ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಸಂಘಟನೆಯಿಂದ ಪತ್ರಿಕಾ ದಿನಾಚರಣೆ ಹಾಗೂ ಕಛೇರಿ ಉದ್ಘಾಟನೆ ಮಾಡಲಾಯಿತು…!!!

Listen to this article

ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಧ್ವನಿ ಸಂಘಟನೆಯಿಂದ ಪತ್ರಿಕಾ ದಿನಾಚರಣೆ ಹಾಗೂ ಕಛೇರಿ ಉದ್ಘಾಟನೆ ಮಾಡಲಾಯಿತು..

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಜ್ಞಾನ ಮಂಟಪ ಕಾಲೇಜಿನಲ್ಲಿ ವಿಶ್ವ ಪತ್ರಿಕಾ ದಿನಾಚರಣೆ ಆಚರಿಸಲಾಯಿತು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು ದಿವ್ಯ ಸಾನಿಧ್ಯ ಷ ಬ್ರ ಪ್ರಶಾಂತ ಸಾಗರ ಶಿವಾಚಾರ್ಯ ಮಹಾಸ್ವಾಮಿಗಳು ಕೂಡ್ಲಿಗಿ ಹಿರೇಮಠ ಶ್ರೀ ಇಮ್ಮಡಿ ಶರಣರು ಧರ್ಮಾಧಿಕಾರಿಗಳು ದಾಸೋಹ ಮಠ ಕಾನವಡಗು ಹಾಗೂ ಕಾರ್ಯಕ್ರಮದ ಕೇಂದ್ರಬಿಂದು ಆಗಿರುವ ಕರ್ನಾಟಕ ಕಾರ್ಯನಿರತರ ಪತ್ರಕರ್ತರ ದ್ವನಿ ಸಂಘದ ರಾಜ್ಯ ಅಧ್ಯಕ್ಷರಾದ ಬಂಗ್ಲೆಮಲ್ಲಿಕಾರ್ಜುನ ಹಾಗೂ ಬಾಣದ ಶಿವಮೂರ್ತಿ ತಾಲೂಕು ಘಟಕದ ಅಧ್ಯಕ್ಷರು ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು, ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿ ಮಾತನಾಡಿದ ಬಂಗ್ಲೆ ಮಲ್ಲಿಕಾರ್ಜುನಇವರು ಪತ್ರಕರ್ತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಆಗಸ್ಟ್ ಸೆಪ್ಟೆಂಬರ್ ಒಳಗೆ ಪತ್ರಕರ್ತರಿಗೆ ಬೇಡಿಕೆ ಇರುವ ಬಸ್ ಪಾಸ್ ವ್ಯವಸ್ಥೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸದೆ ಇದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಗ್ಯಾರಂಟಿಗಳಿಗೆ ಮೊರೆ ಹೋದ ಸರಕಾರ ಯಾವುದು ಅಭಿವೃದ್ಧಿ ಇಲ್ಲದೆ ಮೂಲೆಗುಂಪು ಸೇರಿದ ಸರಕಾರ ಎಂದು ಸರಕಾರದ ವಿರುದ್ಧ ಗುಡಿಗಿದರು ಪತ್ರಕರ್ತರಿಗೆ ನೆರವಾಗಿ ಸ್ವಾಮೀಜಿಗಳಿಂದ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸವಾಗಬೇಕು ಎಂದರು ಹಾಗೂ ನಮ್ಮ ಪತ್ರಕರ್ತರು ಯಾವುದೇ ಆಮಿಷಕ್ಕೆ ಒಳಗಾಗದೆ ಸುದ್ದಿಯನ್ನ ನೀಟಾಗಿ ಬರೆಯುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು, ನೇರವಾಗಿ ಉತ್ತರಿಸಬೇಕು ಯಾರಿಗೂ ಹಿಂಜರಿಯದೆ ದಿಟ್ಟತನದಿಂದ ಕುಗ್ಗದೇ ಅಧಿಕಾರಿಯಾಗಿರಲಿ ರಾಜಕಾರಣಿಯಾಗಿರಲಿ ನೇರವಾದ ಉತ್ತರವನ್ನು ನೀಡಬೇಕು ಸುದ್ದಿ ಬರೆಯುವ ಹವ್ಯಾಸವನ್ನು ಇಟ್ಟುಕೊಳ್ಳಬೇಕು ಹೊರತು ಬೇರೆ ಬೇರೆ ಕೆಲಸಕ್ಕೆ ಕೈ ಹಾಕದಿರಿ ಎಂದು ಪತ್ರಕರ್ತರಿಗೆ ಸೂಚಿಸಿದರು ಹಾಗೂ ವಿಶೇಷ ಉಪನ್ಯಾಸಕರಾದ ರೂಪ ಸಿಂತ್ರಿ ಚಕೋಡಿ ಇವರು ಮಾತನಾಡಿ ವಿಜಯನಗರದ ಸಾಮ್ರಾಜ್ಯವನ್ನು ಆಳಿದ ರಾಜವೀರರ ಸಾಮ್ರಾಜ್ಯದಲ್ಲಿ ನಾವಿದ್ದೇವೆ ಇಂಥ ಒಂದು ವಿಜಯನಗರದ ಇಡೀ ವಿಶ್ವಕ್ಕೆ ಪ್ರಸಿದ್ಧಿಯಾಗಿರುವ ಹಂಪಿ ಬೆಳ್ಳಿ ರತ್ನ ವಜ್ರ ವೈಡೂರ್ಯ ಮೆರೆದಂತ ನಾಡಲ್ಲಿ ಹುಟ್ಟಿದ್ದು ಸಾರ್ಥಕವಾಯಿತು ಎಂದರು.

ಪತ್ರಕರ್ತರಿಗೆ ಆಗುವ ಅನ್ಯಾಯ ತುಂಬಾ ಬೇಸರ ಸಂಗತಿ ಪತ್ರಕರ್ತರಿಗೆ ಯಾವುದೇ ವೇತನವಿಲ್ಲ ಸಮಾಜದ ಹಂಗು ತೊರೆದು ಕೆಲಸ ಮಾಡುವ ಪತ್ರಕರ್ತರಿಗೆ ಇಂದಿಗೂ ಸರಕಾರ ಗಮನಿಸಿಲ್ಲ ಪತ್ರಕರ್ತರ ಜೀವನ ಅದೋಗತಿಯೆಂದು ಬಂದು ತಲುಪಿದೆ ಈ ಸಂದರ್ಭದಲ್ಲಿ ತಿಳಿಸಲು ಬಯಸುತ್ತೇನೆ ಹಿಂದಿನ ಕಾಲದಲ್ಲಿ ಪತ್ರಿಕೆಯನ್ನು ಓದುವ ಹವ್ಯಾಸವಿತ್ತು ಪತ್ರಕರ್ತರಿಗೆ ಗೌರವ ಇತ್ತು ಆದರೆ ಜೀವ ಕಳೆದುಕೊಂಡು ಎಷ್ಟೋ ಪತ್ರಕರ್ತರು ಹೋರಾಟ ಮಾಡಿದ್ದಾರೆ ಸರಕಾರದ ವಿರುದ್ಧ ಸಾಕಷ್ಟು ಹೋರಾಟ ಮಾಡಿದರು ನ್ಯಾಯ ಸಿಗದ ಪತ್ರಕರ್ತರು ಸರಕಾರದ ವಿರುದ್ಧ ಎಷ್ಟು ಹೋರಾಟ ಮಾಡಿದರು ಸಿಗದ ನ್ಯಾಯ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ನೀಡುವ ಪತ್ರಕರ್ತರಿಗೆ ಇಲ್ಲವೇ ನ್ಯಾಯ ಪ್ರತಿದಿನ ಪತ್ರಿಕೆ ಬಂದ ಕೂಡಲೇ ಯಾವ ಸುದ್ದಿ ವಿಶೇಷವಿದೆ ಎಂದು ಪತ್ರಿಕೆಯ ಪುಟವನ್ನು ನೋಡುವ ಹವ್ಯಾಸ ಅಂದಿನ ಕಾಲದ್ದು ಪತ್ರಿಕೆಯಲ್ಲಿ ವಿಶೇಷವಾಗಿ ಬೆಳೆಸಿದ್ದು ಆಗಿನ ಕಾಲದಲ್ಲಿ ಹಾಗಾಗಿ ಸಮಾಜ ಪತ್ರಕರ್ತರಿಗೆ ಒಂದು ದಾರಿ ದೀಪವಾಗುತ್ತಿತ್ತು ಇವತ್ತಿನ ಕಾಲಘಟ್ಟದಲ್ಲಿ ಪತ್ರಕರ್ತರು ಎಂದರೆ ಏನೋ ಒಂದು ಸಂಕೋಚ ಅನ್ನುವ ಪರಿಸ್ಥಿತಿ ಬಂದಿದೆ ಯಾರು ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಓದುವ ಅಭ್ಯಾಸ ಇಲ್ಲದಂತಾಗಿದೆ ಇವತ್ತಿನ ಪರಿಸ್ಥಿತಿ ಯಾಕೆಂದರೆ ಕೈಯಲ್ಲಿ ಹಿಡಿದಿರುವ ಮೊಬೈಲ್ ಗೀಳಾಗಿದೆ ಮೊಬೈಲ್ನಲ್ಲಿ ಪಿಡಿಎಫ್ ಬಂದ ತಕ್ಷಣ ಕೆಲವು ಒಂದಿಷ್ಟು ಸುದ್ದಿಗಳನ್ನು ಮಾತ್ರ ಓದಿ ಡಿಲೀಟ್ ಮಾಡಿ ಅಲ್ಲಿಗೆ ಮುಗೀತು ಅದಕ್ಕೆ ಹಿರಿಯರು ಒಂದು ಮಾತನ್ನು ಹೇಳಿದ್ದಾರೆ ಇಂದು ಪತ್ರಿಕೆ ನಾಳೆ ರದ್ದಿ ಎಂದು ಹೇಳಿದ್ದಾರೆ ಎಂದರು ಈ ಸಂದರ್ಭದಲ್ಲಿ ಶಾಸಕರ ಆಪ್ತರಾದ ದಿನಕರ ಜ್ಞಾನ ಮಂಟಪ ಎಜುಕೇಶನ್ ಟ್ರಸ್ಟ್ ಜಿ ಉಮೇಶ್ ಮಾಜಿ ಜಿಲ್ಲಾ ಪಂಚಾಯತ್ ಬಿಜೆಪಿ ಮಂಡಲದ ಅಧ್ಯಕ್ಷರಾದ ನಾಗರಾಜ್ ಬಿಜೆಪಿ ಮುಖಂಡರಾದ ಭೀಮೇಶ್ ಹಾಗೂ ಸನ್ಮಾನಿತರು ಕಲಾವಿದರು ರೈತ ಸಂಘದವರು ಸಮಾಜಸೇವಕರು ವಿವಿಧ ಸಂಘ ಸಂಸ್ಥೆಗಳು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend