ಗಡಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಬೆಸೆಯುವ ಕೆಲಸ ಮಾಡೋಣ ಎಂದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ಗಡಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಬೆಸೆಯುವ ಕೆಲಸ ಮಾಡೋಣ ಎಂದ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.

“ಕಲ್ಯಾಣ ಪಥ ಮತ್ತು ಪ್ರಗತಿ ಪಥ ರಸ್ತೆ ಅಭಿವೃದ್ಧಿ ಯೋಜನೆಗಳು ಜಾರಿ”

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಪೂಜಾರಹಳ್ಳಿ ಗ್ರಾಮದಲ್ಲಿ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ದಿ. 12-07-24 ರಂದು ರಸ್ತೆಯ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದರು. ಖಾನಹೊಸಹಳ್ಳಿ ಹಾಗೂ ಬಿ.ಜಿ.ಕೆರೆ ರಾಷ್ಟ್ರೀಯ ಹೆದ್ದಾರಿಗಳ ಕೊಂಡಿಯನ್ನು ಬೆಸೆಯುವಂತದ್ದನ್ನು ಲೋಕೋಪಯೋಗಿ ಖಾತೆಯ ಸನ್ಮಾನ್ಯ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಾಡೋಣ ಎಂದರು. ಸನ್ಮಾನ್ಯ ಸಚಿವರಿಗೆ ಅಭಿವೃದ್ಧಿಯಿಂದ ಹಿಂದುಳಿದ ರಸ್ತೆಗಳ ಕಳ ಕಳಿ ಹಾಗೂ ಕಾತ್ರಿಕೆಹಟ್ಟಿ ಚಿನ್ನಹಗರಿ ಸೇತುವೆ ಕಾಮಗಾರಿಯನ್ನು ವೀಕ್ಷಣೆ ಮಾಡುವ ಸಿದ್ದತೆಯಲ್ಲಿ ಇದ್ದಾರೆ ಎಂದರು‌.
ಬಿಷ್ಣಹಳ್ಳಿ ಹಾಗೂ ಗುಣಸಾಗರ ಗ್ರಾಮಗಳ ಸಿ. ಸಿ‌. ರಸ್ತೆಗಳ ಭೂಮಿ ಪೂಜೆ ಮಾಡುವಂತದ್ದು ಸಂತಸ ತಂದಿದೆ.
ಕಲ್ಯಾಣ ಪಥ ( 7 ಜಿಲ್ಲೆಗಳು, 41- ತಾಲ್ಲೂಕುಗಳು ), – ಪ್ರಗತಿ ಪಥ ( ಕೆ.ಕೆ.‌ಆರ್. ಡಿ. ಬಿ.)ರಸ್ತೆ ಅಭಿವೃದ್ಧಿ ಯೋಜನೆಗಳು ಜಾರಿಗೆ ಬಂದಿವೆ.


ಉಜ್ಜಿನಿ ಸೇತುವೆ ಕೆ. ಎಂ. ಇ. ಆರ್. ಸಿ. ನಲ್ಲಿರುವುದರಿಂದ ಗಣಿ ಬಾಧೀತ ಪ್ರದೇಶಗಳಿಗೆ ಉಜ್ಜಿನಿ ಒಳಪಡುವುದಿಲ್ಲ. ಹೀಗಾಗಿ ಪಿ.ಡಬ್ಲ್ಯೂ,ಡಿ, ಯಲ್ಲಿ ಮಾಡಲು ಪ್ರಾರಂಭಿಸಲಾಯಿತು ಎಂದರು.
ಉಜ್ಜಿನಿ, ನಿಂಬಳಗೆರೆ ಮತ್ತು ಹಾರಕಬಾವಿ ನಡುವಿನ ರಸ್ತೆಯನ್ನು ನಿರ್ಮಿಸುವ ಪ್ರಕ್ರಿಯೆ ಹಂತದಲ್ಲಿ ಇರುವುದನ್ನು ತಿಳಿಸಿದರು. ‌
ಮುಂದಿನ ದಿನಗಳಲ್ಲಿ ಆಯಾ ಭಾಗದಲ್ಲಿ ಆಕರ್ಷಣೀಯವಾದ ಮತ್ತು ಸುಸಜ್ಜಿತವಾದ ರಸ್ತೆಗಳನ್ನು ನಿರ್ಮಿಸುತ್ತೇವೆ ಎಂದೂ ಹೇಳಿದರು. ‌
ಇದೇ ವೇಳೆ ಆಯಾ ಊರಿನ ಶಾಲೆಗಳ ಕುಂದುಕೊರತೆಗಳನ್ನು ಪರಿಶೀಲಿಸಿ ಪಟ್ಟಿಮಾಡಿಕೊಂಡರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend