂದು ಅಂಕಿ – ಅಂಶಗಳನ್ನು ಸಂಗ್ರಹಿಸಿ ವರದಿ ಸಿದ್ದಪಡಿಸಿರುವೆ. ಆ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಅನುದಾನ ತರಲಿಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮಲ್ಲಿ ಅಧಿಕಾರಿಗಳು, ರಾಜಕಾರಣಿಗಳು, ಗುತ್ತಿಗೆದಾರರು ಹಾಗೂ ಪತ್ರಕರ್ತರ ನಡುವೆ ಗೊಂದಲಗಳಿರುವುದು ನಿಜ. ಎಲ್ಲರನ್ನೂ ಸಭೆ ಕರೆದು ಗೊಂದಲವನ್ನು ಬಗೆಹರಿಸುವೆ ಎಂದರು. ಈ ಸಂದರ್ಭದಲ್ಲಿ ಕೂಡ್ಲಿಗಿ ಭಾಗದ ಕು. ನಿಶಾ. ಐ. ಎಫ್. ಎಸ್, ಕು. ಭುವನೇಶ್ವರಿ ದಳವಾಯಿ. ನ್ಯಾಯದೀಶರು, ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಶಾಸಕರು ಸನ್ಮಾನಿಸಿದರು.‌ ಈ ವೇಳೆ ಪತ್ರಕರ್ತರು, ಅಧಿಕಾರಿಗಳು, ಗಣ್ಯಮಾನ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು…

ವರದಿ. ಎಂ, ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend