ರಸ್ತೆ ಮೇಲೆ ಚರಂಡಿ ನೀರು ಬೇಸತ್ತ ಭೀಮಸಮುದ್ರ ದಲಿತ ಓಣಿಯ ಗ್ರಾಮಸ್ಥರು…!!!

Listen to this article

ರಸ್ತೆ ಮೇಲೆ ಚರಂಡಿ ನೀರು ಬೇಸತ್ತ ಭೀಮಸಮುದ್ರ ದಲಿತ ಓಣಿಯ ಗ್ರಾಮಸ್ಥರು

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಭೀಮಸಮುದ್ರ ಗ್ರಾಮದ ದಲಿತ ಕಾಲೋನಿಯಲ್ಲಿ ಸೌಲಭ್ಯ ವಂಚಿತವಾಗಿರುವುದು ಒಂದು ಕಡೆಯಾದರೆ, ಕನಿಷ್ಠ ರಸ್ತೆ ಮೇಲೆ ಹರಿಯುವ ನೀರನ್ನು ಬೇರೆ ಕಡೆ ಹೋಗಲು ವ್ಯವಸ್ಥೆ ಮಾಡದಷ್ಟು ಆಡಳಿತ ಜಿಡ್ಡುಗಟ್ಟಿದೆ
ಭೀಮಸಮುದ್ರ ದಲಿತ ಕಾಲೋನಿಯಲ್ಲಿ ರಸ್ತೆ ಮೇಲೆ ಹರಿಯುವ ಚರಂಡಿ ನೀರು, ಹಲವು ರೋಗ ರುಜಿಗಳಿಗೆ ರಹ ದಾರಿಯಾಗಿದೆ ಕೊಳಚೆ ನೀರಿನ ಮೇಲೆ ಮಕ್ಕಳು ಮಹಿಳೆಯರು ವಯೋವೃದ್ಧರು ನಿತ್ಯ ಓಡಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ,
ರಸ್ತೆಯಲ್ಲಿ ಓಡಾಡುವದೇ ಕಷ್ಟವಾಗಿದೆ ಮಕ್ಕಳು ವೃದ್ಧರನ್ನು ಎತ್ತಿಕೊಂಡು ರಸ್ತೆ ದಾಟಿಸದಿದ್ದರೆ ಕೊಳಚೆಯಲ್ಲಿ ಬೀಳುವುದು ಸಾಮಾನ್ಯವಾಗಿದೆ. ಈ ರಸ್ತೆಯ ಹಾಗೂ ಚರಂಡಿಯನ್ನು ಸರಿಯಾಗಿ ನಿರ್ವಹಿಸಲು ಒಮ್ಮೆಯೂ ಆ ಭಾಗದ ಇಂಜಿನಿಯರ್ ಗಳು ಗ್ರಾಮಕ್ಕೆ ಬಂದೇ ಇಲ್ಲ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ರಸ್ತೆ ನಮಗೆ ಸಂಬಂಧಿಸಿಲ್ಲ ಎನ್ನುತ್ತಾರೆ. ಈ ರಸ್ತೆಯ ದುರಸ್ತಿ ಯಾರು ಮಾಡಿಸಬೇಕು? ಎನ್ನುವುದೇ ಯಕ್ಷಪ್ರಶ್ನೆಯಾಗಿದೆ,
ಮಳೆ ಬಂತೆಂದರೆ ಮುಖ್ಯ ರಸ್ತೆಯ ಮೇಲೆ ಸದಾ ಹರಿಯುತ್ತದೆ ಬಂದ ನೀರು ಸುಲಭವಾಗಿ ಹೋಗುವಂತೆ ಯಾವುದೇ ವ್ಯವಸ್ಥೆ ಮಾಡಿಲ್ಲ ಸಾರ್ವಜನಿಕರು ಬಳಸಿದ ನೀರು ಸದಾ ಹರಿಯುತ್ತಿದೆ ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿದೆ ಯಲ್ಲದೆ ಈ ರಸ್ತೆ ದಾಟಲು ಭೀಮಸಮುದ್ರ ಗ್ರಾಮದ ದಲಿತ ಓಣಿಯ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ವಿದ್ಯಾರ್ಥಿಗಳ ಗೋಳಂತೂ ಹೇಳುತ್ತಿರದು ಚರಂಡಿ ನೀರಿನಲ್ಲಿಯೇ ನಡೆದು ಪಾಲಕರು ತಮ್ಮ ಮಕ್ಕಳನ್ನು ಎತ್ತಿಕೊಂಡು ಹೋಗಿ ರಸ್ತೆ ದಾಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ, ಈ ಬಗ್ಗೆ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆ ನೀರನ್ನು ನಿಲ್ಲಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಬಗೆಹರಿಸಿ ಕೊಡಬೇಕೆಂದು ಭೀಮಸಮುದ್ರ ದಲಿತ ನಿವಾಸಿಗಳಾದ ಮೇಗಳಮನೆ ಹಂಪಣ್ಣ, ಗಿರೀಶ್, ಜಾತಪ್ಪ, ದುರುಗಪ್ಪ, ಸಿದ್ದಪ್ಪ, ಗಂಗಾಧರಪ್ಪ, ಪ್ರಸನ್ನ ಕುಮಾರ್, ಸುನಿಲ್ ಕುಮಾರ್, ಹನುಮಂತಪ್ಪ, ಜಗನ್ನಾಥ, ಭೀಮಪ್ಪ, ಕರಿಯಪ್ಪ ಹಾಗೂ ದಲಿತ ಕಾಲೋನಿಯ ಮಹಿಳೆಯರು, ಯುವಕರು ಆಗ್ರಹಿಸಿದರು..


ವರದಿ:- ಎಂ, ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend