ಬರದ ನಾಡಿಗೆ ಬದುಕಾಗಲಿದೆ ತುಂಗಭದ್ರ ನೀರು ಹಂಚಿಕೆಯ 74 ಕೆರೆ ನೀರು ತುಂಬಿಸುವ ಯೋಜನೆ ಶಾಸಕ,ಡಾ ಶ್ರೀನಿವಾಸ್. ಎನ್ ಟಿ…!!!

Listen to this article

ಬರದ ನಾಡಿಗೆ ಬದುಕಾಗಲಿದೆ ತುಂಗಭದ್ರ ನೀರು ಹಂಚಿಕೆಯ 74 ಕೆರೆ ನೀರು ತುಂಬಿಸುವ ಯೋಜನೆ : ಡಾ ಶ್ರೀನಿವಾಸ್. ಎನ್ ಟಿ
74 ಕೆರೆ ನೀರು ತುಂಬಿಸುವ ಸಿಂಗಟಾಲೂರು ಏತ ನೀರಾವರಿ ಯೋಜನೆ (ರಾಜವಾಳ ಗ್ರಾಮದ ಬಳಿ) 95% ಕಾಮಗಾರಿ ಪೂರ್ಣಗೊಂಡಿದೆ. ತುಂಗಭದ್ರ ಜಲಾಶಯದ ಹಿನ್ನೀರು ಬಳಸಿಕೊಂಡು ಅಂತರ್ಜಲಬಾಧಿತ ಪ್ರದೇಶದ ಸಮಸ್ಯೆ ನೀಗಿಸುವ ಕೂಡ್ಲಿಗಿ ತಾಲೂಕಿನ 74 ಕೆರೆ ತುಂಬಿಸುವ ಮಹತ್ವಕಾಂಕ್ಷಿ ಯೋಜನೆಯನ್ನು ತ್ವರಿತವಾಗಿ ಮುಗಿಸುವಂತೆ ದಿನಾಂಕ 24.07.2024 ರಂದು ವಿಧಾನಸೌಧ ಬೆಂಗಳೂರಿನಲ್ಲಿ ಕರ್ನಾಟಕ ನೀರಾವರಿ ನಿಗಮ ಮಾನ್ಯ ಡಿಕೆ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಕುರಿತು ಸಮಾಲೋಚನೆ ಮತ್ತು ಪರಿಶೀಲನಾ ಸಭೆಯಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಯಾಗಿ ಮಾನ್ಯ ಜನಪ್ರಿಯ ಶಾಸಕರಾದ ಡಾ.ಶ್ರೀನಿವಾಸ್ ಎನ್ ಟಿ ರವರು ಕಾಮಗಾರಿ ಪ್ರಗತಿ ,ಕಾರ್ಯಾಚರಣೆ ವಿಳಂಬ, ಯೋಜನೆಯ ನಿರ್ವಹಣೆ,ಅನುಷ್ಠಾನದ ಬಗ್ಗೆ ಮಾನ್ಯ ಡಿಕೆ ಶಿವಕುಮಾರ್ ರವರಿಗೆ ಅತಿ ಉತ್ಸವದಿಂದ ಮನವರಿಕೆ ಮಾಡಿಕೊಟ್ಟು ಈ ವರ್ಷದ ಮುಂಗಾರಿನಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಕ್ರಮದ ದಿನಾಂಕ ನಿಗದಿ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಬೇಕು & ಬರ, ಅಂತರ್ಜಲಬಾಧಿತ ಕೂಡ್ಲಿಗಿ ತಾಲೂಕಿನ ಪ್ರದೇಶಕ್ಕೆ ತುಂಗೆಭದ್ರೆ ಪಾದರ್ಪಣೆ ಮಾಡಲು ಮುಖ್ಯ ಕೊಳವೆ ಮಾರ್ಗದಿಂದ ತಾಂತ್ರಿಕವಾಗಿ ನೀರೆತ್ತುವ ವಿತರಣಾ ಜಾಲದ ಸ್ಥಿರತೆ, ಸರಾಗವಾಗಿ ನೀರು ಹರಿಸುವ ಹರಿಯುವಿಕೆಯಿಂದ ದಶಕಗಳಿಂದ ಪರಿತಪಿಸುವ ಲಕ್ಷಾಂತರ ದನ ಕರುಗಳಿಗೆ ಕುಡಿಯುವ ನೀರು, ಅಂತರ್ಜಲಬಾಧಿತ ತಣಿಸುವಂತೆ ಸಭೆಯಲ್ಲಿ ಭಾಗವಹಿಸಿ ಮಾನ್ಯ ಡಿಕೆ ಶಿವಕುಮಾರ್ ರವರಿಗೆ ಮಾಹಿತಿ ನೀಡಿದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend