ಹುಲಿಕುಂಟೆ ಗ್ರಾಮದಲ್ಲಿ ಸಣ್ಣಗೆ ಹನಿಯುತ್ತಿದ್ದ ಮಳೆಯ ನಡುವೆಯೇ ಬಿತ್ತನೆ ಕಾರ್ಯ ನಡೆಸಿದ ರೈತರು…!!!

Listen to this article

ಹುಲಿಕುಂಟೆ ಗ್ರಾಮದಲ್ಲಿ ಸಣ್ಣಗೆ ಹನಿಯುತ್ತಿದ್ದ ಮಳೆಯ ನಡುವೆಯೇ ಬಿತ್ತನೆ ಕಾರ್ಯ ನಡೆಸಿದ ರೈತರು

ಗುಡೇಕೋಟೆ:- ಹೋಬಳಿ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಾದ ಹುಲಿಕುಂಟೆ ,ನರಸಿಂಹನಗಿರಿ, ಅರ್ಜುನ ಚಿನ್ನನಹಳ್ಳಿ ,ಕರಡಿಹಳ್ಳಿ, ಭೀಮಸಮುದ್ರ, ಇನ್ನು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಕೃಷಿ ಕಾರ್ಯಗಳು ಚುರುಕು ಪಡೆದು ರೈತರ ಮೊಗದಲ್ಲಿ ಸಂತಸ ಮೂಡಿದೆ
ಈಗಾಗಲೇ ಭೂಮಿ ಹದಗೊಳಿಸಿ ಇನ್ನು ಬಿತ್ತನೆ ಮಾಡದೆ ಕಾದಿದ್ದ ರೈತರು ತಮ್ಮ ಕೃಷಿ ಭೂಮಿಯಲ್ಲಿ ಮಿಶ್ರ ಬೆಳೆಗಳಾದ ಶೇಂಗಾ ಸಜ್ಜೆ ತೊಗರಿ, ಜೋಳ ಇತರ ಬೀಜ ಸಣ್ಣನೆ ಹನಿಯುತ್ತಿದ್ದ ಮಳೆ ನಡುವೆ ಬಿತ್ತನೆಯಲ್ಲಿ ನಿರತರಾಗಿದ್ದಾರೆ
ವಿಜಯನಗರ ಜಿಲ್ಲೆಯ ಆರು ತಾಲೂಕುಗಳಲ್ಲಿ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿದೆ ಕಳೆದ ವರ್ಷ ತೀವ್ರ ಬರಗಾಲದಿಂದ ಬೆಳೆ ನಾಶವಾಗಿ ತೀವ್ರ ನಷ್ಟ ಅನುಭವಿಸಿರುವ ರೈತರು ಪುಸ್ತಕ ಮುಂಗಾರಿನಲ್ಲಿ ಉತ್ತಮ ಮಳೆಯಿಂದಾಗಿ ರೈತಾಪಿ ಸಮುದಾಯದಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದೆ, ಹಿಂದಿನ ವರ್ಷದ ಬರಗಾಲದ ಕಹಿಯನ್ನು ಮರೆತು ರೈತರು ಸಣ್ಣಗೆ ಹನಿಯುತಿದ್ದ ಮಳೆ ನಡುವೆ ಬಿತ್ತನೆ ಕಾರ್ಯದಲ್ಲಿ ಚುರುಕು ತೊಡಗಿಸಿ ಕೊಂಡರು…


ವರದಿ:- ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend