ಲೋಕೇಶ್ ನಾಯಕ, ವಾಲ್ಮೀಕಿ ಅಲ್ಲ ನಾಯ್ಡು…!!!

Listen to this article

ಲೋಕೇಶ್ ನಾಯಕ, ವಾಲ್ಮೀಕಿ ಅಲ್ಲ ನಾಯ್ಡು…

ರಾಜಕೀಯ ಮುಖಂಡ
ಲೋಕೇಶ್ ನಾಯಕ ವಾಲ್ಮೀಕಿ ಜಾತಿ ಎಂದು ಸುಳ್ಳು ಹೇಳಿ ತಳಸಮುದಾಯದ ಸೌಲಭ್ಯಗಳನ್ನು ಪಡೆದು ವಾಲ್ಮೀಕಿ ಜನಾಂಗಕ್ಕೆ ದ್ರೋಹ ಎಸಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದು ಬಿಜೆಪಿ ಟಿಕೆಟ್ ಪಡೆದು ಕೂಡ್ಲಿಗಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸ್ಥಳೀಯ ಬಿಜೆಪಿ ಅಭ್ಯರ್ಥಿಯಾಗಿ ನನಗೆ ಟಿಕೆಟ್ ತಪ್ಪಿಸಿ ತಾನೇ ನಿಜವಾದ ವಾಲ್ಮೀಕಿ ಅಭ್ಯರ್ಥಿಎಂದು ಬಿಂಬಿಸಿಕೊಂಡು ಅತಿ ಹೀನಾಯವಾಗಿ ಕೂಡ್ಲಿಗಿ ಕ್ಷೇತ್ರದಲ್ಲಿ ಸೋತಿದ್ದು ಇತಿಹಾಸ. ಇದರಂತೆ ಬೆಂಗಳೂರಿನಲ್ಲಿ 2013 ರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಅನೇಕ ಸವಲತ್ತುಗಳನ್ನು ಪಡೆದಿದ್ದು, ಬೆಂಗಳೂರಿನಲ್ಲಿ ವಾಲ್ಮೀಕಿ ಜಾತಿ ಕೋಟಾದಲ್ಲಿ ಗ್ಯಾಸ್ ಏಜೆನ್ಸಿ ಪಡೆದು, ಇದೇ ಕೋಟಾದಲ್ಲಿ ಕೈಗಾರಿಕಾ ನಿವೇಶನವನ್ನು ಕೂಡ ಪಡೆದು ಲಕ್ಷಾಂತರ ರೂಪಾಯಿಗಳ ಆದಾಯವನ್ನು ಪಡೆದು ಆರ್ಥಿಕವಾಗಿ ಸಬಲರಾಗಿ ವಾಲ್ಮೀಕಿ ಜಾತಿಗೆ ಮೋಸ ಮಾಡಿದ್ದಾನೆ. ಈಗ ಪ್ರಸ್ತುತ ಬೆಂಗಳೂರಿನಲ್ಲಿ ಮತ್ತೆ ನಕಲಿ ಜಾತಿ ಅಡಿಯಲ್ಲಿ ಕಾರ್ಪೊರೇಟರ್ ಸದಸ್ಯನಾಗಲು ಲಾಬಿ ನಡೆಸುತ್ತಿರುವುದು ತಿಳಿದಿದೆ. ಆದರೆ ಈ ಸಂಭಂದ ಕೂಡ್ಲಿಗಿಯ ಮುಖಂಡರಾದ ಎನ್. ನರಸಿಂಹ ಎನ್ನುವವರು ಲೋಕೇಶ್ ನಾಯಕನ ಜಾತಿ ಪ್ರಶ್ನಿಸಿ 10/4/23 ರಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ಇದರಿಂದ ನ್ಯಾಯಾಲಯ ಎಲ್ಲಾ ಕಡತಗಳನ್ನು ಪರಿಶೀಲನೆ ನಡೆಸಿ ಇದು ನಕಲಿ ಜಾತಿ ಪ್ರಮಾಣ ಪತ್ರ ಲೋಕೇಶ್ ನಾಯಕನು ವಾಲ್ಮೀಕಿ ಜಾತಿಯಲ್ಲ, ಈತನ ಮೂಲತಃ ಆಂಧ್ರಪ್ರದೇಶದ ನಾಯ್ಡು ಜಾತಿ ಎಂದು ವಾಲ್ಮೀಕಿ ಜಾತಿ ಪ್ರಮಾಣ ಪತ್ರ ರದ್ದು ಮಾಡಿದೆ. ಇದರಂತೆ ರಾಜ್ಯದ ಬಹುತೇಕರು ನಕಲಿ ಜಾತಿ ಪ್ರಮಾಣ ಪತ್ರ ಪಡೆದು ವಾಲ್ಮೀಕಿ ಜಾತಿಯ ಸೌಲಭ್ಯಗಳನ್ನು ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಅಧ್ಯಕ್ಷರಾದ ನಾನು ನನ್ನ ಹೋರಾಟ ಇಂಥಹ ನಕಲಿ ಜಾತಿ ಹೆಸರಿನಲ್ಲಿ ಸೌಲಭ್ಯಗಳನ್ನು ಪಡಯುತ್ತಿರುವವರ ಮೇಲೆ ಹೋರಾಟ ಮಾಡುತ್ತ ವಾಲ್ಮೀಕಿ ಸಮುದಾಯಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಇದಕ್ಕೆ ಸಮುದಾಯದ ಜಗದ್ಗುರುಗಳ ಆರ್ಶಿವಾದ ಹಾಗೂ ರಾಜ್ಯದ ಎಲ್ಲಾ ವಾಲ್ಮೀಕಿ ಬಂಧುಗಳ ಸಹಕಾರ ಅತ್ಯಗತ್ಯ.ಎಂದು

ಶ್ರೀ ಬಂಗಾರು ಹನುಮಂತು
ಎಸ್ ಟಿ ಮೋರ್ಚಾ ರಾಜ್ಯಾಧ್ಯಕ್ಷರು
ಭಾರತೀಯ ಜನತಾ ಪಾರ್ಟಿ ತಿಳಿಸಿದರು..

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend