ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಚಿಕ್ಕ ಜೋಗಿಹಳ್ಳಿ ಗ್ರಾಮ…!!!

Listen to this article

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಚಿಕ್ಕ ಜೋಗಿಹಳ್ಳಿ ಗ್ರಾಮ

ವಿಜಯನಗರ ( ಆಗಿನ ಬಳ್ಳಾರಿ ಜಿಲ್ಲೆ ) ಜಿಲ್ಲೆಯಲ್ಲಿ ಒಂದು ಗ್ರಾಮವಿದೆ. ಆದರೆ ಈ ಗ್ರಾಮ ಇಡೀ ರಾಜ್ಯಕ್ಕೆ ದೊಡ್ಡ ಹಳ್ಳಿ. ಈ ಗ್ರಾಮದಲ್ಲಿ 40 ರ ದಶಕದಿಂದಲೇ ನಗರಗಳಲ್ಲಿ ಇದ್ದಂತಹ ಸೌಲಭ್ಯಗಳಿದ್ದವು ! ಎಂದರೆ ಅಚ್ಚರಿಯ ಸಂಗತಿ.

ಹೌದು ಇಂತಹ ಮಾದರಿ ಹಳ್ಳಿಗೆ.. ಕಾರಣವಾಗಿದ್ದು ಮಾತ್ರ ಈಡಿಗ ಸಮುದಾಯದ ಒಬ್ಬ  ಸೇಂದಿ ಅಂಗಡಿ ವ್ಯಾಪಾರಿ ಎನ್ನುವುದು ಇನ್ನೂ ಅಚ್ಚರಿ ಮೂಡಿಸುವ ವಿಷಯ.

ತಮ್ಮ ಊರಿನ ಉದ್ಧಾರಕ್ಕಾಗಿ ಇಡೀ ಜೀವಮಾನವನ್ನು ಮೀಸಲಿಟ್ಟ , ಇಡೀ ರಾಜ್ಯಕ್ಕೆ ಮಾದರಿ ಹಳ್ಳಿಯನ್ನಾಗಿ ಪರಿವರ್ತಿಸಿದ ಕೀರ್ತಿ ಈ ವ್ಯಕ್ತಿಗೆ ಸಲ್ಲುತ್ತದೆ.
ಆದರೆ ಈ ಜನನಾಯಕ ಇಂದು ನಮ್ಮ ಮಧ್ಯೆ ಇಲ್ಲದಿದ್ದರೂ ಅವರ ಸಾಧನೆಗಳಿಂದ ವಿಜಯನಗರ ಜಿಲ್ಲೆಯ ಜನತೆಗೆ ಮನೆ ಮಾತಾಗಿದ್ದಾರೆ.

ಇಂತಹ ಅಪರೂಪದ ವ್ಯಕ್ತಿಯ ತಾತ ಮತ್ತು ಅಜ್ಜಿ ಮೂಲತಃ ಆಂಧ್ರಪ್ರದೇಶದ ಚಿತ್ತೂರಿನವರು… ವಲಸೆ ಬಂದ ಅವರ ಕುಟುಂಬ ಆಗಿನ ಬಳ್ಳಾರಿ ಜಿಲ್ಲೆಯ* ( ಈಗ ವಿಜಯನಗರ ಜಿಲ್ಲೆ ) ಕೂಡ್ಲಿಗಿ ತಾಲೂಕಿನಿಂದ 25 ಕಿ.ಮೀ ದೂರದ ಈ ಹಳ್ಳಿಯಲ್ಲಿ ನೆಲೆಸಿದ್ದರು.

ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ.. ಇಂಟರ್ ಮೀಡಿಯಟ್ ಶಿಕ್ಷಣ ಪಡೆದು , ಡಾ. ಅನಿಬೆಸೆಂಟ್ ರ ವಿಚಾರಧಾರೆಯಿಂದ ಸ್ಪೂರ್ತಿ ಪಡೆದು, ಉನ್ನತ ವ್ಯಾಸಾಂಗ ಮಾಡಿದರೂ ಕೂಡಾ ಕುಲಕಸಬು ಬಿಡದೆ  ವ್ಯಾಪಾರದೊಂದಿಗೆ ಸಮಾಜಸೇವೆ ಮಾಡಿದರು.

40 ರ ದಶಕದಲ್ಲಿ ಇವರ ಸಮಾಜಿಕ ಕಳಕಳಿಗೆ ಮೆಚ್ಚಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ…. ಸರ್, A ರಾಮಸ್ವಾಮಿ, ಮೊದಲಿಯಾರ್* ಇವರ ಸ್ನೇಹಿತರಾಗಿದ್ದರು.

ಈ ಹಳ್ಳಿಯ ಉದ್ಧಾರಕ್ಕಾಗಿ ನೂರಾರು ಎಕರೆ ಸ್ವಂತ ಜಮೀನು ದಾನ ಮಾಡಿ ಆ ಜಮೀನಿನಲ್ಲಿಯೇ… ಆರೋಗ್ಯ ಕೇಂದ್ರ , ಬಟ್ಟೆ ನೇಯ್ಗೆ ಕೇಂದ್ರ , ಶಾಲೆಗಳು , ಕಾಲೇಜುಗಳು , ಪ್ರವಾಸಿ ಮಂದಿರ , ಅಂಚೆ ಕಚೇರಿ , ರೈತರ ಸೇವಾ ಸಹಕಾರ ಬ್ಯಾಂಕ್ , S.B.M. ಶಾಖೆ ,ಹೀಗೆ ಹಲವು ಕೇಂದ್ರಗಳನ್ನು ಸ್ಥಾಪಿಸಿದ ಕೀರ್ತಿ ಈ ವ್ಯಕ್ತಿಗೆ ಸಲ್ಲುತ್ತದೆ .

ಅನಂತರದ ದಿನಗಳಲ್ಲಿ ಇವರ ಮೊಮ್ಮಗ ಕೊಟ್ಟೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅವಧಿಯಲ್ಲಿ ಜಿಲ್ಲೆಯ ಏಕೈಕ ಕೇಂದ್ರೀಯ ನವೋದಯ ವಿದ್ಯಾಲಯ ಸ್ಥಾಪನೆಗೆ ಸಮೃದ್ಧವಾಗಿ ದ್ರಾಕ್ಷಿ ಬೆಳೆಯುತ್ತಿದ್ದ ಫಲವತ್ತಾದ 38 ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ.

ಗಣ್ಯಾತಿ ಗಣ್ಯರ ಭೇಟಿ…. ಈ ಹಳ್ಳಿಗೆ ಅಂದು ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿ, ಮೈಸೂರು ದಿವಾನರಾಗಿದ್ದ ಅರ್ಕಟ್ ರಾಮಸ್ವಾಮಿ ಮೊದಲಿಯಾರ್, ರಾಜ್ಯಪಾಲರಾದ ಉಮಾಶಂಕರ್ ದೀಕ್ಷಿತ್, ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಡಾ. S. ಚನ್ನರೆಡ್ಡಿ, ಕರ್ನಾಟಕ ರಾಜ್ಯದ ಮಂತ್ರಿಗಳಾದ S ಬಂಗಾರಪ್ಪನವರು, S ನಿಜಲಿಂಗಪ್ಪನವರು, K.C. ರೆಡ್ಡಿ ಯವರು, B.D. ಜತ್ತಿಯವರು, ದೇವರಾಜ ಅರಸರವರು, R ಗುಂಡೂರಾವ್, M ವೀರಪ್ಪ ಮೊಯ್ಲಿ….ಸೇರಿದಂತೆ ಇತರರು ಇವರ ಸಾಧನೆ ನೋಡಲು ಆಗಮಿಸಿದ್ದರು.

ಆದರೆ ಇಂದು ಇವರು ಪ್ರಾರಂಭಿಸಿದ ಸರ್ಕಾರಿ ಕಚೇರಿಗಳು.. ಕಟ್ಟಡಗಳು.. ಒಂದೊಂದಾಗಿ ಮರೆಯಾಗುತ್ತಿರುವುದು ವಿಪರ್ಯಾಸ.

ಅಂದ ಹಾಗೆ… ಈ ಹಳ್ಳಿಯ ಹೆಸರು ಏನು ಅಂತೀರಾ….?
ಈ ಹಳ್ಳಿಯ ಹೆಸರು “ಚಿಕ್ಕಜೋಗಿಹಳ್ಳಿ.”

ಇಷ್ಟೆಲ್ಲಾ ಸಾಧನೆ ಮಾಡಿದ ವ್ಯಕ್ತಿ ಯಾರು ಗೊತ್ತಾ….? ಈಡಿಗ ಸಮುದಾಯದ  ವ್ಯಾಪಾರ ಮಾಡುತ್ತಿದ್ದ ಜನನಾಯಕ ಮತ್ತು ನೇತಾರ
K. ವೆಂಕಟಸ್ವಾಮಿಯವರು.

ಜಿಲ್ಲೆಯ ಕೇಂದ್ರೀಯ ನವೋದಯ ವಿದ್ಯಾಲಯ ಸ್ಥಾಪನೆಗೆ ದ್ರಾಕ್ಷಿ ಬೆಳೆಯುತ್ತಿದ್ದ 38 ಎಕರೆ ಜಮೀನನ್ನು ದಾನ ಮಾಡಿದ್ದು ಯಾರು ಗೊತ್ತಾ….?
ಈ ವಿಷಯದ ಕೇಂದ್ರ ಬಿಂದು
K. ವೆಂಕಟಸ್ವಾಮಿಯವರ ಮೊಮ್ಮಗ… K.V. ರವೀಂದ್ರನಾಥ ಬಾಬು.ಇದು ಮಾದರಿ ಹಳ್ಳಿ.ಚಿಕ್ಕಜೋಗಿ ಹಳ್ಳಿ.

ವರದಿಗಾರರು,ವೈ ಮಹಾದೇವ  ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend